ಮಕ್ಕಳಲ್ಲಿನ ಅಸಮಾನ್ಯ ಪ್ರತಿಭೆ ಗುರುತಿಸಿ

KannadaprabhaNewsNetwork |  
Published : Jul 11, 2025, 11:48 PM IST
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. | Kannada Prabha

ಸಾರಾಂಶ

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿಕ್ಕಂದಿನಿಂದಲೇ ಅಸಾಮಾನ್ಯ ಬಾಲ ಪ್ರತಿಭೆಗಳನ್ನು ಗುರುತಿಸಬೇಕು. ಕೆಲವು ಮಕ್ಕಳ ಬುದ್ಧಿಮತ್ತೆ ವಿಶೇಷವಾಗಿರುತ್ತದೆ. ವಯಸ್ಸಿಗೂ ಮೀರಿದ ಜ್ಞಾನ, ಬುದ್ಧಿವಂತಿಕೆಯಿಂದ ಅವರು ಜಗತ್ತಿನ ಗಮನ ಸೆಳೆಯುತ್ತಾರೆ. ವಿಶೇಷವಾದ್ದನ್ನು ಸಾಧಿಸುತ್ತಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಎಸ್.ಜೆ.ಎಸ್ ಸಮೂಹ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ನಿಮಿತ್ತ ಅಕ್ಷರಾಭ್ಯಾಸ ಪ್ರಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅಕ್ಷರ ಎಂಬ ಶಬ್ಧಕ್ಕೆ ನಾಶವಿಲ್ಲದಿರುವುದು ಎಂದರ್ಥ. ಮೌಲಿಕವಾಗಿ ಇದು ನಾಶವಿಲ್ಲದ ಪರತತ್ವವನ್ನೇ ಹೇಳುತ್ತದೆ. ಅಭ್ಯಾಸವೆಂದರೆ ಆ ತತ್ವಕ್ಕೆ ತನ್ನನ್ನು ಅಭಿಮುಖವಾಗಿ ಇರಿಸಿಕೊಳ್ಳುವುದು. ಮಕ್ಕಳಲ್ಲಿ ಶಿಕ್ಷಣದ ಬಗೆಗೆ ಪ್ರೀತಿ ಹುಟ್ಟಿಸುವ ಕಲಿಕೆಯು ಬದುಕಿನ ಮೊದಲ ಆದ್ಯತೆಯಾಗಬೇಕಾದ ಬಗ್ಗೆ ಅರಿವು ಮೂಡಿಸುವ ಬಾಲಜಾಗೃತಿ ಹೆಚ್ಚಾಗಬೇಕು. ಪ್ರತಿ ಮಗುವಿಗೆ ಅನ್ನ ಅಕ್ಷರ ಆರೋಗ್ಯ ಅತ್ಯ ಅವಶ್ಯಕತೆ. ಬದುಕಿನ ಜಂಜಾಟದಲ್ಲಿ ಏನೇ ಸಮಸ್ಯೆಗಳು ಎದುರಾದರೂ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಉತ್ತಮ ಶಿಕ್ಷಣದ ಮೂಲಕ ತಮ್ಮ ಮಕ್ಕಳನ್ನು ಸಮಾಜದ ಉನ್ನತ ಶ್ರೇಣಿಯಲ್ಲಿ ಅಲಂಕರಿಸುವಂತೆ ಜೀವನೋತ್ಸಾಹ ತುಂಬಬೇಕು. ಮಕ್ಕಳು ಅನುಕರಣೆ ಮಾಡುವುದರಿಂದ ಪೋಷಕರು ಮಕ್ಕಳು ಮನೆಯಲ್ಲಿದ್ದಾಗ ಟಿವಿ ಮತ್ತು ಮೊಬೈಲ್ ಗಳಿಂದ ಸ್ವತಃ ದೂರವಿರಬೇಕು. ಮಕ್ಕಳೊಂದಿಗೆ ಧ್ಯಾನ ಅಧ್ಯಯನ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಮನೆಯೇ ಮೊದಲ ಪಾಠಶಾಲೆ, ತಂದೆ-ತಾಯಿಗಳೇ ಮೊದಲ ಗುರುಗಳಾಗಿರುವುದರಿಂದ ತಂದೆ ತಾಯಿಗಳ ಮೂಲಕ ಉಜ್ವಲ ಬೆಳಕನ್ನು ಮಕ್ಕಳು ಕಾಣಬೇಕೆಂದು ಹೇಳಿದರು.

ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರತಿ ಮಗುಗೆ ಪ್ರಥಮ ಅಕ್ಷರಭ್ಯಾಸ ಮಾಡಿಸಿದರು.

ಈ ವೇಳೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ಸಿಬ್ಬಂದಿ, ಶಿಕ್ಷಕೇತರ ಸಿಬ್ಬಂದಿ, ಮಕ್ಕಳು ಹಾಗೂ ಪೋಷಕ ವರ್ಗದವರು ಉಪಸ್ಥಿರಿದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ