ಶಿರಸಿ: ಒಳ್ಳೆಯ ಜನ ರಾಜಕೀಯಕ್ಕೆ ಬಂದರೆ ಜನಸೇವೆ, ಅಭಿವೃದ್ಧಿ ಮಾಡಲು ಅವಕಾಶವಾಗುತ್ತದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ರಾಮಕೃಷ್ಣ ಹೆಗಡೆ ತತ್ವ, ಸಿದ್ಧಾಂತ, ನ್ಯಾಯ- ನೀತಿ, ಪಕ್ಷದ ಶಿಸ್ತು ಆಚರಣೆಯಲ್ಲಿರುವ ತರುವ ನಾಯಕರು ರಾಜಕೀಯದಲ್ಲಿ ಕಡಿಮೆಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಗಡೆ ರಾಜ್ಯದ ಹಣಕಾಸು ಸಚಿವರವಾಗಿ ಹಲವು ಬಾರಿ ಮುಂಗಡಪತ್ರ ಮಂಡಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.ರಾಮಕೃಷ್ಣ ಹೆಗಡೆ ಜನತಾ ಪಕ್ಷದ ಜನಕರು. ಚಂದ್ರಶೇಖರ ಜತೆ ರಾಷ್ಟ್ರ ಮಟ್ಟದಲ್ಲಿ ಪಕ್ಷ ಬೆಳೆಸಲು ಶ್ರಮಿಸಿದ್ದರು. ಅವರ ಗರಡಿಯಲ್ಲಿ ಬೆಳೆದವರು ನಾವು. ಅವರ ಆಶೀರ್ವಾದದಿಂದಲೇ ಈ ಹಂತಕ್ಕೆ ಬೆಳೆದಿದ್ದೇವೆ. ಹೆಗಡೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಿದ್ದೆ. ಆಗ ಅವರಿಗೆ ಮತ ಹಾಕುವ ಅವಕಾಶ ಇರಲಿಲ್ಲ. ನನಗೆ ಪಕ್ಷದ ಶಿಸ್ತು ಅಡ್ಡ ಬಂದಿತ್ತು. ಆದರೆ ನನ್ನ ಕುಟುಂಬದವರು ಆಗ ಹೆಗಡೆ ಅವರಿಗೆ ಬೆಂಬಲಿಸಿದ್ದರು. ಆ ಚುನಾವಣೆಯಲ್ಲಿ ಜಿಲ್ಲೆಯ ಜನರ ಬೆಂಬಲ ದೊರೆಯದ್ದರಿಂದ ದೇಶದ ಹಣಕಾಸು ಸಚಿವರಾಗಿ ಹೆಗಡೆ ಅವರನ್ನು ನೋಡುವ ಅವಕಾಶ ತಪ್ಪಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ದೇಶಪಾಂಡೆ ಪತ್ನಿ ರಾಧಾ ದೇಶಪಾಂಡೆ, ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ದೀಪಕ ಹೆಗಡೆ ದೊಡ್ಡೂರು, ರಮಾನಂದ ನಾಯ್ಕ, ಗಣೇಶ ದಾವಣಗೇರೆ, ಸತೀಶ ನಾಯ್ಕ ಆರ್.ಎಂ.ಹೆಗಡೆ ಹಲಸರಿಗೆ ಮತ್ತಿತರರು ಇದ್ದರು.ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಗಳು ಕಡಿಮೆಯಾಗಿ ಒಳ್ಳೆಯ ಜನ ರಾಜಕೀಯಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಕ್ಷೇತ್ರಕ್ಕೆ ಒಳ್ಳೆಯ ಜನ ಬರಬೇಕು. ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎನ್ನುತ್ತಾರೆ ಶಾಸಕ ಆರ್.ವಿ. ದೇಶಪಾಂಡೆ.