ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೋಬಳಿ ಮಟ್ಟದ ಅರ್ಜಿಗಳು
ಇದರಲ್ಲಿ ಕಸಬಾ ಹೋಬಳಿಯಲ್ಲಿ 634 ಅರ್ಜಿಗಳು ಫಾರಂ 53ರಲ್ಲಿ ಬಂದಿದೆ. ನಂದಿಹೋಬಳಿಯಲ್ಲಿ 1048 ಬಂದಿದೆ. ಮಂಡಿಕಲ್ಲುಹೋಬಳಿಯಲ್ಲಿ 548 ಬಂದಿದ್ದು, ಫಾರಂ 57 ನಲ್ಲಿ ಕಸಬಾ ಹೋಬಳಿಯಲ್ಲಿ 2909 ನಂದಿ ಹೋಬಳಿಯಲ್ಲಿ 3786 .ಮಂಡಿಕಲ್ಲು ಹೋಬಳಿಯಲ್ಲಿ 4819 ಮಂಚೆನಹಳ್ಳಿ ಫಾರಂ 53ರಲ್ಲಿ 512 ಮತ್ತು ಫಾರಂ 57. 2656 ಅರ್ಜಿ ಗಳು ಬಂದಿವೆ. ಫಾರಂ 53 ಮತ್ತು ಫಾರಂ 57 ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಕೊಡಬೇಕು ಜಮೀನು ಕೊಡಬೇಕಾಗಿದೆ . ನಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆ. ದಲ್ಲಾಳಿ ಮಧ್ಯ ವರ್ತಿಗಳಿಗೆ ಯಾರು ಕೂಡ ನಂಬ ಬೇಡಿ ರೈತರಿಗೆ ಮನವಿ ಮಾಡಿದರು.ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಪ್ರದೀಪ್ ಈಶ್ವರ್, ನಾನು ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ , ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ, ಪಕ್ಷ ಏನು ಹೇಳುತ್ತೊ ಅದು ಮಾಡುತ್ತೇನೆ. ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ ಎಂದರು.ಒಂದು ವೇಳೆ ಸಚಿವ ಸ್ಥಾನ ನೀಡದೆ ನಮ್ಮ ಸ್ನೇಹಿತರಿಗೆ ಕೊಟ್ಟರೂ ನಾನು ಅವರ ಪ್ರಮಾಣ ವಚನಕ್ಕೆ ಹೋಗುತ್ತೇನೆ. ಡಾ.ಎಂ.ಸಿ.ಸುಧಾಕರ್, ಎಸ್.ಎನ್.ಸುಬ್ಬಾರೆಡ್ಡಿ ಇವರುಗೆ ಯಾರಿಗೆ ಸಚಿವ ಸ್ಥಾನ ಸಿಕ್ಕಿದರೂ ಜೊತೆಯಾಗಿ ಕೆಲಸ ಮಾಡುತ್ತೇವೆ. ಡಾ.ಎಂ.ಸಿ.ಸುಧಾಕರ್ ಅವರನ್ನೇ ಮುಂದುವರಿಸಿದರೆ, ಅವರಿಗೆ ನಾವು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು ಈ ವೇಳೆ ತಹಸೀಲ್ದಾರ್ ರಶ್ಮಿ, ಮಂಚೇನಹಳ್ಳಿ ತಹಸೀಲ್ದಾರ್ ಪೂರ್ಣಿಮಾ, ದರಕಾಸ್ತು ಸಮಿತಿ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂಧಿ ಇದ್ದರು.