ಪ್ರತಿಯೊಬ್ಬರೂ ಕನ್ನಡ ಬಳಸಿದರೆ ತಾನಾಗಿಯೇ ಭಾಷೆ ಬೆಳೆಯುತ್ತದೆ: ಎಂ.ಕೆ.ಮಂಜುನಾಥ್

KannadaprabhaNewsNetwork |  
Published : Nov 03, 2025, 01:45 AM IST
2ಕೆಎಂಎನ್ ಡಿ22 | Kannada Prabha

ಸಾರಾಂಶ

ಕನ್ನಡದ ಕಂಪು ಹರಡಿ ನಾಡಿನೆಲ್ಲೆಡೆ ಹೆಚ್ಚಿನ ರೀತಿಯಲ್ಲಿ ಕನ್ನಡವನ್ನು ಬಳಸಿದರೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಸಾಗುತ್ತದೆ. ಎಲ್ಲರೂ ಒಗ್ಗೂಡಿ ಕನ್ನಡ ಪ್ರೇಮವನ್ನು ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನಾಡಿನ ಪ್ರತಿಯೊಬ್ಬರು ಕನ್ನಡ ಬಳಸಿದರೆ ತಾನಾಗಿಯೇ ಭಾಷೆ ಬೆಳೆಯುತ್ತದೆ ಎಂದು ಗ್ರಾಪಂ ಅಧ್ಯಕ್ಷ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ.ಮಂಜುನಾಥ ಹೇಳಿದರು.

ತಾಲೂಕಿನ ಅರಕೆರೆ ಗ್ರಾಮದ ಕನ್ನಡಾಭಿಮಾನಿ ಕಿಶೋರ್ ಅವರ ಮನೆಯಲ್ಲಿ ಸಮಾನ ಮನಸ್ಕರು ಹಾಗೂ ಮಕ್ಕಳೊಂದಿಗೆ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಮಾತನಾಡಿ, ನಾವು ಕನ್ನಡ ಕಟ್ಟಿ ಬೆಲೆಸಬೇಕು ಎಂದರೆ ನಾವುಗಳು ನಮ್ಮ ಮನೆಯಲ್ಲಿ ಕನ್ನಡ ತನವನ್ನು ಬಿಟ್ಟು ಕೊಡದೆ ಮಾತನಾಡಬೇಕು ಎಂದರು.

ಕನ್ನಡದ ಕಂಪು ಹರಡಿ ನಾಡಿನೆಲ್ಲೆಡೆ ಹೆಚ್ಚಿನ ರೀತಿಯಲ್ಲಿ ಕನ್ನಡವನ್ನು ಬಳಸಿದರೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಸಾಗುತ್ತದೆ. ಎಲ್ಲರೂ ಒಗ್ಗೂಡಿ ಕನ್ನಡ ಪ್ರೇಮವನ್ನು ಬೆಳೆಸಬೇಕು ಎಂದರು.

ಈ ವೇಳೆ ಅಲಯನ್ಸ್ ವಲಯಾಧ್ಯಕ್ಷ ಎ.ಆರ್.ಅನಿಲ್ ಬಾಬು, ಅರಕೆರೆ ರಂಗಭೂಮಿ ದಂತಕಥೆ ಎ.ಹೆಚ್.ಚನ್ನೇಗೌಡ, ಕಸಾಪ ಮಾಜಿ ಅಧ್ಯಕ್ಷ ಅ.ಸೋಮಶೇಖರ್, ನಿವೃತ್ತ ಪ್ರಾ.ಕೃ.ಸ. ಸಂಘದ ಕಾರ್ಯದರ್ಶಿ ಎಂ.ಬಿ.ಅನಂತಯ್ಯ, ಜೆಡಿಎಸ್ ಕುಮಾರ್ , ಆರ್ ಆರ್ ಆರ್ ಬಂಕ್ ಮಾಲೀಕರಾದ ರಜತ್, ಮಧುಸೂದನ್ ಎಂ.ಸಾಗರ್, ಅಲಯನ್ಸ್ ಹೋಬಳಿ ಘಟಕದ ಕಾರ್ಯದರ್ಶಿ ಕಿಶೋರ್ ಹಾಗೂ ವಿದ್ಯಾರ್ಥಿಗಳಾದ ನಿರಂತನ.ಎ.ಕೆ, ಲಕ್ಷ್ಯ.ಎ.ಎಂ, ಹರ್ಷವರ್ಧನ.ಎಂ ಸೇರಿದಂತೆ ಇತರರು ಭಾಗವಹಿಸಿದರು.

ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಕ್ಕೆ ಪ್ರಾಧಿಕಾರ ಆದೇಶ

ಮದ್ದೂರು:

ತಾಲೂಕು ಕಾನೂನು ಸೇವಾ ಸಮಿತಿಯಿಂದ ಕಾರ್ಯನಿರ್ವಹಿಸಲು ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆದೇಶ ಹೊರಡಿಸಿದೆ.

ನೇಮಕವಾದ ಸ್ವಯಂ ಸೇವಕರಿಗೆ ಯಾವುದೇ ರೀತಿಯ ನಿಗದಿತ ಸಂಭಾವನೆ ಇರುವುದಿಲ್ಲ. ಆದರೆ, ಸೇವಾ ಮನೋಭಾವನೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು 2025ರ ನವೆಂಬರ್ 4ರೊಳಗೆ ಕಾನೂನು ಸೇವಾ ಸಮಿತಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೂರ್ವಭಾವಿ ತರಬೇತಿ ಕಡ್ಡಾಯವಾಗಿದ್ದು, ಸಮಿತಿ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಾಗ ನಿಗದಿ ಪಡಿಸಿದ ಗೌರವಧನ ಪಡೆಯಲು ಅರ್ಹರಾಗಿರುತ್ತಾರೆ.

ನಿವೃತ್ತ ಶಿಕ್ಷಕರು, ಸರ್ಕಾರಿ ನೌಕರರು, ಹಿರಿಯ ನಾಗರಿಕರು, ಎಂ.ಎಸ್.ಡಬ್ಲ್ಯೂ ಅಂಗನವಾಡಿ ಕಾರ್ಯಕರ್ತೆಯರು, ಫಿಜಿಷಿಯನ್ ವೈದ್ಯರು, ಕಾನೂನು ಪದವಿ ವಿದ್ಯಾರ್ಥಿಗಳು, ರಾಜಕೀಯೇತರ ಸದಸ್ಯರು, ಮಂಗಳಮುಖಿಯರು, ಎನ್‌ಜಿಓಗಳು, ವಿದ್ಯಾವಂತ ಮತ್ತು ಉತ್ತಮ ನಡತೆ ಉಳ್ಳ ಅರೆಕಾಲಿಕ ಕಾನೂನು ಸೇವೆಗಳ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ