ಅರಣ್ಯ ಸಂಪತ್ತು ಹೆಚ್ಚಿಸದಿದ್ದರೆ ಜೀವಕುಲಕ್ಕೇ ಸಂಕಷ್ಟ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Jun 13, 2025, 04:02 AM IST
ಫೋಟೊ: 12ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಜನಸಂಖ್ಯೆ ಬೆಳೆದಂತೆ ಪರಿಸರ ನಾಶವೂ ಹೆಚ್ಚುತ್ತಿದೆ. ಕೃಷಿ ಚಟುವಟಿಕೆಗೂ ತೀವ್ರ ಹಿನ್ನಡೆ ಉಂಟಾಗಿ ರೈತ ಸಮೂಹ ಸಮಸ್ಯೆಗೆ ಸಿಲುಕುವಂತಾಗಿದೆ.

ಹಾನಗಲ್ಲ: ಪರಿಸರದ ವಿರುದ್ಧ ಹೋಗುತ್ತಿರುವ ಪರಿಣಾಮ ಋತುಮಾನಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಇನ್ನಷ್ಟು ಆತಂಕ ಎದುರಿಸಬೇಕಾದೀತು ಎಂದು ಶಾಸಕ ಶ್ರೀನಿವಾಸ ಮಾನೆ ಎಚ್ಚರಿಸಿದರು.

ಇಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಕುಮಾರೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರಣ್ಯ ಇಲಾಖೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಸಂಖ್ಯೆ ಬೆಳೆದಂತೆ ಪರಿಸರ ನಾಶವೂ ಹೆಚ್ಚುತ್ತಿದೆ. ಕೃಷಿ ಚಟುವಟಿಕೆಗೂ ತೀವ್ರ ಹಿನ್ನಡೆ ಉಂಟಾಗಿ ರೈತ ಸಮೂಹ ಸಮಸ್ಯೆಗೆ ಸಿಲುಕುವಂತಾಗಿದೆ. ಮನುಷ್ಯ ಕುಲ ಸುಖಕರವಾಗಿ ಬದುಕಬೇಕಾದರೆ ಗಿಡ ನೆಟ್ಟು ಪೋಷಿಸಿ, ಅರಣ್ಯ ಸಂಪತ್ತು ಹೆಚ್ಚಿಸಬೇಕಿದೆ. ಅರಣ್ಯ ನಾಶ ಹೀಗೆಯೇ ಮುಂದುವರಿದರೆ 15-20 ವರ್ಷಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ಇಡೀ ಜೀವಕುಲವೇ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ, ವಲಯ ಅರಣ್ಯಾಧಿಕಾರಿ ಕೆ.ಎನ್. ಗಜೇಂದ್ರ, ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಪ್ರಾಚಾರ್ಯ ಡಾ. ಎಂ.ಎಚ್. ಹೊಳೆಣ್ಣನವರ, ಹಿರಿಯ ಉಪನ್ಯಾಸಕ ಡಾ. ಪ್ರಕಾಶ ಹೊಳೇರ, ಎನ್‌ಎಸ್‌ಎಸ್‌ ಯೋಜನಾಧಿಕಾರಿ ಡಾ. ಸತ್ಯಸಾವಿತ್ರಿ, ಉಪ ವಲಯ ಅರಣ್ಯಾಧಿಕಾರಿ ಬಸವರಾಜ ಜಾಧವ, ಎಸ್.ಕೆ. ರಾಠೋಡ್, ಈಶ್ವರ ನವಲೂರ, ಸತೀಶ್ ನಾಯ್ಕ, ಹನುಮಂತಪ್ಪ ಲಮಾಣಿ, ಗಸ್ತು ಅರಣ್ಯಪಾಲಕರಾದ ಸಂತೋಷ ಸವಣೂರ, ಹನುಮಂತಪ್ಪ ಉಪ್ಪಾರ, ಕೃಷ್ಣ ನಾಯ್ಕ, ರಾಮಚಂದ್ರಪ್ಪ ಎ.ಎನ್., ವಿಶ್ವನಾಥ ರಟ್ಟಿಹಳ್ಳಿ, ಮೌಲಾಸಾಬ, ಶಿವು ನಾಯ್ಕ, ಈರೇಶ ಲಮಾಣಿ, ಫಕ್ಕೀರಪ್ಪ ಮಲ್ಲಿಗಾರ ಇದ್ದರು.ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ 16ರಂದು

ಹಿರೇಕೆರೂರು: ಹಿರೇಕೆರೂರು ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೀವಯ್ಯ ಕಬ್ಬಿಣಕಂತಿಮಠ ಅವರಿಗೆ ನಿಕಟಪೂರ್ವ ಅಧ್ಯಕ್ಷರಿಂದ ಅಧಿಕಾರ ಹಸ್ತಾಂತರ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಜೂ. 16ರಂದು ಬೆಳಗ್ಗೆ 10 ಗಂಟೆಗೆ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ