ಸಾಲ ಕಟ್ಟುವಂತೆ ಒತ್ತಾಯಿಸಿದರೆ ಸಹಾಯವಾಣಿಗೆ ಕರೆ ಮಾಡಿ: ದಂಡಾಧಿಕಾರಿ ಎಸ್.ವಿ.ಲೋಕೇಶ್

KannadaprabhaNewsNetwork | Updated : Feb 13 2025, 09:22 AM IST

ಸಾರಾಂಶ

ಆರ್‌ಬಿಐ ನಿಯಮನುಸಾರ 50 ಮೈಕ್ರೋ ಫೈನಾನ್ಸ್ ಕಂಪನಿಗಳು ಇದ್ದು, ಇದರ ಜೊತೆಗೆ ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳು ಬಡ ಮತ್ತ ಮಧ್ಯಮ ವರ್ಗದವರ ಟಾರ್ಗೆಟ್ ಮಾಡಿಕೊಂಡು ಬರಿ ಬಯೋ ಮೆಟ್ರಿಕ್ ಅಧಾರದ ಮೇಲೆ ಸಾಲ ನೀಡುವ ಮೂಲಕ ಅಧಿಕ ಬಡ್ಡಿ ವಿಧಿಸಿ ಸಾಲ ವಸೂಲಿ ಮಾಡುತ್ತಿವೆ. ಈ ಕಂಪನಿಗಳಿಂದ ದೂರವಿರಬೇಕು.

 ಹಲಗೂರು : ಮೈಕ್ರೋ ಫೈನಾನ್ಸ್ ಕಂಪನಿಯವರು ಮನೆ ಬಳಿ ಬಂದು ಸಾಲ ವಸೂಲಿಗಾಗಿ ಕಿರುಕುಳ ನೀಡುವುದು, ಕರೆ ಮಾಡಿ ತೊಂದರೆ ಕೊಡುವುದು, ಬಲವಂತವಾಗಿ ಸಾಲ ಕಟ್ಟುವಂತೆ ಒತ್ತಾಯಿಸಿದರೆ ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆಗೆ 08232224655 ಕರೆ ಮಾಡಿ ಎಂದು ತಾಲೂಕು ದಂಡಾಧಿಕಾರಿ ಲೋಕೇಶ್ ಕರೆ ನೀಡಿದರು.

ಸಮೀಪದ ಕೊನ್ನಾಪುರ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ಆರ್‌ಬಿಐ ನಿಯಮನುಸಾರ 50 ಮೈಕ್ರೋ ಫೈನಾನ್ಸ್ ಕಂಪನಿಗಳು ಇದ್ದು, ಇದರ ಜೊತೆಗೆ ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳು ಬಡ ಮತ್ತ ಮಧ್ಯಮ ವರ್ಗದವರ ಟಾರ್ಗೆಟ್ ಮಾಡಿಕೊಂಡು ಬರಿ ಬಯೋ ಮೆಟ್ರಿಕ್ ಅಧಾರದ ಮೇಲೆ ಸಾಲ ನೀಡುವ ಮೂಲಕ ಅಧಿಕ ಬಡ್ಡಿ ವಿಧಿಸಿ ಸಾಲ ವಸೂಲಿ ಮಾಡುತ್ತಿವೆ. ಈ ಕಂಪನಿಗಳಿಂದ ದೂರವಿರಬೇಕು ಎಂದರು.

ಮೈಕ್ರೋ ಫೈನಾನ್ಸ್ ಹಾವಳಿ ತಡಗಟ್ಟಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಸರ್ಕಾರವೂ ಗೈಡ್ ಲೈನ್ ರೂಪಿಸುತ್ತಿದ್ದು, ಕಂಪನಿಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.

ಮೈಕ್ರೋ ಫೈನಾನ್ಸ್ ಕಂಪನಿಗಳು ಯಾವುದೇ ಕಾರಣಕ್ಕೂ ಆರ್‌ಬಿಐನ ನಿಯಮನುಸಾರ ಸಾಲ ಹಿಂಪಡೆಯಬೇಕು. ಕಾನೂನು ಬಾಹಿರ, ಬಲವಂತವಾಗಿ ಒತ್ತಾಯದ ಸಾಲ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ನಿಯಮ ಬಾಹಿರವಾಗಿ ವಸೂಲಿಗೆ ಮುಂದಾದರೆ ಅಂತಹ ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕ ಬಿ.ಮಹೇಂದ್ರ ಮಾತನಾಡಿ, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ರಾಜ್ಯಾದ್ಯಂತ ಹಲವು ಸಾವು ನೋವು ಉಂಟಾಗಿದೆ. ಈ ಬಗ್ಗೆ ಸರ್ಕಾರ ಸುಗ್ರೀವಾಜ್ಞೆ ಹೊಡಿಸಿ ಹಲವು ಮಾರ್ಗ ಸೂಚಿಗಳನ್ನು ರೂಪಿಸಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಮೈಕ್ರೋ ಫೈನಾನ್ಸ್ ನಡೆದುಕೊಳ್ಳಬೇಕು. ನಿಯಮ ಮೀರಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಈ ವೇ‍ಳೆ ಕಂದಾಯ ರಾಜಸ್ವ ನಿರೀಕ್ಷಕ ಮಧುಸೂಧನ್, ಗ್ರಾಪಂ ಕಾರ್ಯದರ್ಶಿ ಶಿವ ಕುಮಾರ್, ಬಿಲ್ ಕಲೆಕ್ಟರ್ ಆನಂದ್ , ಗ್ರಾಮ ಸಹಾಯಕರಾದ ಪುಟ್ಟಸ್ವಾಮಿ, ನಂದನ್, ಶಿವಪ್ರಕಾಶ, ಅನೀಲ್, ಆನಂದ, ನವೀನ್, ಮುಖಂಡರಾದ ಆನಂದ ಕುಮಾರ್, ಮರಿಸ್ವಾಮಿ, ಅಂದಾನಯ್ಯ, ಬೋರಲಿಂಗಯ್ಯ, ಅನ್ನದಾನಿ, ಜಯಶಂಕರ್.ಕೆ.ಬಿ, ಸುರೇಶ್, ಮಧುಸೂದನ್, ಶಿವಪ್ರಸಾದ್, ಭೈರವ, ವಸಂತ ಸೇರಿದಂತೆ ಇತರರು ಇದ್ದರು.

Share this article