)
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ ಶನಿವಾರ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ. ಪ್ರತಿವಾದಿಗಳಾದ ಮಹಾದೇವಿ ಮೇಟಿ ಮದುವೆಯ ನಂತರ ರೇಖಾ ರಾಜಕುಮಾರ ಯರಗಲ್, ವಿಠ್ಠಲ್ ಆರ್.ಬಲಕುಂದಿ, ಪ್ರವೀಣ್ ಜಿ. ಯಳ್ಳಿಗುತ್ತಿ ಹಾಗೂ ಅವರ ಬೆಂಬಲಿಗರು, ಅನುಯಾಯಿಗಳು ಅಥವಾ ಏಜೆಂಟರು, ಹೊಳೆಬಸಪ್ಪ ಷಣ್ಮುಖಪ್ಪ ಶೆಟ್ಟರ್ ವಿರುದ್ಧ ಯಾವುದೇ ಸುಳ್ಳು, ಅಶ್ಲೀಲ, ಅವಹೇಳನಕಾರಿ ಅಥವಾ ಮಾನಹಾನಿಕರ ಪೋಸ್ಟ್ಗಳು, ಲೇಖನಗಳು ಅಥವಾ ಭಾವಚಿತ್ರಗಳನ್ನು ಯಾವುದೇ ಮುದ್ರಣ, ಎಲೆಕ್ಟ್ರಾನಿಕ್ಸ್ ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೃಷ್ಟಿಸುವುದು, ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದೆ ಎಂದು ವಕೀಲರಾದ ರವಿರಾಜ ಹಟ್ಟಿ ತಿಳಿಸಿದ್ದಾರೆ.
ಸಾರ್ವಜನಿಕರು, ಗ್ರೂಪ್ ಅಡ್ಮಿನ್ಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ಯಾವುದೇ ಮಾನಹಾನಿಕರ ವಿಷಯ ಹಂಚಿಕೊಳ್ಳುವುದು, ಫಾರ್ವರ್ಡ್ ಮಾಡುವುದು ಅಥವಾ ಪ್ರಸಾರಕ್ಕೆ ಸಹಕರಿಸುವುದು ನ್ಯಾಯಾಲಯದ ಆದೇಶದ ನೇರ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಈ ಆದೇಶ ಉಲ್ಲಂಘಿಸುವ ಅಥವಾ ಉಲ್ಲಂಘನೆಗೆ ನೆರವಾಗುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಯಾವುದೇ ಮುನ್ಸೂಚನೆ ಇಲ್ಲದೆ ತಕ್ಷಣವೇ ಸಿವಿಲ್ ನ್ಯಾಯಾಂಗ ನಿಂದನೆ ಹಾಗೂ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಕೀಲರಾದ ರವಿರಾಜ ಹಟ್ಟಿ ತಿಳಿಸಿದ್ದಾರೆ.