ದಾಬಸ್‍ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ತಾರತಮ್ಯವಿಲ್ಲದೆ ಒತ್ತು ನೀಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಗುಣಮಟ್ಟದಲ್ಲಿ ರಾಜೀ ಇಲ್ಲ: ನಾನು ಶಾಸಕನಾದ ನಂತರ ದಶಕಗಳಿಂದ ಸೋಲೂರು ಜನರು ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ಮುಕ್ತಿ ನೀಡಲು ಹಗಲಿರುಳು ಶ್ರಮಿಸುತ್ತಿದ್ದೇನೆ. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ನೆಲಮಂಗಲ ತಾಲೂಕಿನ ಮೂರು ಹೋಬಳಿಗಳಂತೆ ಸೋಲೂರು ಹೋಬಳಿಗೂ ನನ್ನ ಮೊದಲ ಆದ್ಯತೆ ಆಗಿರುತ್ತದೆ ಎಂದರು.
ಸೋಲೂರಿಗೆ 500 ಮನೆ:ಸೋಲೂರು ಹೋಬಳಿಗೆ 500 ಮನೆಗಳನ್ನು ನೀಡಲಾಗಿದ್ದು ಹಳೆ ಮನೆ ಬಿದ್ದು ಹೊಸ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸ್ಥಳೀಯ ಮುಖಂಡರು ಇದರ ಬಗ್ಗೆ ಮಾಹಿತಿ ಪಡೆದು ಮನೆ ತಲುಪಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಸೋಲೂರು ಗ್ರಾಪಂ ಮಾಜಿ ಅಧ್ಯಕ್ಷ ತಟ್ಟೆಕೆರೆಬಾಬು, ಹಾಲಿ ಸದಸ್ಯ ರಮೇಶ್, ಎನ್‌ಡಿಎ ಸದಸ್ಯ ರಂಗಸ್ವಾಮಿ, ಬಮೂಲ್ ಮಾಜಿ ನಿರ್ದೇಶಕ ಜಿ.ಆರ್.ಭಾಸ್ಕರ್, ತಾಪಂ ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ಗಂಗರಂಗಯ್ಯ, ಲಕ್ಕೇನಹಳ್ಳಿ ಹನುಮಂತರಾಜು, ಗುಡೇಮಾರನಹಳ್ಳಿ ಶಂಕರಪ್ಪ, ಸ್ಟಾಲೀನ್, ಗಂಗರಾಜು ಸೇರಿದಂತೆ ಮತ್ತಿತರರಿದ್ದರು.ಪೋಟೋ 4 :ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂಭತ್ತನಕುಂಟೆ ಗ್ರಾಮದಲ್ಲಿ ಶಾಸಕ ಎನ್.ಶ್ರೀನಿವಾಸ್ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.