ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಕಲೆ, ಸಂಸ್ಕೃತಿಗಳನ್ನು ಜೀವಂತವಾಗಿ ಇಡುವುದಕ್ಕೆ ದಾರಿಯಾಗುತ್ತದೆ. ನಮ್ಮ ಯುವ ಪೀಳಿಗಾಗಿ ನಮ್ಮ ನಾಡಿನ ಸಂಸ್ಕೃತಿ ಕಲೆಗಳನ್ನು ಹಾಗೂ ಜನಪದ ಗೀತೆಗಳನ್ನು ಜೀವಂತವಾಗಿ ಇಡುವ ಜೊತೆಗೆ ಅವುಗಳನ್ನು ಉಳಿಸಿ ಬೆಳೆಸಬೇಕು.
ಕನ್ನಡಪ್ರಭ ವಾರ್ತೆ ಹಲಗೂರು
ಇತ್ತೀಚೆಗೆ ಜನಪದ ಕಲೆ, ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆ ಮುಂದಾಗಬೇಕು. ಇಲ್ಲದಿದ್ದರೆ ಕಲೆಗಳು ಮೂಲೆಗುಂಪಾದರೆ ಸಮಾಜವೇ ಮೂಕವಾದಂತೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ನಾಗರಾಜು ತಿಳಿಸಿದರು.
ನರೀಪುರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕೆಂಪೇಗೌಡ ಸಂಸ್ಥೆ ಅಧ್ಯಕ್ಷ ಬಿ.ಗಂಗಾಧರ್ ಅವರು ಕೆಂಪೇಗೌಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಹಕಾರದೊಡನೆ ಆಯೋಜಿಸಿದ್ದ ಜನಪದ ಕಲಾ ಮೇಳ 2025- 26ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಕಲೆ, ಸಂಸ್ಕೃತಿಗಳನ್ನು ಜೀವಂತವಾಗಿ ಇಡುವುದಕ್ಕೆ ದಾರಿಯಾಗುತ್ತದೆ. ನಮ್ಮ ಯುವ ಪೀಳಿಗಾಗಿ ನಮ್ಮ ನಾಡಿನ ಸಂಸ್ಕೃತಿ ಕಲೆಗಳನ್ನು ಹಾಗೂ ಜನಪದ ಗೀತೆಗಳನ್ನು ಜೀವಂತವಾಗಿ ಇಡುವ ಜೊತೆಗೆ ಅವುಗಳನ್ನು ಉಳಿಸಿ ಬೆಳೆಸಲು ಬಿ. ಗಂಗಾಧರ್ ತೊಡಗಿಸಿಕೊಂಡಿರುವುದಕ್ಕೆ ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಡೇರಿ ಅಧ್ಯಕ್ಷೆ ರತ್ನಮಾಲ ಮಹದೇವು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು. ಪೂಜಾ ಕುಣಿತ, ಪಟ್ಟದ ಕುಣಿತ, ಚೆಲಿಪಿಲಿ ಗೊಂಬೆ ಕುಣಿತ ಸೇರಿದಂತೆ ಹಲವು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಮಟೆ ಕಲಾವಿದ ಕುಂತೂರ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಚೇತನ್ ಕುಮಾರ್, ಯುಎಸ್ಎಸ್ ಎನ್ ಮಾಜಿ ನಿರ್ದೇರ್ಶಕ ನಾಗರಾಜು, ಗ್ರಾಮದ ಮುಖಂಡರಾದ ಮುರುಳಿ, ಯಜಮಾನ್ ರಾಜು, ಪುಟ್ಟಸ್ವಾಮಿ, ಲಿಂಗಪಟ್ಟಣದ ಗ್ರಾಪಂ ಮಾಜಿ ಸದಸ್ಯ ಮಂಜು, ಸೇರಿದಂತೆ ಇತರರು ಇದ್ದರು.
ನಾಳೆ, ನಾಡಿದ್ದು ನೀರು ಸರಬರಾಜಿನಲ್ಲಿ ವ್ಯತ್ಯಯ
ಮಂಡ್ಯ: ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಲ್ಲಿ ವಿವಿಧ ಆಧಾರದ ಮೇಲೆ ನೌಕರರು ಹೊರಗುತ್ತಿಗೆ ಆಗಸ್ಟ್ 13ರಂದು ಹೊಸ ಕನಿಷ್ಠ ವೇತನ ಕಾಯ್ದೆ ಅನ್ವಯ ವೇತನ ನೀಡಲು ಮತ್ತು ಇತರ ಸದರಿ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿರುವುದರಿಂದ ಸದರಿ ದಿನದಂದು ಮಂಡ್ಯ ನಗರಕ್ಕೆ ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಆದರಿಂದ ಆಗಸ್ಟ್ 13 ಮತ್ತು ಆಗಸ್ಟ್ 14 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಡ್ಯ ಉಪ ವಿಭಾಗ ಕನನೀಸ ಮತ್ತು ಒಚ ಮಂಡಳಿಯ ನಿರ್ವಹಣಾ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.