ಡಿಕೆಸು ವಿಪಕ್ಷದಲ್ಲಿದ್ದಿದ್ದರೆ ಉರುಳು ಸೇವೆ: ತಿರುಗೇಟು

KannadaprabhaNewsNetwork |  
Published : Aug 28, 2026, 01:15 AM IST
27ಕೆಆರ್ ಎಂಎನ್ 1.ಜೆಪಿಜಿಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ನೈಸ್ ಟೋಲ್ ಸಂಗ್ರಹದ ವಿರುದ್ಧ ನಾವು ಪಾದಯಾತ್ರೆಯಂತಹ ಹೋರಾಟ ಮಾಡುತ್ತಿದ್ದೇವೆ ಅಷ್ಟೆ. ಅವರೇನಾದರು ವಿಪಕ್ಷದಲ್ಲಿ ಇದ್ದಿದ್ದರೆ ವಿಧಾನಸೌಧದವರೆಗೆ ಉರುಳು ಸೇವೆಯೇ ಮಾಡುತ್ತಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಮಾಜಿ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದರು

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ನೈಸ್ ಟೋಲ್ ಸಂಗ್ರಹದ ವಿರುದ್ಧ ನಾವು ಪಾದಯಾತ್ರೆಯಂತಹ ಹೋರಾಟ ಮಾಡುತ್ತಿದ್ದೇವೆ ಅಷ್ಟೆ. ಅವರೇನಾದರು ವಿಪಕ್ಷದಲ್ಲಿ ಇದ್ದಿದ್ದರೆ ವಿಧಾನಸೌಧದವರೆಗೆ ಉರುಳು ಸೇವೆಯೇ ಮಾಡುತ್ತಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಮಾಜಿ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದರು.

ನಗರದ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ಜೆಡಿಎಸ್ ಜಿಲ್ಲಾ ಮತ್ತು ತಾಲೂಕು ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ವಿಷಯದಲ್ಲಿ ರೈತರು ಮತ್ತು ನೈಸ್ ಟೋಲ್ ವಿಚಾರದಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೇವೆ ನಿಜ. ಇದೇ ವಿಷಯ ಡಿ.ಕೆ.ಸುರೇಶ್ ವಿಪಕ್ಷದಲ್ಲಿದ್ದಾಗ ಸಿಕ್ಕಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಸತ್ಯಕ್ಕೆ ಜಯ ಸಿಗುವ ವಿಶ್ವಾಸ:

ಸರ್ಕಾರ ನಡೆಸುವವರು, ಅಧಿಕಾರದಲ್ಲಿ ಇರುವವರು ಹಣ ಬಲ, ತೋಳ್ಬಲ, ಅಧಿಕಾರದ ಬಲ ಉಪಯೋಗಿಸಿಕೊಂಡು ಹೋರಾಟ ಹತ್ತಿಕ್ಕುವ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡುವ, ರೈತರಿಗೆ ಮಂಕು ಬೂದಿ ಎರಚುತ್ತಿದ್ದಾರೆ.

ಅಲ್ಲದೆ, ಹೋರಾಟಗಾರರ ಬದುಕಿನಲ್ಲಿ ಹೇಗೆಲ್ಲ ಚೆಲ್ಲಾಟ ಆಡಬಹುದೆಂದು ಕರಗತ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಹೋರಾಡುವುದು ಬಹಳ ಕಷ್ಟ. ಆದರೂ ರಾಜ್ಯಸರ್ಕಾರದ ವಿರುದ್ಧ ರೈತರು ಹೋರಾಟ ಮುಂದುವರೆಸಿದ್ದರೆ, ಜೆಡಿಎಸ್ ಕೂಡ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇವೆ. ಸತ್ಯಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ನಾಯಕರಿಗೆ ನೈಸ್ ಉಸಾಬರಿ ಏಕೆ ?:

ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನೈಸ್ ಟೋಲ್ ಸಂಗ್ರಹ ಮಾಡುತ್ತಿರುವುದು ಕಾನೂನು ಬಾಹಿರ. ಇಷ್ಟು ವರ್ಷಗಳಿಂದ ಟೋಲ್ ಸಂಗ್ರಹ ಮಾಡಿರುವುದೇ ಹಗಲು ದರೋಡೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾರಣ ಪಕ್ಷದ ವರಿಷ್ಠರು ಕಾನೂನು ಅರಿವು ಅರಿತು ಹೋರಾಟ ಕೈಗೆತ್ತಿಕೊಂಡಿದ್ದೇವೆ. ಸರ್ಕಾರ ನಡೆಸುತ್ತಿರುವವರು ಬುದ್ಧಿವಂತರು ಮತ್ತು ಕಿಲಾಡಿಗಳಾಗಿದ್ದಾರೆ. ಹೋರಾಟ ಹತ್ತಿಕ್ಕುವುದು, ಹೋರಾಟಗಾರರಿಗೆ ತೊಂದರೆ ಕೊಡುತ್ತಿದ್ದಾರೆ ಎಂದರು.

ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ರಾಜ್ಯ ಸರ್ಕಾರ ಬೆಂಗಳೂರಲ್ಲಿ ಫುಟ್ ಪಾತ್ ತೆರವು ಮಾಡುತ್ತಿದೆ. ಹಾಗೆಯೇ ಕೋರ್ಟ್ ಆದೇಶದ ಪ್ರಕಾರ ನೈಸ್ ಟೋಲ್‌ಗಳ್ನು ಬುಲ್ಡೇಜರ್‌ನಿಂದ ತೆರವು ಮಾಡಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಿ, ಆ ಕ್ರೆಡಿಟ್ ಅವರೇ ತೆಗೆದುಕೊಳ್ಳಲಿ. ಇವರೇಕೆ ನೈಸ್ ಉಸಾಬರಿ ವಹಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಹಾಕುವುದು ಸಹಜ. ಎಲ್ಲಾದಕ್ಕೂ ಕೋರ್ಟ್ ಆದೇಶ ನೀಡಿದ್ದರೆ ಅವೆಲ್ಲವನ್ನು ತೆರವು ಮಾಡುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳುತ್ತಿದ್ದರು. ನೈಸ್ ರಸ್ತೆಯಲ್ಲಿ ಕಾನೂನು ಬಾಹಿರ ಟೋಲ್ ಸಂಗ್ರಹ ಮಾಡುತ್ತಿದ್ದಾರೆಂದು ಕೋರ್ಟ್ ಹೇಳಿರುವುದಕ್ಕೆ ಕುಮಾರಸ್ವಾಮಿ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ. ಅದು ಜನರನ್ನು ಎತ್ತಿಕಟ್ಟುವ ವಿಚಾರವಲ್ಲ, ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ವಿಚಾರ ಎಂದು ತಿರುಗೇಟು ನೀಡಿದರು.

ನೈಸ್ ಹಗಲು ದರೋಡೆಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವವರೆಗೂ ಜೆಡಿಎಸ್ ನೈಸ್ ವಿರುದ್ಧದ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ಎ.ಮಂಜುನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ವಿಪಕ್ಷ ನಾಯಕ ಮಂಜುನಾಥ್, ಸದಸ್ಯರಾದ ಗ್ಯಾಬ್ರಿಯಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ರಾಮನಗರ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ರಾಮ,

ಮುಖಂಡರಾದ ಸೋಮೇಗೌಡ, ಶಿವಕುಮಾರ್, ಜಿ.ಟಿ.ಕೃಷ್ಣ, ಗೂಳಿಗೌಡ, ರಾಜಶೇಖರ್ , ಜಯಕುಮಾರ್, ಅಂಜನಾಪುರ ವಾಸು, ಕೊತ್ತಿಪುರ ಗೋವಿಂದರಾಜು, ಕೆಂಪರಾಜು, ಸಂತೋಷ್ , ಶೋಭಾ, ಸರಸ್ವತಿ, ಪೂರ್ಣಿಮಾ, ಜಯಮ್ಮ ಇದ್ದರು.

ಬಾಕ್ಸ್‌...........

ಜೆಡಿಎಸ್ ಜಿಲ್ಲಾ - ತಾಲೂಕು ಕಚೇರಿ ಲೋಕಾರ್ಪಣೆ

ರಾಮನಗರ:

ನಗರದ ಕೈಗಾರಿಕಾ ಪ್ರದೇಶದಲ್ಲಿರುವ ದಿ ಭಾರತಿ ಕೋ ಆಪರೇಟಿವ್ ಬ್ಯಾಂಕ್‌ ಕಟ್ಟಡದಲ್ಲಿ ಜೆಡಿಎಸ್ ಜಿಲ್ಲಾ ಮತ್ತು ತಾಲೂಕು ನೂತನ ಕಚೇರಿಯನ್ನು ಮಾಜಿ ಶಾಸಕ ಎ.ಮಂಜುನಾಥ್ ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಮಂಜುನಾಥ್, ಜಿಲ್ಲೆಯಲ್ಲಿ ಜೆಡಿಎಸ್ ತಾಲೂಕು ಮತ್ತು ಜಿಲ್ಲಾ ಕಚೇರಿ ಕೊರತೆ ಇತ್ತು. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುಸಜ್ಜಿತ ಕಚೇರಿ ಪ್ರಾರಂಭಿಸಬೇಕೆಂದು ಹೇಳಿದ್ದರು. ಅದರಂತೆ ಬೇರೆ ತಾಲೂಕುಗಳಿಂದ ಆಗಮಿಸುವ ಪಕ್ಷದ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿ ಜಿಲ್ಲಾ, ತಾಲೂಕು ಕಚೇರಿಯನ್ನು ಒಂದೇ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ ಎಂದರು.

ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯಾವಕಾಶ ನೀಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಶೀಘ್ರದಲ್ಲಿ ಅವರು ಕಚೇರಿಗೆ ಭೇಟಿ ನೀಡಲಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಕಾರ್ಯಕ್ರಮ, ಆಚಾರ ವಿಚಾರಗಳು, ಸಭೆ ಸಮಾರಂಭಗಳು, ಹೋರಾಟಗಳ ಕುರಿತು ಚರ್ಚಿಸಲು ಜೆಡಿಎಸ್ ಕಚೇರಿ ಕೇಂದ್ರವಾಗಿರಲಿದೆ ಎಂದು ಮಂಜುನಾಥ್ ತಿಳಿಸಿದರು.

27ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾರಾಯಣ ಶ್ರೀಗಳ ಜಯಂತಿ: ಪ್ರಣವಾನಂದ ಶ್ರೀಗಳ ಕಡೆಗಣನೆ
ಇಂದು ಶರಣ ಶ್ರೀನುಲಿಯ ಚಂದಯ್ಯ ಜಯಂತಿ