ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನ ಭಾಗವಹಿಸಿ ಮಾತನಾಡಿದ ಅವರು ೮೦೦ ವರ್ಷಗಳ ನಂತರವೂ ಮರುಳಸಿದ್ಧರ ಚಿಂತನೆಗಳು ಬದುಕಿವೆ ಎಂದರೆ ಅವುಗಳಲ್ಲಿ ಜೀವನದ ವಿಚಾರಧಾರೆ ಅಡಗಿದೆ ಎಂದೇ ಅರ್ಥ ಎಂದರು.
ಸಾಮಾಜಿಕ ನ್ಯಾಯದ ಬಗ್ಗೆ ರಾಜಕಾರಣಿಗಳಾದ ನಾವು ಈಗ ಮಾತನಾಡುತ್ತಿದ್ದೇವೆ. ಆದರೆ ತರಳಬಾಳು ಪರಂಪರೆಯ ಹಿರಿಯ ಗುರುಗಳಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸ್ವಾತಂತ್ರ್ಯಪೂರ್ವದಲ್ಲಿಯೇ ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದರು. ಸಮಾಜದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಬಸವಣ್ಣ ಮತ್ತು ವಿಶ್ವಬಂಧು ಮರುಳಸಿದ್ಧ ತತ್ವ ಸಿದ್ಧಾಂತಗಳನ್ನು ತಲೆ ಮೇಲೆ ಇರಿಸಿಕೊಂಡು ಬದುಕಿದರು. ಮುಂದುವರಿದು ಈಗಿನ ಗುರುಗಳ ರೈತರ ಶ್ರೇಯೋಭಿವೃದ್ಧಿ ಮೂಲಕ ಅಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಾಡಿನಲ್ಲಿ ಭೀಕರ ಬರಗಾಲ ಇರುವ ಸಂದರ್ಭದಲ್ಲಿ ಮಠದ ಸಂಭ್ರಮದ ಆಚರಣೆಯನ್ನು ಸರಳಗೊಳಿಸಿ ಆಚರಿಸುತ್ತಿರುವುದು ತರಳಬಾಳು ಶ್ರೀಗಳ ಸಮಾಜಮುಖಿ ಚಿಂತನೆಯಾಗಿದೆ ಎಂದರು.
ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸದ್ಧರ್ಮ ಸಿಂಹಾಸನಾರೋಹಣ ಮಾಡಿ ಅನುಗ್ರಹಿಸಿದರು. ಚಿಂತಕರು ಮತ್ತು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಹಿರೇಮಗಳೂರು ಕಣ್ಣನ್ ಮುಂತಾದವರು ಉಪನ್ಯಾಸ ನೀಡಿದರು. ಡಾ.ಮಹದೇವ ಬಣಕಾರರ ವಿಶ್ಬಬಂಧು ಮರುಳಸಿದ್ಧ ಕಾವ್ಯ ಗ್ರಂಥವನ್ನು ಚಿದಾನಂದಗೌಡರು ಲೋಕಾರ್ಪಣೆ ಮಾಡಿದರು.ಶಾಸಕರುಗಳಾದ ಎಂ. ಚಂದ್ರಪ್ಪ, ಡಿ.ಜಿ. ಶಾಂತನಗೌಡ, ಬಿ.ಪಿ. ಹರೀಶ್, ಗಣೇಶ್ ಪ್ರಸಾದ್, ಎಂಎಲ್‌ಸಿ ಎಂ.ಬಿ. ನವೀನ್, ಚಿಂತಕ ಚಿದಾನಂದಗೌಡ, ಹಿರೇಮಗಳೂರು ಕಣ್ಣನ್, ಎಚ್.ಆರ್. ಬಸವರಾಜಪ್ಪ, ಕರ್ನಾಟಕ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮುಂತಾದವರು ಉಪಸ್ಥಿತರಿದ್ದರು.
ತರಳಬಾಳು ಮಠದ ಸಂಪ್ರದಾಯದಂತೆ ಕಳೆದ ೭ ದಶಕಗಳಿಂದ ನಡೆಯುತ್ತಾ ಬಂದಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಿರಾಕರಿಸಿ ಅಲಂಕೃತ ವಾಹನ ಏರಿ ಸಿರಿಗೆರೆಯ ಬೀದಿಗಳಲ್ಲಿ ಸಂಚಾರ ನಡೆಸಿದರು. ಇದರಿಂದ ಮಠದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಸೃಷ್ಟಿಯಾದಂತಾಯಿತು.
ಹಲವು ಜಾನಪದ ತಂಡಗಳು ಮೆರವಣಿಗೆಯಲ್ಲಿ ಸಾಗಿಬಂದವು. ಪೂರ್ಣಕುಂಭ ಹೊತ್ತ ಬಾಲಿಕೆಯರು ಮೆರವಣಿಗೆಯುದ್ದಕ್ಕೂ ಸಾಗಿ ಮೆರವಣಿಗೆಗೆ ಮೆರಗು ನೀಡಿದರು.
ಇದೇ ಮೊದಲ ಬಾರಿಗೆ ತರಳಬಾಳು ಹುಣ್ಣಿಮೆಯಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಿರಾಕರಿಸಿ ಅಲಂಕೃತ ವಾಹನದಲ್ಲಿ ಗ್ರಾಮ ಸಂಚಾರ ಮಾಡಿದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ನಿರ್ಧಾರಕ್ಕೆ ಭಕ್ತ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.