ಕನ್ನಡಪ್ರಭ ವಾರ್ತೆ ಹಳೇಬೀಡುಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು ಸ್ಥಳೀಯ ಜನತೆಯ ಸಹಕಾರ ಬಹುಮುಖ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೇಲೂರು ತಾಲೂಕಿನ ಅಧ್ಯಕ್ಷ ಪಾಲಾಕ್ಷ ಎಸ್. ಬಿ. ತಿಳಿಸಿದರು.ಹಳೇಬೀಡು ಸಮೀಪದ ಘಟ್ಟದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ರಾಜ್ಯಸರ್ಕಾರ ನಲಿ ಕಲಿ ಆದೇಶವನ್ನು ತೆಗೆದು ಸರ್ಕಾರಿ ಹಲವು ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿಯನ್ನು ಸೇರಿಸಿ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದರು. ಈ ಸಣ್ಣ ಊರಿನಲ್ಲಿ ವಾರ್ಷಿಕೋತ್ಸವವನ್ನು ಇಷ್ಟು ವಿಜೃಂಭಣೆಯಿಂದ ಅಂದರೆ ಎಲ್‌ಇಡಿ, ಟೀವಿ, ಕಲರ್ ಲೈಟ್‌ಗಳು ಆಧುನಿಕ ಮೈಕ್ ಎಲ್ಲವನ್ನು ನೋಡಿ ಅದ್ಭುತವಾದ ಕಾರ್ಯಕ್ರಮವಾಗಿದೆ. ಹಳೇಬೀಡು ಕೆಪಿಎಸ್ ಶಾಲೆಯ ಸರ್ವಸಮವಾಗಿ ದೊಡ್ಡ ಕಾರ್ಯಕ್ರಮ ಗ್ರಾಮಾಂತರ ಪ್ರದೇಶದಲ್ಲಿ ಇದೇ ಪ್ರಥಮ ಎಂದು ತಿಳಿಸಿದರು.ರಾಜ್ಯ ನೌಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಪೂರ್ಣೇಶ್ ಮಾತನಾಡುತ್ತಾ, ಸರಕಾರಿ ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಕಡಿಮೆ ಆಗುತ್ತಿರುವುದರಿಂದ ಸರ್ಕಾರಿ ಶಾಲಾ ಶಿಕ್ಷಣ ಕುಂಠಿತವಾಗಿದೆ. ಇಂದಿನ ಮಕ್ಕಳಿಗೆ ಶಿಕ್ಷಕರು ಯಾವ ಶಿಕ್ಷೆಯನ್ನು ಕೊಡಬಾರದು ಕೊಟ್ಟರೆ ಪೋಷಕರು ಬಂದು ನಮ್ಮ ಮೇಲೆ ದೂರು ನೀಡುತ್ತಾರೆ. ಇಂದಿನ ಮಕ್ಕಳು ದೂರದರ್ಶನ, ಮೊಬೈಲ್ ವ್ಯಾಮೋಹಕ್ಕೆ ಹೋಗಿ ಪುಸ್ತಕಗಳ ಓದುವ ಹವ್ಯಾಸ ಕಡಿಮೆಯಾಗಿದೆ, ಇದರ ಬಗ್ಗೆ ಶಿಕ್ಷಕರು ಏನು ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪೋಷಕರು ಸಹಕಾರ ನೀಡಬೇಕು ಎಂದು ತಿಳಿಸಿದರು.ಕ್ಲಸ್ಟರ್ ಸಿಆರ್‌ಪಿಕೆಎಸ್ ಪಾಲಾಕ್ಷ ಮಾತನಾಡುತ್ತಾ, ಈ ಶಾಲೆಯಲ್ಲಿ ಸುಮಾರು ೪೭ ಮಕ್ಕಳು ಹೊಂದಿದ್ದು ೧ರಿಂದ ೭ನೇ ತರಗತಿಯಲ್ಲಿ ನಾಲ್ಕು ಜನ ಶಿಕ್ಷಕರು ತಮ್ಮ ಪಾಠ ಪ್ರವಚನವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಒಳ್ಳೆಯ ಫಲಿತಾಂಶ ನೀಡುತ್ತಿದ್ದು, ಶಾಲೆಯಲ್ಲಿ ಅದ್ಭುತವಾದ ವಾರ್ಷಿಕೋತ್ಸವ ಕಾರ್ಯಕ್ರಮವಾಗಿದೆ. ಇಲ್ಲಿಯ ಮುಖ್ಯ ಶಿಕ್ಷಕ ರಮೇಶ್ ಎಲ್ಲಾ ಶಿಕ್ಷಕರನ್ನು ಸಮಾನತೆಯ ಕಂಡು ಶಾಲೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಈ ವಾರ್ಷಿಕೋತ್ಸವದಲ್ಲಿ ಹೆಚ್ಚಿನ ರೀತಿಯಲ್ಲಿ ಅವರದೇ ಶ್ರಮವನ್ನು ಹಾಕಿ ವಾರ್ಷಿಕೋತ್ಸವದಲ್ಲಿ ಸುಮಾರು ೨೫ರಿಂದ ೩೦ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳಲ್ಲಿ ಮಾಡಿಸಿ ಗ್ರಾಮಾಂತರ ಪ್ರದೇಶ ಹೆಚ್ಚುಗಾರಿಕೆ ವಿಷಯವಾಗಿದೆ. ಈ ವಾರ್ಷಿಕೋತ್ಸವಕ್ಕೆ ಸಹಕಾರ ನೀಡಿದ ಹಳೇ ವಿದ್ಯಾರ್ಥೀಗಳು, ಗ್ರಾಮಸ್ಥರಿಗೆ ಗೌರವ ಸಮಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ರಘು ವಹಿಸಿದ್ದರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖ್ಯ ಶಿಕ್ಷಕರಾದ ರಮೇಶ, ಮೋಹನ್ ಕುಮಾರ್, ಭೂದೇಶ್, ಶರತ್ ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದರು.