ಸ್ಥಳ ಕೊಟ್ಟರೆ ಮಹಿಳಾ ಭವನ ನಿರ್ಮಾಣಕ್ಕೆ ಸಹಕರಿಸುವೆ

KannadaprabhaNewsNetwork |  
Published : Jan 24, 2026, 02:15 AM IST
ಪೋಟೋ 10 : ಗಂಗಾಧರನಪಾಳ್ಯದಲ್ಲಿ ಶಾಸಕ ಎನ್. ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಉμÁ ನಾರಾಯಣಸ್ವಾಮಿ, ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು ಹಾಗೂ ಮುಖಂಡರು ಮಹಿಳಾ ಭವನ ಉದ್ಘಾಟಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ನನ್ನ ವಿಧಾನಸಭಾ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಮಹಿಳಾ ಭವನ ನಿರ್ಮಾಣಕ್ಕೆ ಜಾಗ ನೀಡಿದರೆ ಅನುದಾನ ನೀಡಿ ಭವನ ನಿರ್ಮಿಸಿ ಉದ್ಘಾಟಿಸುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ದಾಬಸ್‍ಪೇಟೆ: ನನ್ನ ವಿಧಾನಸಭಾ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಮಹಿಳಾ ಭವನ ನಿರ್ಮಾಣಕ್ಕೆ ಜಾಗ ನೀಡಿದರೆ ಅನುದಾನ ನೀಡಿ ಭವನ ನಿರ್ಮಿಸಿ ಉದ್ಘಾಟಿಸುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಕಣೇಗೌಡನಹಳ್ಳಿ ಗ್ರಾಪಂ ವ್ಯಾಪ್ತಿಯ ಗಂಗಾಧರನಪಾಳ್ಯದಲ್ಲಿ ಮಹಿಳಾ ಭವನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಅನುಕೂಲ ಕಲ್ಪಿಸಲು ಮಹಿಳೆಯರ ಬೇಡಿಕೆಯಂತೆ ಮಹಿಳಾ ಭವನ ನಿರ್ಮಿಸುವ ನಿರ್ಧಾರ ಮಾಡಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಉಷಾ ಮಾತನಾಡಿ, ಶಾಸಕರು ನಮ್ಮ ಗ್ರಾಪಂಗೆ ಸಾಕಷ್ಟು ಅನುದಾನ ನೀಡಿದ್ದು, ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದರು.

ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಶಾಸಕರು ಗ್ರಾಮಸ್ಥರ ಮನವಿ ಸ್ವೀಕಾರ ಮಾಡುವ ಮೂಲಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವ ಭರವಸೆ ನೀಡಿ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಕಣೇಗೌಡನಹಳ್ಳಿಯಲ್ಲಿ 20 ಲಕ್ಷ ರೂ. ಅನುದಾನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ನರಸಿಂಹಮೂರ್ತಿ, ರಂಗಸ್ವಾಮಿ, ಕಣ್ಣೆಗೌಡನಹಳ್ಳಿ ಗ್ರಾಪಂ ಉಪಾಧ್ಯಕ್ಷ ಶಿವಣ್ಣ ಮಾಜಿ ಅಧ್ಯಕ್ಷ ಮಾರೇಗೌಡ, ಲಕ್ಷ್ಮಿದೇವಮ್ಮ ಕೃಷ್ಣಪ್ಪ, ಹಾಲಿ ಸದಸ್ಯ ಮುನಿ ರಾಜು, ಹಿಫಾಯತ್, ರಾಜಮ್ಮ ಇತರರಿದ್ದರು.

ಪೋಟೋ 10 :

ಗಂಗಾಧರನಪಾಳ್ಯದಲ್ಲಿ ಶಾಸಕ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಉಷಾ, ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು ಹಾಗೂ ಮುಖಂಡರು ಮಹಿಳಾ ಭವನ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ