ತಾಕತ್ತು, ದಮ್ಮು ಇಲ್ಲದಿರೋದಕ್ಕೆ ಬಿಜೆಪಿ ಜೊತೆ ಸೇರಿರುವೆ: ಸಚಿವ ಕಾಶಪ್ಪನವರ ಕಿಡಿ

KannadaprabhaNewsNetwork |  
Published : Nov 12, 2026, 02:45 AM IST
ರಕ್ಷಣೆ ಒಳಗಾದ ಪ್ರವಾಸಿಗರ ಜೊತೆ ರಕ್ಷಿಸಿದ ಪೊಲೀಸರು.   | Kannada Prabha

ಸಾರಾಂಶ

ಉತ್ತರ ಕರ್ನಾಟಕದಲ್ಲಿ ಒಂದು ಸೀಟು ಗೆಲ್ಲಿಸಿಕೊಳ್ಳುವ ತಾಕತ್ತು ಇಲ್ಲ ನಿನಗೆ. ತಾಕತ್ತು, ದಮ್ಮು ಇಲ್ಲದಿರೋದಕ್ಕೆ ಬಿಜೆಪಿ ಜೊತೆ ಸೇರಿರುವೆ ಎಂದು ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ವಿಜಯಾನಂದ ಕಾಶಪ್ಪನವರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದಲ್ಲಿ ಒಂದು ಸೀಟು ಗೆಲ್ಲಿಸಿಕೊಳ್ಳುವ ತಾಕತ್ತು ಇಲ್ಲ ನಿನಗೆ. ತಾಕತ್ತು, ದಮ್ಮು ಇಲ್ಲದಿರೋದಕ್ಕೆ ಬಿಜೆಪಿ ಜೊತೆ ಸೇರಿರುವೆ ಎಂದು ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ವಿಜಯಾನಂದ ಕಾಶಪ್ಪನವರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ಯತೀತ ತಳಹದಿ ಮೇಲೆ ಪಕ್ಷ ಕಟ್ಟಿದ್ದೀರಿ. ಜಾತಿ ಆಧರಿಸಿ ಕೋಮುವಾದಿ ಪಕ್ಷದ ಕೈ ಹಿಡಿದಿದ್ದೀರಿ. ಇದು ಸರಿನಾ? ಹೀಗೆ ಮಾತನಾಡೋದನ್ನು ಬಿಡಬೇಕು. ಕುಮಾರಸ್ವಾಮಿ ಬರೆ ಇಂತಹ ರಾಜಕಾರಣ ಮಾಡೋದು. ಡಿ.ಕೆ.ಶಿವಕುಮಾರ್ ಅವರ ಮೇಲೆ ಆರೋಪ ಮಾಡುವುದು. ಸಿಎಂ, ಮಾಜಿ ಸಿಎಂ ಮಧ್ಯೆ ಜಗಳ ಹಚ್ಚೋದು ಇದೆ ನಿಮ್ಮ ಕಾಯಕ ಎಂದು ಟೀಕಿಸಿದರು.

ಜಾತ್ಯತೀತ ಪಕ್ಷ ಎಲ್ಲಿದೆ?:

ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಬಾರದು ಅಂತ ಹೊಯ್ಕೊಂಡೆ. ಈಗ ಡಿ.ಕೆ. ಶಿವಕುಮಾರ್ ಸಿಎಂ ಆಗಿದ್ದರೆ ಸಿದ್ದರಾಮಯ್ಯ ಪರ ಮಾತನಾಡುತ್ತಾರೆ. ಅವರಿಗೆ ಡಿ.ಕೆ. ಅವರು ಕೂಡ ಸಿಎಂ ಆಗಬಾರದಾಗಿತ್ತು. ಸಿದ್ದರಾಮಯ್ಯನವರೂ ಸಿಎಂ ಆಗಬಾರದಿತ್ತು. 2028ಕ್ಕೆ ಇವರ ಹಣೆಬರ ಜನ ತೋರಿಸುತ್ತಾರೆ ಎಂದ ಕಾಶಪ್ಪನವರ, ಇವಾಗ 18 ಸೀಟ್ ಉಳಿದಿದ್ದವಲ್ಲ. 18ರಲ್ಲಿ ಎಷ್ಟು ಉಳಿಯುತ್ತವೆ ನೋಡೋಣ. ವೈಯಕ್ತಿಕವಾಗಿ ತಮ್ಮ ಪಕ್ಷದ ಮೇಲೆ ಚುನಾವಣೆಗೆ ನಿಲ್ಲಿ ಅಂತ ಹೇಳಿ, ಹಿಂದೆ ಇವರದು ಒಂದು ಪಕ್ಷ ಇತ್ತಲ್ವಾ. ಜಾತ್ಯತೀತ ಪಕ್ಷ ಅಂತ. ಈಗ ಎಲ್ಲಿದೆ? ಜಾತ್ಯತೀತ ಪಕ್ಷ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದ್ಮೇಲೆ ಎಲ್ಲರೂ ಬಿಟ್ಟು ಹೋಗಿದ್ದಾರೆ. ಜಾತ್ಯತೀತ ದಳದಲ್ಲಿ ಯಾರು ಉಳಿದಿದ್ದಾರೆ? ಜೆಡಿಎಸ್‌ನಲ್ಲಿ ಸೆಕ್ಯುಲರ್ ಎಲ್ಲಿದೆ ಎಂದು ಲೇವಡಿ ಮಾಡಿದರು.

ಸ್ಟಿಂಗ್ ವಿಚಾರದಲ್ಲಿ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರ ನಡುವೆ ನಡೆದ ಚರ್ಚೆ ವಿಚಾರ ಪ್ರಸ್ತಾಪಿಸಿದ ಸಚಿವರು, ನಿಜವಾಗಿ ಅವರು ಅನ್ಯೋನ್ಯವಾಗಿದ್ದಾರೆ. ಅವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಬಿಜೆಪಿಯವರು ಮತ್ತು ಮಿಸ್ಟರ್ ಕುಮಾರಸ್ವಾಮಿ ಇದೆಲ್ಲ ಮಾಡ್ತಿದ್ದಾರೆ ಎಂದರು.

ಕುಮಾರಸ್ವಾಮಿ ನನಗೆ ಅವನು ಇವನು, ಬಾಗಲಕೋಟೆಯವನು ಅಂತ ಮಾತಾಡ್ತಾನೆ. ಬಾಗಲಕೋಟೆಗೆ ಬಾ ನಾ ತೋರಿಸ್ತೀನಿ. ಬಾಗಲಕೋಟೆಯವನು ಅವನು ಅಂತಿಯಲ್ಲ. ನಾನೇನು ಕರ್ನಾಟಕದಲ್ಲಿ ಇಲ್ಲವಾ? ನಾನು ಅವನಾ ದೇವೇಗೌಡನ ಮಗನಾ ಅಂದರೆ ಹೇಗೆ ಆಗುತ್ತೆ. ಅರ್ಥ ಮಾಡಿಕೊಂಡು ಮಾತನಾಡು. ನಿನಗೆ ಎಷ್ಟು ಗೌರವ ಇದೆ ನನಗೂ ಅಷ್ಟೇ ಗೌರವ ಇದೆ. ನೀನು ರಾಜಕೀಯ ಹಿನ್ನೆಲೆಯಿಂದ ಬಂದಿದಿಯಾ. ನಾನು ಸಹ ರಾಜಕೀಯ ಹಿನ್ನೆಲೆಯಿಂದ ಬಂದಿದ್ದೇನೆ. ನೀನು ಗೌರವ ಕೊಟ್ಟು ಮಾತನಾಡಿದರೆ ನಾವು ಗೌರವ ಕೊಟ್ಟು ಮಾತನಾಡುತ್ತೇವೆ. ಅವನು ಇವನು ಅಂದ್ರೆ ನಾನು ಅವನು ಇವನು ಅಂತಿನಿ. ನಿನಗೆ ಎಷ್ಟು ದಮ್ಮು ತಾಕತ್ತು ಇದೆಯೋ, ಅಷ್ಟು ದಮ್ಮು ತಾಕತ್ತು ನಮ್ಮ ಬಳಿಯೂ ಇದೆ. ಒಂದು ಸೀಟು ಗೆಲ್ಲೋದಕ್ಕೆ ಆಗೋದಿಲ್ಲ. ಬಾರೋ ಇಲ್ಲಿ ಬಾಗಲಕೋಟೆ ವಿಜಯಪುರಕ್ಕೆ ತೋರಿಸ್ತೀವಿ ನಾವು. ಒಂದು ಸೀಟ್ ಆದರೂ ಗೆಲ್ಲೋದಕ್ಕೆ ಆಗುತ್ತಾ ನಿನ್ನ ಹಣೆಬರಹಕ್ಕೆ ಕಾಶಪ್ಪನವರ ಅವರು ಏಕವಚನದಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌