ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಸಂಕಷ್ಟದ ಪರಿಸ್ಥಿತಿಯಲ್ಲಿ ಅರಕಲಗೂಡು ತಾಲೂಕಿನ ಜನರು ಆತ್ಮವಿಶ್ವಾಸ ತುಂಬಿದ ಹೆಗ್ಗಳಿಕೆಗೆ ಪಾತ್ರವಾಗಿದ್ದೀರಿ. ಅದನ್ನು ಎಂದಿಗೂ ದೇವೇಗೌಡರ ಕುಟುಂಬ ಮರೆಯುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ದೇವೇಗೌಡರು, ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ನೂರಾರು ಕೋಟಿರೂ ಹಣವನ್ನು ನೀಡಿ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಮುಂದೆಯೂ ಒಳ್ಳೆಯ ಕಾಲಬರುತ್ತದೆ.ಇಲ್ಲಿನ ಶಾಸಕರು,ನಾನು ಜತೆಗೂಡಿ ಮತ್ತೊಷ್ಟು ಅಭಿವೃದ್ಧಿಯನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಸಂಕಷ್ಟದ ಪರಿಸ್ಥಿತಿಯಲ್ಲಿ ಅರಕಲಗೂಡು ತಾಲೂಕಿನ ಜನರು ಆತ್ಮವಿಶ್ವಾಸ ತುಂಬಿದ ಹೆಗ್ಗಳಿಕೆಗೆ ಪಾತ್ರವಾಗಿದ್ದೀರಿ. ಅದನ್ನು ಎಂದಿಗೂ ದೇವೇಗೌಡರ ಕುಟುಂಬ ಮರೆಯುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.ಪಟ್ಟಣದ ಶಿವದೇವ ಮಂಗಳ ಮಂದಿರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡರು, ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ನೂರಾರು ಕೋಟಿರೂ ಹಣವನ್ನು ನೀಡಿ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಮುಂದೆಯೂ ಒಳ್ಳೆಯ ಕಾಲಬರುತ್ತದೆ.ಇಲ್ಲಿನ ಶಾಸಕರು,ನಾನು ಜತೆಗೂಡಿ ಮತ್ತೊಷ್ಟು ಅಭಿವೃದ್ಧಿಯನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕರಾದ ಎ.ಮಂಜು ಅವರು ಮಾತನಾಡಿ, ನಾನು ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಾಸಕನಾದ ಮೇಲೆ ಪಕ್ಷದ ಬಲವರ್ಧನೆಗೆ ನಿತ್ಯವೂ ಶ್ರಮಿಸುತ್ತಾ ಬರುತ್ತಿರುವೆ. ಪಕ್ಷ ಮತ್ತು ನನ್ನ ಮೇಲೆ ಇಟ್ಟಿರುವ ಮತದಾರರ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸುವುದಿಲ್ಲ. ಇಳಿ ವಯಸ್ಸಿನಲ್ಲಿಯೂ ನಮ್ಮ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ಸಂಘಟನೆಯಲ್ಲಿ ನಿರತವಾಗಿದ್ದಾರೆ.ನಾವು ಕೂಡ ಅವರಿಗಿಂತ್ತ ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಬೇಕಿದೆ. 2028ಕ್ಕೆ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತಾ, ರೇವಣ್ಣ ಮಂತ್ರಿಯಾಗುವುದು ಕೂಡ ಅಷ್ಟೇ ಖಚಿತವಾಗಿದೆ. ಹಾಸನದಲ್ಲಿ ಜ.24ರಂದು ನಡೆಯುವ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸುತ್ತಿದ್ದಾರೆ. ಅಂದಿನ ಕಾರ್ಯಕ್ರಮಲ್ಲಿ ಈ ಕ್ಷೇತ್ರದಿಂದ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಇತಿಹಾಸ ನಿರ್ಮಿಸಬೇಕಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ದೊಡ್ಡಮಟ್ಟದಲ್ಲಿ ಸಾಧನೆ ಮಾಡಬೇಕಿದೆ. ಇದು ಮುಂದಿನ ಚುನಾವಣೆಗೆ ಬಲ ನೀಡಲಿದೆ ಎಂದರು.ವೇದಿಕೆಯಲ್ಲಿ ಜೆಡಿಎಸ್ ಮುಖಂಡರಾದ ನರಸೇಗೌಡ, ಡಾ.ಮೋಹನ್, ರಾಜೇಗೌಡ, ಮುದ್ದನಹಳ್ಳಿ ರಮೇಶ್, ಹೊನ್ನವಳ್ಳಿ ಸತೀಶ್ ಮುಂತಾದವರು ಉಪಸ್ಥಿತರಿದ್ದರು.
======
ಫೋಟೋ:
ಅರಕಲಗೂಡಿನಲ್ಲಿ ನಡೆದ ಜೆಡಿಎಸ್ ಪಕ್ಷದ ಮುಖಂಡರು,ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಮಾಜಿ ಸಚಿವ,ಹಾಲಿ ಶಾಸಕ ಎಚ್. ಡಿ. ರೇವಣ್ಣ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.