- ಸೈದಾಪುರದಲ್ಲಿ ಹಿಂದೂ ವಿರಾಟ್ ಸಮ್ಮೇಳನದಲ್ಲಿ ಧರ್ಮಜಾಗರಣ ಸಮನ್ವಯ ಕಾರ್ಯಕಾರಣಿ ಸದಸ್ಯ ದಿಲೀಪ್ ವೆರ್ಣೇಕರ್ ಅಭಿಮತ
ಕನ್ನಡಪ್ರಭ ವಾರ್ತೆ ಸೈದಾಪುರ
ಭಾರತೀಯರು ಜಗತ್ತಿಗೆ ಸಂಸ್ಕೃತಿಯನ್ನು, ನಾಗರಿಕತೆಯನ್ನು, ಬದುಕುವ ಕಲೆಯನ್ನು ಹೇಳಿಕೊಟ್ಟವರು. ನಮ್ಮ ದೇಶ ಉಳಿಯಬೇಕೆಂದರೆ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಸಂಘಟರಾಗಬೇಕು ಎಂದು ಧರ್ಮಜಾಗರಣ ಸಮನ್ವಯ ಕಾರ್ಯಕಾರಣಿ ಸದಸ್ಯ ದಿಲೀಪ್ ವೆರ್ಣೇಕರ್ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾವೇಶ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸನಾತನ ಧರ್ಮವನ್ನು ನಾವು ಉಳಿಸುವ ಕೆಲಸ ಮಾಡಬೇಕು, ಈ ಧರ್ಮದ ಉಳಿವು ಜಗತ್ತಿನ ಕ್ಷೇಮದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ, ಧರ್ಮವನ್ನು ಗಟ್ಟಿಯಾಗಿ ನೆಲೆಗೊಳಿಸಬೇಕು. ಈ ನೆಲದ ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ತಲುಪಿಸಬೇಕು. ಆದ್ದರಿಂದ, ಹಿಂದೂಗಳೆಲ್ಲರೂ ಸ್ವಯಂ ಜಾಗೃತಿಯಾಗಬೇಕು ಎಂದರು.ಕಡೇಚೂರ ಸಂಸ್ಥಾನ ಮಠದ ಪೀಠಾಧಿಪತಿ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ದೇಶದ ಹಿಂದೂಗಳೆಲ್ಲರೂ ಹಿಂದೂ ಧರ್ಮದ ಸಂಸ್ಕೃತಿ ಹಿಂದೂ ಧರ್ಮದ ಆಚಾರ ವಿಚಾರ ತಿಳಿದುಕೊಳ್ಳಬೇಕು. ಈ ದೇಶ, ಸಂಸ್ಕೃತಿ, ಭೂಮಿ ನನ್ನದು ಎಂಬ ಭಾವನೆ ಮೂಡಬೇಕು. ತಂದೆ ತಾಯಿಗಳು ನಮ್ಮ ಪರಂಪರೆ, ಸಂಸ್ಕೃತಿ ಅರಿತು ನಮ್ಮ ಮಕ್ಕಳಿಗೆ ಕಲಿಸಿ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಜೊತೆಯಲ್ಲಿ ನಮ್ಮ ಧರ್ಮ ಸಂಸ್ಕೃತಿ ಗೌರವಿಸುವುದನ್ನು ಕಲಿಸಿಕೊಡಿ. ನಮ್ಮ ದೇಶದ ಸಂಸ್ಕೃತಿ ಬಗ್ಗೆ ಜಾಗೃತರಾಗದಿದ್ದರೆ ಧರ್ಮ ಉಳಿಸಲು ಕಷ್ಟ. ನಾವು ಜಾಗೃತರಾಗಬೇಕು. ನಮ್ಮ ಸಂಸ್ಕೃತಿ, ಧರ್ಮದ ಬಗ್ಗೆ ಚಿಂತನೆ ಮಾಡಬೇಕು ಎಂದು ಆಶೀರ್ವಚನ ನೀಡಿದರು. ಸಿದ್ಧಾರೂಡ ಮಠ ಪೀಠಾಧಿಪತಿ ಶ್ರೀ ಸೋಮೇಶ್ವರನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಸಮ್ಮೇಳನ ಆಯೋಜನ ಸಮಿತಿಯ ಅಧ್ಯಕ್ಷ ಸಿದ್ಧಲಿಂಗಯ್ಯ ಸ್ವಾಮಿ, ಮಹಿಳಾ ಪ್ರತಿನಿಧಿ ರೇಣುಕಾ ಬಗಡೆ, ಗಂಗಾಧರ ಚಂದ್ರಗಿರಿ, ಬಿ ಬಿ ಹೆಬ್ಬಾಳ, ನಿತಿನ್ ತಿವಾರಿ, ಮಲ್ಲರೆಡ್ಡಿಗೌಡ ಖಾನಪುರ, ಪ್ರಭು ಗೂಗಲ್, ತಾಯಪ್ಪ ಚಿಗರಿ, ಪರ್ವತರೆಡ್ಡಿ ದದ್ದಲ್, ಮಲ್ಲಿಕಾರ್ಜುನ ಗಡದ್, ವಿರೇಶ ಸಜ್ಜನ್, ನಂದಗೋಪಲ ಪಟವಾರಿ, ರಾಹುಲ್ ಅನಂಪಲ್ಲಿ, ಶ್ರಿದೇವಿ ಶೆಟ್ಟಿಹಳ್ಳಿ, ಕಮಲಾ ಕುಲಕರ್ಣಿ, ಗಂಗಾಧರ ಸ್ವಾಮಿ, ಕಾಶಿನಾಥ ಶೆಟ್ಟಿಹಳ್ಳಿ ಸೇರಿದಂತೆ ಇತರರಿದ್ದರು.-
ಕೋಟ್- 1:ಜಗತ್ತು ನಮ್ಮ ಯೋಗ, ಆರ್ಯುವೇದ ಸಂಸ್ಕೃತವನ್ನು ಅನುಸರಿಸುತ್ತಿದ್ದಾರೆ. ಹಿಂದೂಗಳು ಒಗ್ಗಟ್ಟಾದರೆ ಏನನ್ನು ಬೇಕಾದರೂ ಸಾಧಿಸಬಹುದು. ಹಿಂದೂ ಒಗ್ಗಟ್ಟಾದರೆ ಹಿಂದೂವಿನ ಮಾತನ್ನು ಜಗತ್ತು ಕೇಳಿತ್ತದೆ. ಏಕೆಂದರೆ ಹಿಂದೂವಿನ ಮಾತಿನಲ್ಲಿ ಸತ್ಯ ಇದೆ. ನಾವೆಲ್ಲಾ ಜಾತಿ ಉಪಜಾತಿಯಲ್ಲಿ ಬೇರೆ ಬೇರೆಯಾದರೂ ನಮ್ಮನ್ನು ವಿದೇಶದಲ್ಲಿ ಹಿಂದೂಗಳೇ ಎನ್ನುವುದು. ಹಿಂದೂ ಎಂದರೆ ಅವರು ಒಳ್ಳೆಯವರು. ಒಳ್ಳೆಯದನ್ನು ಪಾಲಿಸುವವರು ಹಿಂದೂ. ನಿತ್ಯ ಜೀವನದ ನಡವಳಿಕೆಯೇ ಹಿಂದೂ.
-ಶ್ರೀ ಸೋಮೇಶ್ವರನಂದ ಮಹಾಸ್ವಾಮಿ, ಪೀಠಾಧಿಪತಿ ಸಿದ್ಧಾರೂಡ ಮಠ ಸೈದಾಪುರ.-
31ವೈಡಿಆರ್5 : ಸೈದಾಪುರ ಪಟ್ಟಣದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾವೇಶ ಸಮಾರಂಭದಲ್ಲಿ ಧರ್ಮಜಾಗರಣ ಸಮನ್ವಯ ಕಾರ್ಯಕಾರಣಿ ಸದಸ್ಯ ದಿಲೀಪ್ ವೆರ್ಣೇಕರ್ ಮುಖ್ಯ ವಕ್ತಾರರಾಗಿ ಮಾತನಾಡಿದರು.