ಮಹಿಳೆ ಸ್ವಾವಲಂಬಿಯಾದರೆ ಕುಟುಂಬ ಅಭಿವೃದ್ಧಿಯಾದಂತೆ

KannadaprabhaNewsNetwork |  
Published : Oct 13, 2025, 02:00 AM ISTUpdated : Oct 13, 2025, 02:01 AM IST
ಗಾಂಧಿ ಸ್ಮತಿ ಬೃಹತ್ ಜನಜಾಗೃತಿ ಜಾಥಾಕ್ಕೆ ಚಾಲನೆ | Kannada Prabha

ಸಾರಾಂಶ

ಕಳೆದ 5ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರೆಯ ಜತೆಗೆ ಸಾಮಾಜಿಕ ಪರಿವರ್ತನೆಗೆ ಹೊಸ ನಾಂದಿ ಹಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಜನರ ಸಂಘಟನೆಗೆ ವಿವಿಧ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಶ್ರೀ ಕ್ಷೇತ್ರದ ಪರಂಪರೆಯಂತೆ ಅನ್ನದಾನ, ವಿದ್ಯಾದಾನ, ಆರೋಗ್ಯದಾನ ನಿರಂತರವಾಗಿ ಮಾಡಿಕೊಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗೌರಿಬಿದನೂರು ರವರ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಜನಜಾಗೃತಿ ಜಾಥಾ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಶ್ರೀಯುತ ಗೋಪಾಲ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಗ್ರಾಮಾಂತರ ಆರಕ್ಷಕ ಠಾಣೆ ರವರು ಚಾಲನೆ ನೀಡಿದರು. ಜಾಥಾವು ನಗರದ ಮಹಾತ್ಮಗಾಂಧಿ ವೃತ್ತ ದಿಂದ ಪ್ರಾರಂಭಗೊಂಡು ಸೂರ್ಯ ಕಲ್ಯಾಣ ಮಂಟಪದ ವರೆಗೆ ನಡೆಯಿತು.

ಮಹಿಳೆ ಸಮಾಜದ ಕಣ್ಣು

ದೀಪ ಬೆಳಗುವುದರ ಮೂಲಕ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರಾದ ಕೆ. ಹೆಚ್.ಪುಟ್ಟಸ್ವಾಮಿ ಗೌಡ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನಾಧ್ಯoತ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಶ್ಲಾಘನೆಯ. ಮಹಿಳೆ ಸಮಾಜದ ಕಣ್ಣು ಮಹಿಳೆಯರ ಅಭಿವೃದ್ಧಿಯಾದರೆ ಕುಟುಂಬವೇ ಅಭಿವೃದ್ಧಿ ಆಗುತ್ತೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳ ಇತಿಹಾಸ ಹೊಂದಿರುವ ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಕ್ಷೇತ್ರದ ಪರಂಪರೆಯಂತೆ ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಹಾಗೂ ಅಭಯ ದಾನಗಳಂತಹ ಚತುರ್ದಾನಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.ಧಗ್ರಾದಿಂದ ವಿವಿಧ ಯೋಜನೆ

ಗ್ರಾಮಾಭಿವೃದ್ಧಿ ಯೋಜನೆ ಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್.ಸಿ.ಎಸ್. ಆಶಯ ಭಾಷಣದ ಮೂಲಕ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ, ಯೋಜನೆಗಳ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಕಳೆದ 5ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರೆಯ ಜತೆಗೆ ಸಾಮಾಜಿಕ ಪರಿವರ್ತನೆಗೆ ಹೊಸ ನಾಂದಿ ಹಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಜನರ ಸಂಘಟನೆಗೆ ವಿವಿಧ ಕಾರ್ಯಕ್ರಮ ಜಾರಿಗೊಳಿಸಿರುವುದಾಗಿ ಹೇಳಿದರು.

ಸ್ವ-ಸಹಾಯ ಸಂಘ ಚಳವಳಿ, ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ, ಅಂತರ್ಜಲ ವೃದ್ಧಿಗಾಗಿ ಕೆರೆಗಳ ಹೂಳೆತ್ತುವ ಯೋಜನೆ, ವಿಕಲಚೇತನರಿಗೆ ಜನಮಂಗಳ ಕಾರ್ಯಕ್ರಮಗಳ ಮೂಲಕ ಜನ ಸಾಮಾನ್ಯರ ಪರಿವರ್ತನೆಗೆ ನೇರ ಕೊಡುಗೆ ನೀಡುತ್ತಿದ್ದಾರೆ ಎಂದರು.

ಧಗ್ರಾ ಯೋಜನೆಗಳಿಗೆ ಶ್ಲಾಘನೆಮಾಜಿ ಶಾಸಕರಾದ ಶ್ರೀಮತಿ ಜೋತಿ ರೆಡ್ಡಿ ಅವರು ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಶ್ರೀಮತಿ ಪ್ರಭ ನಾರಾಯಣಗೌಡ ವೀರೇಂದ್ರ ಹೆಗಡೆಯವರು ಹಾಗೂ ಹೇಮಾವತಿ ಹೆಗಡೆಯವರು ಚಿಂತನೆಗಳ ಬಗ್ಗೆ ಕವನದ ಮೂಲಕ ತಿಳಿಸಿದರು. ಪೂಜಾ ಕಾರ್ಯಕ್ರಮವು ಅರ್ಚಕರಾದ ರಾಘವೇಂದ್ರ ಎನ್ ಹೆಗಡೆ ಅವರ ನೇತೃತ್ವದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸಪ್ತಗಿರಿ,ಅಮರನಾಥ್, ಜನ ಜಾಗೃತಿ ವೇದಿಕೆ ಸದಸ್ಯರಾದ ಚಂದ್ರಶೇಖರ್, ಲಕ್ಷ್ಮಿಪತಿ, ಜಗನ್ನಾಥ್, ಗಂಗಾಧರಾಚಾರಿ, ಹಾಗೂ ವೇಣು ಮಾಧವ್,ಯೋಜನೆಯ ಕಾರ್ಯಕರ್ತರು, ಸಂಘದ ಸದಸ್ಯರು, ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ನಾಗರಾಜ್, ಅಶ್ವಿನಿ ಹಾಗೂ ಸತೀಶ್, ಉಷಾ ಉಪಸ್ಥಿತರಿದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ