ಧರ್ಮ ಉಳಿದರೆ ಸಮಾಜದ ಉಳಿವು

KannadaprabhaNewsNetwork |  
Published : Nov 17, 2026, 02:45 AM IST
ಸಾರಂಗ | Kannada Prabha

ಸಾರಾಂಶ

ಸಿಂದಗಿಯ ಸಾರಂಗಮಠ ನಿರಂತರವಾಗಿ ಸಮಾಜಿಕ, ಧಾರ್ಮಿಕ ಸೇವೆ ಮಾಡುವ ಮೂಲಕ ಈ ಭಾಗದಲ್ಲಿ ಅತ್ಯಂತ ಹೆಮ್ಮೆರವಾಗಿ ಬೆಳೆದಿದೆ. ನಮ್ಮಂತ ಅನೇಕ ಕಿರಿಯ ಸ್ವಾಮಿಗಳಿಗೆ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯರು ಸದಾ ಆಶೀರ್ವಾದ ಮಾಡುವ ಮೂಲಕ ಮಾರ್ಗದರ್ಶಕರಾಗಿದ್ದಾರೆ ಎಂದು ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಸಿಂದಗಿಯ ಸಾರಂಗಮಠ ನಿರಂತರವಾಗಿ ಸಮಾಜಿಕ, ಧಾರ್ಮಿಕ ಸೇವೆ ಮಾಡುವ ಮೂಲಕ ಈ ಭಾಗದಲ್ಲಿ ಅತ್ಯಂತ ಹೆಮ್ಮೆರವಾಗಿ ಬೆಳೆದಿದೆ. ನಮ್ಮಂತ ಅನೇಕ ಕಿರಿಯ ಸ್ವಾಮಿಗಳಿಗೆ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯರು ಸದಾ ಆಶೀರ್ವಾದ ಮಾಡುವ ಮೂಲಕ ಮಾರ್ಗದರ್ಶಕರಾಗಿದ್ದಾರೆ ಎಂದು ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.

ಪಟ್ಟಣದ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಶಾಖಾ ಮಠ ನಗರದ ಸಾರಂಗಮಠ-ಗಚ್ಚಿನಮಠದ ಲಿಂ.ಚನ್ನವೀರ ಸ್ವಾಮಿಗಳ 133 ನೇ ಜಯಂತ್ಯುತ್ಸವ, ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿಗಳ ಗುರು-ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಸಾರಂಗಮಠದ ಆವರಣದಲ್ಲಿ ಪುರಾಣ ಪ್ರವಚನ, ಧಾರ್ಮಿಕ, ಆರೋಗ್ಯ ಶಿಬಿರ, ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ, ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿ, ಸಾರಂಗಶ್ರೀ ಕೃಷಿ ಪ್ರಶಸ್ತಿ, ಮಹಿಳೆಯಿಂದ ಬೆಳ್ಳಿ ತೇರು ಎಳೆಯುವು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಧರ್ಮ ಉಳಿದರೆ ಸಮಾಜ ಉಳಿಯುತ್ತದೆ. ನಾವೆಲ್ಲ ಧರ್ಮದ ಹಾದಿಯಲ್ಲಿ ಬದುಕಬೇಕು. ಮಠಗಳು ಕೇವಲ ಧಾರ್ಮಿಕ ಕೇಂದ್ರವಲ್ಲ, ಅವುಗಳು ಸಮಾಜವನ್ನು ತಿದ್ದುವ ಮತ್ತು ಸಮಾಜದ ಏಳಿಗೆಯನ್ನ ಬಯಸುವ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಅವುಗಳಲ್ಲಿ ಸಿಂದಗಿಯ ಸಾರಂಗಮಠದ ಸೇವೆ ಅಮೋಘವಾಗಿದೆ ಎಂದು ಸ್ಮರಿಸಿದರು.ಪುರಾಣ ಪ್ರವಚನವನ್ನು ಗಡಹಿಂಗ್ಲಜ ತಾಲೂಕಿನ ನೂಲ ಗ್ರಾಮದ ಷಟಸ್ಥಲ ಬ್ರಹ್ಮ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿ ಮಾತನಾಡಿ, ಲಿಂಗೈಕ್ಯ ಚನ್ನವೀರ ಮಹಾಸ್ವಾಮಿಗಳು ಹಚ್ಚಿದ ಶೈಕ್ಷಣಿಕ ದೀಪ ಇಂದು ಉತ್ತರ ಕರ್ನಾಟಕದಲ್ಲಿ ಹೆಮ್ಮರವಾಗಿದೆ. ಮಠ ಮತ್ತು ಶಿಕ್ಷಣ ಕೇಂದ್ರವನ್ನು ಪ್ರಭು ಸಾರಂಗದೇವ ಶಿವಾಚಾರ್ಯರು ಮಕ್ಕಳಂತೆ ಸಲುಹಿ ಸಾಕಿ ಬೆಳೆಸಿದ್ದು, ಈ ಭಾಗದ ಜನರ ಪುಣ್ಯವೆಂದರು.ಸಾನಿಧ್ಯ ವಹಿಸಿದ್ದ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ಶ್ರೀಮಠದಲ್ಲಿ ಒಂದು ತಿಂಗಳ ಕಾಲ ಧಾರ್ಮಿಕ ಆರೋಗ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಶ್ರೀಮಠದ ಉತ್ತರಾಧಿಕಾರಿ ವಿಶ್ವ ಪ್ರಭುದೇವ ಶಿವಾಚಾರ್ಯರ ಗುರು ಪಟ್ಟಾಧಿಕಾರ ಮಹೋತ್ಸವ ಪಂಚ ಪೀಠಾಧೀಶ್ವರರ ಆಶೀರ್ವಾದದೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಜರಗಲಿದೆ. ಸಿಂದಗಿಯ ಜನತೆ ಶ್ರೀಮಠಕ್ಕೆ ಆಗಮಿಸಬೇಕು ಎಂದು ಕೋರಿದರು.ಈ ವೇಳೆ ಶ್ರೀ ಮಠದ ಉತ್ತರಾಧಿಕಾರಿ ವಿಶ್ವ ಪ್ರಭುದೇವ ಶಿವಾಚಾರ್ಯರು, ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮಿಗಳು, ಸಿಂದಗಿ ವೀರಕ್ತಮಠದ ಬಸವಪ್ರಭು ಶ್ರೀಗಳು ಇದ್ದರು.

ಕಾರ್ಯಕ್ರಮದಲ್ಲಿ ಗಾನಭೂಷಣ ಶಿವರುದ್ರ ಗೌಡಗಾಂವ ಪ್ರಾರ್ಥಿಸಿದರು, ಡಾ.ಶರಣಬಸವ ಜೋಗುರ ಸ್ವಾಗತಿಸಿದರು, ಪೂಜಾ ಹಿರೇಮಠ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ