ಹೊಳೆ ಆಂಜನೇಯಸ್ವಾಮಿಗೆ ಶಾಸಕ ಯತ್ನಾಳ್ ವಿಶೇಷ ಪೂಜೆ ಸಲ್ಲಿಕೆ

KannadaprabhaNewsNetwork |  
Published : Oct 13, 2025, 02:00 AM IST
12ಕೆಎಂಎನ್ ಡಿ23 | Kannada Prabha

ಸಾರಾಂಶ

ಶಾಸಕ ಯತ್ನಾಳ್ ಅವರಿಗೆ ಶ್ವೇಷ ವಸ್ತ್ರ ಧಾರಣೆ ಮಾಡಿ ಶ್ರೀ ಆಂಜನೇಯಮೂರ್ತಿ ಭಾವಚಿತ್ರವುಳ್ಳ ಫೋಟೋವನ್ನು ನೀಡಿ ಗೌರವಿಸಲಾಯಿತು. ನಂತರ ಅರ್ಚಕರ ನಿವಾಸದಲ್ಲಿ ಬಜರಂಗ ಸೇನೆ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಲಘು ಉಪಹಾರಸೇವಿಸಿ ನಿರ್ಗಮಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪುರಾಣ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಭಾನುವಾರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಜರಂಗ ಸೇನೆ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ದೇಗುಲಕ್ಕೆ ಆಗಮಿಸಿದ ಶಾಸಕ ಯತ್ನಾಳ್ ಅವರು ಪ್ರಧಾನ ಅರ್ಚಕ ಪ್ರದೀಪಾಚಾರ್ಯ ಅವರಿಂದ ದೇಗುಲದ ಇತಿಹಾಸವನ್ನು ತಿಳಿದುಕೊಂಡರು.

ನಂತರ ಅಂಗೈಯಲ್ಲಿ ಒಂದು ಕಾಲು ರೂಪಾಯಿ ನಾಣ್ಯವನ್ನು ಹಿಡಿದು ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಮ್ಮ ಹಾಗೂ ತಮ್ಮ ಕುಟುಂಬದ ಮತ್ತು ಕಾರ್ಯಕರ್ತರ ಹೆಸರಿನಲ್ಲಿ ಸಂಕಲ್ಪ ಸೇವೆ ನೆರವೇರಿಸಿದ ತರುವಾಯು ಮಹಾಮಂಗಳಾರತಿಯೊಂದಿಗೆ ತೀರ್ಥ,ಪ್ರಸಾದ ಸ್ವೀಕರಿಸಿದರು.

ನಂತರ ಶಾಸಕ ಯತ್ನಾಳ್ ಅವರಿಗೆ ಶ್ವೇಷ ವಸ್ತ್ರ ಧಾರಣೆ ಮಾಡಿ ಶ್ರೀ ಆಂಜನೇಯಮೂರ್ತಿ ಭಾವಚಿತ್ರವುಳ್ಳ ಫೋಟೋವನ್ನು ನೀಡಿ ಗೌರವಿಸಲಾಯಿತು. ನಂತರ ಅರ್ಚಕರ ನಿವಾಸದಲ್ಲಿ ಬಜರಂಗ ಸೇನೆ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಲಘು ಉಪಹಾರಸೇವಿಸಿ ನಿರ್ಗಮಿಸಿದರು. ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆ ಬಳಿ ವರ್ತಕರು ಮತ್ತು ಹಮಾಲಿಗಳು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

ಯತ್ನಾಳ್‌ಗೆ ಅದ್ಧೂರಿ ಸ್ವಾಗತ

ಮದ್ದೂರು:

ಮಂಡ್ಯಕ್ಕೆ ತೆರಳುತ್ತಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಭಾನುವಾರ ಬಜರಂಗ ಸೇನೆ ಕಾರ್ಯಕರ್ತರು ಜಿಲ್ಲೆಯ ಗಡಿಭಾಗ ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಅದ್ದೂರಿ ಸ್ವಾಗತ ನೀಡಿದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗಮಿಸಿದ ಯತ್ನಾಳ್ ಅವರನ್ನು ಬಜರಂಗ ಸೇನೆ ಜಿಲ್ಲಾಧ್ಯಕ್ಷ ಹರ್ಷ ಸೇರಿದಂತೆ ನೂರಾರು ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು. ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ ಮಂಜುನಾಥ್, ನಗರ ಘಟಕದ ಅಧ್ಯಕ್ಷ ಚೇತನ, ಮದ್ದೂರು ತಾಲೂಕಿನ ಭಜರಂಗ ಸೇನೆ ಮತ್ತು ಬಿಜೆಪಿ ಮುಖಂಡರಾದ ಕೆ.ಎಸ್.ಮಲ್ಲಿಕಾರ್ಜುನ್, ಎಂ.ಎಸ್. ಜಗನ್ನಾಥ್, ಕೆ.ಟಿ.ನವೀನ್, ಮಮತಾ ರಾಂಕ , ರೇಖಾ,ವೀರಭದ್ರ ಸ್ವಾಮಿ, ಗುರು ಮಲ್ಲೇಶ್, ನಿಡಘಟ್ಟ ಸುನಿಲ್,ಸ್ವಾಮಿ,ಗಿರೀಶ, ಹರ್ಷ, ಚೈತನ್ಯ ಆರಾಧ್ಯ ಶ್ರೀನಿವಾಸ ಶೆಟ್ಟಿ, ಮತ್ತಿತರರು ಇದ್ದರು.ಮಂಡ್ಯದಿಂದ ಕೆರಗೋಡಿಗೆ ಬೈಕ್‌ ಜಾಥಾ

ಮಂಡ್ಯ:

ತಾಲೂಕಿನ ಕೆರಗೋಡಿನಲ್ಲಿ ಸಾಮೂಹಿಕ ಗಣೇಶ ಮೆರವಣಿಗೆಯ ಹಿನ್ನೆಲೆಯಲ್ಲಿ ಮಂಡ್ಯದಿಂದ ಕೆರಗೋಡಿಗೆ ಬಜರಂಗಸೇನೆ ಕಾರ್ಯಕರ್ತರು ಬೈಕ್‌ಗಳಲ್ಲಿ ಜಾಥಾ ನಡೆಸಿದರು. ಪೇಟೆಬೀದಿ, ಹೊಳಲು ಸರ್ಕಲ್, ಕಾರಿಮನೆ ಗೇಟ್, ಚಿಕ್ಕಮಂಡ್ಯ, ಸಾತನೂರು, ಹುಲಿವಾನ ಮಾರ್ಗವಾಗಿ ಕೆರಗೋಡು ತಲುಪಲಿರುವ ಬೈಕ್ ಜಾಥಾ. ಕಾರ್ಯಕರ್ತರ ಬೈಕ್ ಜಾಥಾ ಜೊತೆ ಓಪನ್ ಕಾರಿನಲ್ಲಿ ವಿಜಯನಗರ ಶಾಸಕ ಬಸವರಾಜ ಪಾಟೀಲ ಯತ್ನಾಳ್‌ ತೆರಳಿದರು. ಜಾಥಾ ವೇಳೆ ಯತ್ನಾಳ್‌ ಸಾರ್ವಜನಿಕರತ್ತ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಜಾಥಾದ ಉದ್ದಕ್ಕೂ ಯತ್ನಾಳ್ ಮೇಲೆ ಅಭಿಮಾನಿಗಳು, ಹಿಂದೂ ಕಾರ್ಯಕರ್ತರು ಪುಷ್ಪವೃಷ್ಟಿಗರೆದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ