ಸಿದ್ದಮಲ್ಲೇಶ್ವರ ವಿರಕ್ತ ಮಠದ ಸ್ವಾಮೀಜಿ ಸಲಹೆ ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸುವುದು ಒಳ್ಳೆಯ ಕೆಲಸವಾಗಿದೆ. ದೇಶದಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ಭಾರತ ಬಿಟ್ಟು ತೊಲಗಿ ಚಳವಳಿ ದೊಡ್ಡ ಮಟ್ಟದಲ್ಲಿ ನಡೆದು ಪ್ರಮುಖ ಪಾತ್ರವಹಿಸಿತ್ತು. ಚಾಮರಾಜನಗರದಲ್ಲಿಯೂ ಈ ಚಳವಳಿ ನಡೆಯಿತು. ಆಗ ಸಿ.ರಂಗಸ್ವಾಮಿ ಸೇರಿದಂತೆ ಇತರರು ಭಾಗವಹಿಸಿ ಜೈಲುವಾಸ ಅನುಭವಿಸಿದ್ದರು. ಅಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿಗೆ ದೊಡ್ಡ ಇತಿಹಾಸ ಹೊಂದಿದೆ. 1942ರಲ್ಲಿ ನನ್ನ ತಂದೆ ಸಿ.ರಂಗಸ್ವಾಮಿ ಜೊತೆಯಲ್ಲಿ ನಗರದ ಗೋಪಾಲರಾಯರು, ಕೃಷ್ಣಮೂರ್ತಿ, ವೆಂಕಟರಾಯರು, ಶಂಕರಪ್ಪ ಕೆಂಪಶೆಟ್ಟಿ, ಲಲಿತಾ ಜಿ.ಟಾಗೇಟ್ ಕ್ವಿಟ್ ಇಂಡಿಯಾ ಚಳವಳಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಅವರನ್ನು ಸ್ಮರಿಸಿಕೊಳ್ಳಬೇಕು ಎಂದರು.ಚೂಡಾಧ್ಯಕ್ಷ ಮಹಮದ್ ಅಸ್ಗರ್, ಪೌರಾಯುಕ್ತ ರಾಮದಾಸ್, ಕಸಾಪ ತಾಲೂಕು ಅಧ್ಯಕ್ಷೆ ಸುರೇಶ್ ಋಗ್ವೇದಿ, ಶಾ.ಮುರಳಿ ಮಾತನಾಡಿದರು. ಡಿವೈಎಸ್ ಪಿ ವಿ.ಲಕ್ಷ್ಮಯ್ಯ, ನೇತ್ರ ತಜ್ಞ ಡಾ.ಎಸ್.ಬಾಲಸುಬ್ರಹ್ಮಣ್ಯಂ, ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯ ಭದ್ರತಾ ಅಧಿಕಾರಿ ಪ್ರೀನ್ಸ್ ಅಂತೋಣಿ, ಭಾರತ್ ಸ್ಕೌಟ್, ಗೈಡ್ ಸಂಸ್ಥೆ ವಿ.ಎಂ.ರಾಮಚಂದ್ರ, ಮಹದೇವಶೆಟ್ಟಿ, ವಿ.ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ನಂಜುಂಡಸ್ವಾಮಿ, ಚಾ.ರಾ.ಕುಮಾರ್, ಆಟೋ ಲಿಂಗರಾಜು, ರವಿಚಂದ್ರ ಪ್ರಸಾದ್ ಇದ್ದರು.