ಮತದಾರರ ಆಶೀರ್ವಾದದಿಂದ ಹಿಂದೆ ಲೋಕೋಪಯೋಗಿ ಸಚಿವನಾಗಿದ್ದಾಗ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಅವರಿಗೆ ರಾಜ್ಯದ ಅಭಿವೃದ್ಧಿ ಮಾಡಲಿಕ್ಕೆ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಪ್ರತಿ ಶಾಸಕರಿಗೆ ಕೇವಲ ರು.10 ಕೋಟಿ ಅನುದಾನ ನೀಡಿದೆ. ಇಷ್ಟರಲ್ಲಿ ಅಭಿವೃದ್ಧಿ ಹೇಗೆ ಸಾಧ್ಯವೆಂದು ಮತಕ್ಷೇತ್ರದ ಶಾಸಕ ಸಿ. ಸಿ. ಪಾಟೀಲ ಹೇಳಿದರು.
ನರಗುಂದ:ಮತದಾರರ ಆಶೀರ್ವಾದದಿಂದ ಹಿಂದೆ ಲೋಕೋಪಯೋಗಿ ಸಚಿವನಾಗಿದ್ದಾಗ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಅವರಿಗೆ ರಾಜ್ಯದ ಅಭಿವೃದ್ಧಿ ಮಾಡಲಿಕ್ಕೆ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಪ್ರತಿ ಶಾಸಕರಿಗೆ ಕೇವಲ ರು.10 ಕೋಟಿ ಅನುದಾನ ನೀಡಿದೆ. ಇಷ್ಟರಲ್ಲಿ ಅಭಿವೃದ್ಧಿ ಹೇಗೆ ಸಾಧ್ಯವೆಂದು ಮತಕ್ಷೇತ್ರದ ಶಾಸಕ ಸಿ. ಸಿ. ಪಾಟೀಲ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಹುಣಶಿಕಟ್ಟಿ ಗ್ರಾಮದಲ್ಲಿ ನಿರ್ಮಿಸಲಾದ ವಿವೇಕ ಯೋಜನೆಯ ನೂತನ ಎರಡು ಶಾಲಾ ಕೊಠಡಿಗಳು, ಸಾಂಸ್ಕೃತಿಕ ಭವನ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ ನಂತರ ಮಾತನಾಡಿ, ಮತಕ್ಷೇತ್ರದಲ್ಲಿ ಮಾಜಿ ಜನಪ್ರತಿನಿಧಿಯೊಬ್ಬರ ಕಾಟಕ್ಕೆ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡಲಿಕ್ಕೆ ಆಗುತ್ತಿಲ್ಲ. ಅಭಿವೃದ್ಧಿಗೆ ಅನುದಾನ ತರುವಲ್ಲಿ ನಾವು ಪ್ರಯತ್ನ ನಡೆಸಿದರೆ ಅದಕ್ಕೆ ಅವರು ಅಡೆತಡೆ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾ ಮುಳ್ಳೂರ, ಉಪಾಧ್ಯಕ್ಷೆ ಶಾಂತವ್ವ ದೇವಕ್ಕಿ, ಎಚ್. ಬಿ. ಜಡಿಯಪ್ಪಗೌಡ್ರ, ರಾಚಪ್ಪ ಅಳಗವಾಡಿ, ಮಲ್ಲಪ್ಪ ಮೇಟಿ, ನವೀನ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ದ್ಯಾಮಪ್ಪ ಮುಳ್ಳೂರ, ಸುಭಾಸಯ್ಯ ಹಿರೇಮಠ, ಗುರುನಾಥ ಹುಡೇದಮನಿ, ಆನಂದ ಮಲಸಮುದ್ರ, ಬಸವರಡ್ಡಿ ಕಾಮರಡ್ಡಿ, ಸುಭಾಸ ದೇವಕ್ಕಿ, ತಾಪಂ ಇಓ ಎಸ್. ಕೆ. ಇನಾದಾರ ಹಾಗೂ ನಿರ್ಮಿತಿ ಕೇಂದ್ರ ಅಧಿಕಾರಿಗಳು ಸೇರಿದಂತೆ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.