ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ಯೂನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆಯ ೫ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿರುವ ಎಲ್ಲರೂ ಒಳಿತನ್ನು ಮಾಡಿದಾಗ ದೇಶ ಅಭಿವೃದ್ಧಿಯಾಗುತ್ತದೆ. ಸಮಾನತೆ ಎಂಬುದು ಇಳಕಲ್ಲ ನಗರದ ಕುಲಕರ್ಣಿ ಪೇಟೆಯಲ್ಲಿದೆ. ಜಾತ್ಯತೀತ ತಳಹದಿಯ ಮೇಲೆ ಜಾತಿ, ಮತ, ಪಂಥ ಎಣಿಸದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನಡೆದುಕೊಳ್ಳುತ್ತಿದ್ದಾರೆ. ಸಮಾಜ ಸೇವಕ ಎಂ.ಡಿ.ಭಾಗವಾನ ವಿಶ್ವಗುರು ಬಸವಣ್ಣನವರ ತತ್ವದಂತೆ ಕಾಯಕ ದಾಸೋಹ ಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.ನಗರದ ೫,೦೦೦ ಜನರಿಗೆ ಹೋಳಿಗೆ ಊಟ ಮಾಡಿಸಿದ ಎಂ.ಡಿ.ಬಾಗವಾನ ಅವರಿಗೆ ಯೂನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ ವತಿಯಿಂದ ದಾಸೋಹ ರತ್ನಶ್ರೀ ೨೦೨೬ ಪ್ರಶಸ್ತಿ ನೀಡಿ ಪೂಜ್ಯರು, ಸಚಿವರು ವೇದಿಕೆಯಲ್ಲಿದ್ದ ಗಣ್ಯರು ಗೌರವಿಸಿ ಸತ್ಕರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಎಸ್. ಕಾಶಪ್ಪನವರಿಗೆ ಸಮಾಜ ಸೇವಕ ಎಂ.ಡಿ. ಬಾಗವಾನ ಚಿನ್ನದ ಕಡಗ ತೊಡಿಸಿ ಗೌರವಿಸಿದರು.
ಡಾ.ಗುರುಮಹಾಂತ ಶ್ರೀಗಳು, ನಂದವಾಡಗಿ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾಜ ಸೇವಕ ಮಹಾಂತೇಶ ಹತ್ತಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅಶೋಕ ಚಲವಾದಿ, ಪತ್ನಿ ಸವಿತಾ ಚಲವಾದಿ, ಅವಿನಾಶ ಅಕ್ಕಿ ಪತ್ನಿ ಅದಿತಿ ಅಕ್ಕಿ, ಡಾ.ವಿಠಲ ಶಾವಿ ಪತ್ನಿ ಡಾ.ಶೋಭಾ ಶಾವಿ, ಸಮಾಜ ಸೇವಕ ವಿಠ್ಠಲ ಜಕ್ಕಾ ಪತ್ನಿ ಗೀತಾ ಜಕ್ಕಾ ಅವರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಪ್ರತಿಭೆಗಳಿಗೆ ಸನ್ಮಾನಿಸಲಾಯಿತು.