ಎಲ್ಲರೂ ಕೈಜೋಡಿಸಿದರೆ ಪಕ್ಷದ ಕೈ ಬಲಪಡಿಸಬಹುದು: ಪ್ರಸನ್ನ ಕುಮಾರ್

KannadaprabhaNewsNetwork |  
Published : Sep 07, 2025, 01:00 AM IST
ಪೋಟೋ : 04 ಎಚ್.ಎಚ್.ಆರ್. ಪಿ. 2ಹೊಳೆಹೊನ್ನೂರಿನ ಸಮೀಪದ ಆನವೇರಿಯ ಹಿರಿ ಮಾವುರದಮ್ನ ಸಭಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಆರ್.‌ಪ್ರಸನ್ನಕುಮಾರ್ ಮಾತನಾಡಿದರು. ಶ್ರೀನಿವಾಸ್, ಸಿ.ಹನುಮಂತು. ಆರ್.ಉಮೇಶ್ ಇದ್ದರು.  | Kannada Prabha

ಸಾರಾಂಶ

ಪ್ರತಿಯೊಬ್ಬರು ಕೈಜೋಡಿಸಿದರೆ ಪಕ್ಷದ ಕೈ ಬಲಪಡಿಸಬಹುದಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಪ್ರತಿಯೊಬ್ಬರು ಕೈಜೋಡಿಸಿದರೆ ಪಕ್ಷದ ಕೈ ಬಲಪಡಿಸಬಹುದಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು.

ಅವರು ಸಮೀಪದ ಆನವೇರಿಯ ಹಿರಿಮಾವುರದಮ್ಮ ಸಮುದಾಯ ಭವನದಲ್ಲಿ ಗುರುವಾರ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸಂಘಟನೆ ಸದೃಢವಾದರೆ ಮಾತ್ರ ಕಾರ್ಯ ಸಾಧನೆ ಮಾಡಬಹುದು. ಕಾಂಗ್ರೆಸ್ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆಗಳಿಗೆ ಪಕ್ಷದ ಚಿನ್ನೆ ನೀಡಲಾಗುವುದು. ಜಿಲ್ಲೆಯಲ್ಲಿ ಭೂತ್ ಮಟ್ಟದಲ್ಲೆ ಪಕ್ಷ ಸಂಘಟನೆಗೆ ಮುಂದಾಗಬೇಕಿದೆ. ಒಂದೇ ಸುಳ್ಳನ್ನು ನೂರು ಸಲ ಹೇಳಿ ನಿಜವಾಗಿಸುವ ಬಿಜೆಪಿಯವರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಭಾವನಾತ್ಮಕ ಹಾಗೂ ಧಾರ್ಮಿಕ ಭಾವನೆ ಕೆದಕಿ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಪ್ರತಿಯೊಬ್ಬರಿಗೂ ಜವಾಬ್ದಾರಿಯನ್ನು ಹಂಚಲಾಗುವುದು. ಕೆಲಸ ಮಾಡದ ಪದಾಧಿಕಾರಿಗಳು ಕಾರ್ಯಕರ್ತರಾಗಿ ಸೇವೆ ಸಲ್ಲಿಸಬಹುದು. ಗ್ರಾಮಾಂತರದ 31 ಗ್ರಾಪಂಗಳಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾದರೆ ಮಾತ್ರ ಕಾರ್ಯಕರ್ತರು ಉಳಿಯಲು ಸಾದ್ಯ. ಅಭ್ಯರ್ಥಿ ಯಾರೆ ಇರಲಿ. ಪಕ್ಷದ ಚಿಹ್ನೆಗೆ ಮತ ಕೇಳಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಮಾತನಾಡಿ, ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಕಾರ್ಯಕರ್ತರ ಪಡೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಬಾರಿ ಸ್ಥಳೀಯ ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಪಕ್ಷಕೆ ಒಳ್ಳೆಯ ದಿನಗಳು ಬರಲಿವೆ. ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ನಿಯಮಿತವಾಗಿ ಸಭೆಗಳನ್ನು ಅಯೋಜಿಸಲಾಗುವುದು. ಕಾಂಗ್ರೆಸ್ ಉಳಿವಿಗೆ ಕಾರ್ಯಕರ್ತರು ಪಣ ತೊಡಬೇಕಿದೆ ಎಂದರು.

ನಿಕಟಪೂರ್ವ ಅಭ್ಯರ್ಥಿ ಶ್ರೀನಿವಾಸ್ ಕರಿಯಣ್ಣ, ಪ್ರಚಾರ ಸಮಿತಿ ಅಧ್ಯಕ್ಷ ಅರ್.ಉಮೇಶ್, ಹೆಚ್.ಜಿ‌ ಮಲ್ಲಯ್ಯ, ಕೆ.ಅರ್ ಶ್ರೀಧರ್, ಹೆಚ್ ಎನ್ ನಾಗರಾಜ್, ಎ.ಜಿ ಚನ್ನಬಸಪ್ಪ, ನ್ಯಾಮತ್ ಹುಲ್ಲಾ. ರುದ್ರೇಶ್, ಬಿ.ಟಿ.ಹನುಮಂತಪ್ಪ, ಆರ್.ಶ್ರೀನಿವಾಸ್, ಮಹಾಬಳೇಶ್, ಎಂ.ಜಿ.ಗುರುಮೂರ್ತಿ, ಜಯಪ್ಪ. ಚಂದ್ರಶೇಖರ್, ಸುರೇಶ್, ಗಂಗನಗೌಡ, ಜಿ.ನಂದೀಶ್, ತಿರ್ಥಪ್ಪ ಇತರರಿದ್ದರು.

ಪಕ್ಷ ನಿಷ್ಠ ಕಾರ್ಯಕರ್ತರಿಂದ ಪಕ್ಷಕ್ಕೆ ಜೀವ

ಚುನಾವಣೆ ಸಮಯ ಬಂದಾಗ ನಾನು ಅಭ್ಯರ್ಥಿ ಎಂದು ಜನಬಲ ತೋರುವ ಬಹುತೇಕ ಮುಖಂಡರು ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗುತಿಲ್ಲ. ಗ್ರಾಮಾಂತರದಲ್ಲಿ ಸತತವಾಗಿ 4 ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಸೋಲುಂಡರು ಕಾರ್ಯಕರ್ತರು ಪಕ್ಷದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಪಕ್ಷ ನಿಷ್ಠ ಕಾರ್ಯಕರ್ತರು ಇರುವುದರಿಂದ ಗ್ರಾಮಾಂತರದಲ್ಲಿ ಪಕ್ಷ ಜೀವ ಹಿಡಿದುಕೊಂಡಿದೆ ಇನ್ನಾದರೂ ಎಲ್ಲಾ ದೋಷಗಳನ್ನು ನಿವಾರಣೆ ಮಾಡಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಬಲವಾಗಿ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''