ಪಾಂಡವಪುರ: ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಸರ್ಕಾರರ ಅಥವ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಎಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಕೆಆರ್ ಎಸ್ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದರು. ಕೈಕುಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕಾವೇರಿಪುರ ಸೇರಿದಂತೆ ಇತರೆ ಗ್ರಾಮಗಳ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಗಣಿಗಾರಿಕೆ ನಡೆಸಲು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಾಕಷ್ಟು ಸ್ಥಳಗಳಿವೆ. ಅಲ್ಲಿ ನಡೆಸಲಿ, ಆದರೆ, ಕೆಆರ್ ಎಸ್ ಡ್ಯಾಂ ಕಟ್ಟಲು ಸಾಧ್ಯವಿಲ್ಲ. ಡ್ಯಾಂನಿಂದ ಲಕ್ಷಾಂತರ ರೈತರ ಕೃಷಿ ಚಟುವಟಿಕೆಗೆ ಹಾಗೂ ಮಂಡ್ಯ, ಮೈಸೂರು, ಬೆಂಗಳೂರು ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಹಾಗಾಗಿ ನಮಗೆ ಡ್ಯಾಂ ರಕ್ಷಣೆಯೇ ಮುಖ್ಯವಾಗಿದೆ ಎಂದರು.
ಬೇರೆ ರಾಜ್ಯಗಳಿಂದ ಭೂ ವಿಜ್ಞಾನಿಗಳನ್ನು ಕರೆಸಿ ಬೇಬಿಬೆಟ್ಟದ ವ್ಯಾಪ್ತಿ ನಡೆಸುವ ಟ್ರಯಲ್ ಬ್ಲಾಸ್ಟ್ ಮೇಲೆ ನಮಗೆ ನಂಬಿಕೆ ಇಲ್ಲ. ಈ ಹಿಂದೆ ಪುಣೆ ಹಾಗೂ ಜಾಖಾಂಡ್ ನಿಂದ ಭೂವಿಜ್ಞಾನಿಗಳು ನಡೆಸಿ ಟ್ರಯಲ್ ಬ್ಲಾಸ್ಟ್ ವರದಿ ನಮಗೆ ವ್ಯತಿರಕ್ತವಾಗಿ ಬಂದಿದೆ. ಹಾಗಾಗಿ ಕೋರ್ಟ್ ನಿಷೇಧಿಸಿರುವ 20 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಟ್ರಯಲ್ ಬ್ಲಾಸ್ಟ್ ಮಾಡಬೇಡಿ. ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸರಕಾರದ ಬೊಕ್ಕಸ ಖಾಲಿ ಕಾಂಗ್ರೆಸ್ ಸರ್ಕಾರ ಬೊಕ್ಕಸ ಖಾಲಿಯಾಗಿದೆ. ಮೇಲುಕೋಟೆ ಅಭಿವೃದ್ಧಿಗೆ ಬಿಜೆಪಿ ಸರಕಾರ ಬಿಡುಗಡೆಮಾಡಿದ್ದ ಅನುದಾನವನ್ನು ವಾಪಸ್ಸುಪಡೆದುಕೊಂಡಿದೆ ಎಂದು ಕಿಡಿಕಾರಿದರು.
ವಿಶ್ವವಿಖ್ಯಾತ ವೈರಮುಡಿ ಉತ್ಸವಕ್ಕೆ ಪ್ರತಿವರ್ಷದ ಸರಕಾರದಿಂದ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗಿನ ಸರಕಾರ ಕೊಟ್ಟಿರುವ ಅನುದಾನವನ್ನು ವಾಪಸ್ ಪಡೆದಿದೆ. ಸರಕಾರದ ಬೊಕ್ಕಸ ಖಾಲಿಯಾಗಿ ದಿವಾಳಿಯಾಗಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ ಎಂದು ತಿಳಿಸಿದರು.ಈಗಿನ ಶಾಸಕರು ಹೊಸ ಸರಕಾರದಿಂದ ಯಾವುದೇ ಅನುದಾನ ತಂದು ಕ್ಷೇತ್ರ ಕ್ಕೆ ನೀಡಲು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಹಳೇ ಸರಕಾರದಲ್ಲಿ ಮಂಜೂರಾಗಿದ್ದ ಅನುದಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹರಿಹಾಯ್ದ ಅವರು ವೈರಮುಡಿ ಉತ್ಸವಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಉತ್ಸವ ನಡೆಸಬೇಕು ಒತ್ತಾಯಿಸಿದರು.ಮೇಲುಕೋಟೆ ಅಭಿವೃದ್ದಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಏಕಾಏಕಿ ಕಡ್ಡಾಯದ ರಜೆ ಮೇಲೆ ಕಳುಹಿಸಲಾಗಿದೆ. ಇಓ ಅವರನ್ನು ಯಾವ ಕಾರಣಕ್ಕೆ ಬದಲಾಹಿಸಲಾಗಿದೆ ಎಂದು ಸ್ಪಷ್ಟನೆ ನೀಡಬೇಕು. ಮೇಲುಕೋಟೆ ಪ್ರಾಧಿಕಾರದಲ್ಲಿ ಸಾಕಷ್ಟು ಭ್ರಷ್ಟಚಾರ, ಅವ್ಯವಹಾರಗಳು ನಡೆಯುತ್ತಿವೆ. ಅಲ್ಲಿನ ಅನುಮತಿ ಇಲ್ಲದೆ ಯಾವುದೇ ನೇಮಕಾತಿ ನಡೆದರು ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ್, ಮುಂಖಡರಾದ ಕೆ.ಎಲ್.ಆನಂದ್, ಧನಂಜಯ, ರಾಜಕುಮಾರ್, ನವೀನ್‌ಕುಮಾರ್, ಬಾಲಚಂದ್ರು, ಇದ್ದರು.