ತುಮುಲ್ ನಿರ್ದೇಶಕರಾಗಿ ನನಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಲಭಿಸಿದ್ದು ಮತ್ತೆ ನನ್ನ ಕ್ಷೇತ್ರದ ಹೈನುಗಾರರ ಸೇವೆ ಮಾಡಲು ಅವಕಾಶ ದೊರೆತಿದೆ ಎಂದು ನೂತನ ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ತುಮುಲ್ ನಿರ್ದೇಶಕರಾಗಿ ನನಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಲಭಿಸಿದ್ದು ಮತ್ತೆ ನನ್ನ ಕ್ಷೇತ್ರದ ಹೈನುಗಾರರ ಸೇವೆ ಮಾಡಲು ಅವಕಾಶ ದೊರೆತಿದೆ ಎಂದು ನೂತನ ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದರು. ಮಂಗಳವಾರ ಗ್ರಾಮದೇವತೆ ಶ್ರೀ ದಂಡಿನ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳೊಂದಿಗೆ ತುಮುಲ್ ಕಚೇರಿಗೆ ಪ್ರವೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಗೆದ್ದಿದ್ದೆ, ಆದರೆ ರಾಜಕೀಯ ಹಾಗೂ ಪ್ರಭಾವ ಬಳಸಿ ನನ್ನ ಸೋಲಿಸಿದರು. ಆದರೂ ಸಂವಿಧಾನಕ್ಕೆ ಗೌರವ ನೀಡಿ ನ್ಯಾಯ ದೇವತೆ ನಂಬಿ ನನಗೆ ಮಾಡಿದ ಅನ್ಯಾಯ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದು ಸತತ 14 ತಿಂಗಳ ನಂತರ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಕ್ಕಿದ್ದು ಎದುರಾಳಿಯ ಮನವಿಯನ್ನು ವಜಾಗೊಳಿಸಿ ನನ್ನ ಆಯ್ಕೆಯನ್ನು ಸಿಂಧುಗೊಳಿಸಿದೆ ಇದು . ಈ ಕ್ಷೇತ್ರದ ಹನುಗಾರರಿಗೆ ಸಿಕ್ಕ ಗೆಲುವು ಎಂದರು. ಮಾಜಿ ಪುರಸಭೆ ಸದಸ್ಯ ಜಗಣ್ಣ ಮಾತನಾಡಿ ಕೊಂಡವಾಡಿ ಚಂದ್ರಶೇಖರ್ ಸೋತು ಗೆದ್ದಿದ್ದು ಐತಿಹಾಸಿಕ ಜಯ ದಾಖಲಿಸಿದ್ದಾರೆ. ಹೈನುಗಾರಿಕೆಗೆ ಜಿಲ್ಲೆಯಲ್ಲಿ ಪುನಶ್ಚೇತನ ನೀಡಿದ್ದು, ರೈತರು ಅವರ ಮೇಲಿಟ್ಟಿರುವ ನಂಬಿಕೆಗೆ ಈ ಜಯ ಸಾಕ್ಷಿ ಎಂದರು.ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿದರು. ಮುಖಂಡರಾದ ತಾಪಂ ಮಾಜಿ ಉಪಾಧ್ಯಕ್ಷರಾದ ಸುನಂದಾ ಸಿದ್ದಪ್ಪ, ಲಕ್ಷ್ಮೀನರಸಪ್ಪ , ಪುರಸಭೆ ಮಾಜಿ ಸದಸ್ಯ ನಾರಾಯಣ್, ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗೇಶ್, ವಿಶ್ವಣ್ಣ, ಕಾಂತರಾಜು, ವೆಂಕಿ, ಬೋರ್ ವೆಲ್ ಕುಮಾರ್, ಆನಂದ್, ಸುಮುಖ್ ಚಂದ್ರಶೇಖರ್, ತುಮುಲ್ ತಾಲೂಕು ಮುಖ್ಯಸ್ಥರಾದ ರಂಜಿತ್, ವ್ಯವಸ್ಥಾಪಕ ಲಕ್ಷ್ಮೀಕಾಂತ್, ವಿಸ್ತರಣಾಧಿಕಾರಿ ದಿವಾಕರ್ ಹಾಗೂ ಡೇರಿಗಳ ಪದಾಧಿಕಾರಿಗಳು, ಅಭಿಮಾನಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.