ಚುನಾವಣೆಯಲ್ಲಿ ಸೋತಿದ್ದೇನೆ, ಸತ್ತಿಲ್ಲ : ರಾಜೂಗೌಡ

KannadaprabhaNewsNetwork |  
Published : Oct 25, 2026, 01:15 AM IST
ಮಾಜಿ ಸಚಿವ ರಾಜೂಗೌಡ ಪ್ರತಿಭಟನೆಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಚುನಾವಣೆಯಲ್ಲಿ ಸೋತಿರುವೆ, ಆದರೆ ಸತ್ತಿಲ್ಲ. ರೈತರಿಗೆ ಸಮಸ್ಯೆಯಾದರೆ ಕೈಕಟ್ಟಿ ಕುಳಿತುಕೊಳ್ಳುವದಿಲ್ಲ ಎಂದು ಮಾಜಿ ಸಚಿವ ರಾಜೂಗೌಡ ಕಿಡಿ ಕಾರಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಚುನಾವಣೆಯಲ್ಲಿ ಸೋತಿರುವೆ, ಆದರೆ ಸತ್ತಿಲ್ಲ. ರೈತರಿಗೆ ಸಮಸ್ಯೆಯಾದರೆ ಕೈಕಟ್ಟಿ ಕುಳಿತುಕೊಳ್ಳುವದಿಲ್ಲ ಎಂದು ಮಾಜಿ ಸಚಿವ ರಾಜೂಗೌಡ ಕಿಡಿ ಕಾರಿದರು.

ವಾರಾಬಂದಿ ರದ್ದುಪಡಿಸಿ, ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ಸತತವಾಗಿ ನ.30 ರವರೆಗೆ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ಸಮೀಪದ ದೇವಾಪುರ ಕ್ರಾಸನಲ್ಲಿ ಬೀದರ್- ಬೆಂಗಳೂರು ರಸ್ತೆ ತಡೆದು ಬೃಹತ್ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆ. ಸ್ಥಳಿಯ ಶಾಸಕರು ಸಲಹಾ ಸಮಿತಿಯ ಸಭೆಯಲ್ಲಿ ಮೂಕರಾಗಿ ತಲೆ ಅಲ್ಲಾಡಿಸಿ ಬಂದು ರೈತರಿಗೆ ಸತತವಾಗಿ ನೀರು ಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ಸತ್ಯ ಯಾವತ್ತಿಗೂ ಮುಚ್ಚಿಡಲು ಸಾಧ್ಯವಿಲ್ಲ. ರೈತರಿಗೆ ಮಾಡಿದ ಆ ಮೋಸ ಆ ದೇವರು ಕೂಡಾ ಕ್ಷಮಿಸುವದಿಲ್ಲ ಎಂದು ಶಾಸಕರ ವಿರುದ್ಧ ಹರಿಹಾಯ್ದರು.

ನಮ್ಮ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಗೋವಿಂದ ಕಾರಜೋಳ ಅವರು, ನೀರಾವರಿ ಮಂತ್ರಿಯಾಗಿದ್ದಾಗ ಸಲಹಾ ಸಮಿತಿ ಸಭೆ ಮುಗಿದ ಮೇಲೆ ರೈತರಿಗೆ ಆಗುವ ಸಮಸ್ಯೆ ಬಗ್ಗೆ ಗಮನಕ್ಕೆ ತಂದು ಸತತ ಕಾಲುವೆಗೆ ನೀರು ಹರಿಸಿ ರೈತರ ಹಿತ ಕಾಪಾಡುವ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ರೈತರ ವಿಷಯದಲ್ಲಿ ರಾಜಕೀಯ ಮಾಡುವದನ್ನು ಬಿಟ್ಟು ಸತತವಾಗಿ ಕಾಲುವೆಗೆ ‌ನೀರು ಹರಿಸಬೇಕೆಂದು ಒತ್ತಾಯಿಸಿದರು.

* ಮರಳು ಮಾರಾಟದಲ್ಲಿ ಶಾಸಕ ಬಿಜಿ : ಕ್ಷೇತ್ರದ ಶಾಸಕ ಹಾಗೂ ಸಹೋದರರು ಮರಳು ಮಾರಾಟದಲ್ಲಿ ಬಿಜಿದಿ ಇದ್ದು, ರೈತರ ಹಾಗೂ ಕ್ಷೇತ್ರದ ಜನರ ಸಮಸ್ಯೆಗೆ ಗುಡ್‌ಬೈ ಹೇಳಿದ್ದಾರೆಂದು ವ್ಯಂಗ್ಯವಾಡಿದ ರಾಜೂಗೌಡ, ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರು ರಾಜಕೀಯವನ್ನು ರಾಜಕೀಯ ತರಹ ಮಾಡುತ್ತಿದ್ದರು. ಅದನ್ನ ಬಿಟ್ಟು ನಿಮ್ಮ ಹಾಗೆ ಕ್ಷೇತ್ರದ ಅಭಿವೃದ್ಧಿ ಮಾಡದೆ, ಮರಳು ಮಾರಾಟ ಎಂದೂ ಮಾಡಿಲ್ಲ. ಅನುಕಂಪದ ಅಲೆಯಲ್ಲಿ ಶಾಸಕರಾಗಿದ್ದೀರಿ, ರೈತರ ಸಮಸ್ಯೆಗೆ ಹಾಗೂ ರೈತರ ಕೆಲಸ ಮಾಡಿ. ಅದು ಬಿಟ್ಟು, ರೈತರು ಕಾಲುವೆಗೆ ನೀರು ಬಿಡಿಸಿ ಎಂದು ಕೇಳಿದಾಗ ನಾನೇ ಬಂದು ಗೇಟ್ ಓಪನ್ ಮಾಡಬೇಕಾ ಎಂದು ಹಾರಿಕೆ ಉತ್ತರ ಕೊಟ್ಟು ರೈತರೊಬ್ಬರಿಗೆ ಧಮ್ಕಿ ಹಾಕುದನ್ನು ಬಿಟ್ಟು ರೈತರ ಪರವಾನಗಿ ಕೆಲಸ ಮಾಡಿ ಎಂದು ಹರಿಹಾಯ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಗೆದ್ದ ಸಿರಿಗೆರೆಯ ಎಂಟೆಕ್ ಪದವೀಧರ!
ಎನ್‌ಸಿಡಿ ತಪಾಸಣೆಯಲ್ಲಿ ಚಿಕ್ಕಮಗಳೂರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಯು.ಟಿ. ಖಾದರ್ ಅಭಿನಂದನೆ