ಕನ್ನಡಪ್ರಭ ವಾರ್ತೆ ಕಾಪುನಾನು ದೇವಸ್ಥಾನಕ್ಕೆ ಹೋದದ್ದಕ್ಕೆ ರಾಜ್ಯದಲ್ಲಿ ಸಂಚಲನೆ ಆಗುತ್ತಿದೆ. ಕೆಲವರು ಲೆಕ್ಕಾಚಾರ ಮಾಡುತ್ತಿದ್ದಾರೆ, ಆದರೆ ಅಂತಹ ಯಾವುದೇ ಲೆಕ್ಕಾಚಾರಗಳ ಅವಶ್ಯಕತೆ ನನಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅವರು ಭಾನುವಾರ ಇಲ್ಲಿನ ಸಂಪೂರ್ಣ ನವೀಕೃತ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.ಹಿಂದೆ ನನ್ನ ಕ್ಷೇತ್ರದಲ್ಲಿ ಏಸುವಿನ ವಿಗ್ರಹ ಸ್ಥಾಪನೆಗೆಸಹಾಯ ಮಾಡಿದ್ದಾಗ, ಕರಾವಳಿಯ ನಾಯಕರೊಬ್ಬರು ನನ್ನನ್ನು ಏಸುಕುಮಾರ ಎಂದು ಕರೆದಿದ್ದರು. ಯಾರೋ ಒಬ್ಬ ಸಂಸದ, ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ, ಬರೀ ಪಂಕ್ಚರ್ ಹಾಕೋಕೆ ಲಾಯಕ್ಕು ಎಂದಿದ್ದ, ಆಗ ಅವರೆಲ್ಲ ನಮ್ಮ ಬ್ರದರ್ಸ್ ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ, ಅದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು. ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲೂ ಏನೋ ಒಂದು ಕರೀತಾರೆ. ನಾನು ಕುಂಭಮೇಳಕ್ಕೆ ಹೋಗಿದ್ದೆ, ಅದಕ್ಕೂ ಏನೋ ಹೇಳಿದರು, ಅಲ್ಲಿ ನೀರಿಗೆ ಏನಾದರೂ ಜಾತಿ, ಧರ್ಮ ಇದೆಯಾ? ನೀರಿಗೆ ಪಕ್ಷ ಇದೆಯಾ? ಟಿ.ನರಸೀಪುರದ ಕುಂಭಮೇಳದಲ್ಲೂ ನಾನು ಭಾಗಿಯಾಗಿದ್ದೇನೆ, ಕುಂಭಮೇಳದಲ್ಲಿ ಭಾಗಿ ಆದರೆ ತಪ್ಪೇನಿದೆ ಎಂದವರು ಪ್ರಶ್ನಿಸಿದರು.ಯಾರು ಯಾವ ಲೆಕ್ಕಚಾರ ಬೇಕಾದರೂ ಹಾಕಿಕೊಳ್ಳಲಿ, ನನಗೆ ಯಾವ ಲೆಕ್ಕಾಚಾರನೂ ಅವಶ್ಯಕತೆ ಇಲ್ಲ ಎಂದರು.........................
ಬಿಜೆಪಿ ಮನೆ ಸರಿಯಾಗಲಿಈಶಾ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಕೆ. ಶಿವಕುಮಾರ್ ಅವರ ಹಿಂದುತ್ವ ನಿಲುವನ್ನು ಶ್ಲಾಘಿಸಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಹಿಂದುಗಳ ಭದ್ರಕೋಟೆ ಉಡುಪಿಗೆ ಸ್ವಾಗತ ಎಂದಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಒಳ್ಳೇದಾಗಲಿ, ರಾಜ್ಯಕ್ಕೆ ಒಳ್ಳೆದಾಗಲಿ, ಮೊದಲು ಅವರ ತಮ್ಮ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
-------------------------------------ಕಂಡಿಶನ್ನು ಬ್ಲ್ಯಾಕ್ ಮೇಲ್, ನನ್ನ ಬ್ಲಡ್‌ನಲ್ಲಿಯೇ ಇಲ್ಲ: ಶಿವಕುಮಾರ್ಕನ್ನಡಪ್ರಭ ವಾರ್ತೆ ಉಡುಪಿತಾವು ದೆಹಲಿಗೆ ಹೋದದ್ದು ಮುಖ್ಯಮಂತ್ರಿಯಾಗುವ ಬಗ್ಗೆ ಹೈಮಾಂಡ್ ಜೊತೆ ಚರ್ಚೆ ಮಾಡುವುದಕ್ಕಲ್ಲ. ಅಧಿಕಾರ ಹಂಚಿಕೆ ಬಗ್ಗೆ ನಾನು ಯಾರಿಗೂ ಕಂಡೀಶನ್ ಹಾಕಿಲ್ಲ, ಕಂಡಿಶನ್ನು, ಬ್ಲ್ಯಾಕ್ ಮೇಲ್ ನನ್ನ ಬ್ಲಡ್‌ನಲ್ಲಿಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಡೀಷನ್ ಹಾಕುವ ಅವಶ್ಯಕತೆ ನನಗೆ ಇಲ್ಲ. ಪಕ್ಷ ಏನು ಹೇಳುತ್ತದೆ, ಅಷ್ಟು ಕೆಲಸ ಮಾಡುವವನು. ಅದು ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ, ಐ ಆ್ಯಮ್ ಎ ಲಾಯಲ್ ಕಾಂಗ್ರೆಸ್ ವರ್ಕರ್, ನನ್ನ ಡೆಡಿಕೇಶನ್ ಪಕ್ಷಕ್ಕೆ, ಗಾಂಧಿ ಫ್ಯಾಮಿಲಿಗೆ ಎಂದರು.ಬಿಜೆಪಿಯಲ್ಲಿ ನನ್ನ ಬಗ್ಗೆ ಯಾರು ಏನೇ ಯೋಚನೆ ಮಾಡುತ್ತಿದ್ದರೂ ಅದು ಅವರ ಭ್ರಮೆ. ಬಿಜೆಪಿಯವರು ಕನ್ಫ್ಯೂಷನ್ ಆಗಿದ್ದಾರೆ, ಆಗಲೇಬೇಕಲ್ಲ, ಅವರು ಆಗ್ಲಿ, ನನ್ನ ಬಗ್ಗೆ ಮಾತನಾಡಿಲ್ಲ ಅಂದ್ರೆ ಕೆಲವರಿಗೆ ಸಮಾಧಾನ ಇರುವುದಿಲ್ಲ. ಇಷ್ಟು ಮಾತ್ರ ನಾನು ಹೇಳುತ್ತೇನೆ, 2028ರಲ್ಲಿ ಕಾಂಗ್ರೆಸ್ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.ಕರಾವಳಿಗೊಂದು ನೀತಿ:ಕರಾವಳಿಯ ಜನರು ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ಅವರು ಬೇರೆ ಕಡೆಗೆ ವಲಸೆ ಹೋಗುವುದು ತಪ್ಪಬೇಕು, ಪ್ರವಾಸೋದ್ಯಮದ ಮೂಲಕ ಇಲ್ಲಿನ ಯುವಕರು ಉದ್ಯೋಗ ಪಡೆಯಬೇಕು, ಆದ್ದರಿಂದ ಕರಾವಳಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ವಿಶೇಷ ನೀತಿ ರೂಪಿಸುವಂತೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಹೇಳಿದ್ದೇನೆ ಎಂದರು.
---------------------------------------ರಾಜ್ಯದ 100 ಅಸೆಂಬ್ಲಿ ಕ್ಷೇತ್ರಗಳಿಗೆ ನೂತನ ಕಾಂಗ್ರೆಸ್ ಕಚೇರಿರಾಜ್ಯದಲ್ಲಿ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಕಾಂಗ್ರೆಸ್ ಕಚೇರಿ ತೆರೆಯುತ್ತೇವೆ. ಉಡುಪಿಯಲ್ಲಿ ನಿವೇಶನ ಗುರುತಿಸಿ, ಮುಂದಿನ ತಿಂಗಳು ರಾಹುಲ್ ಗಾಂಧಿ ಅವರು ಈ 100 ಕಚೇರಿಗಳಿಗೆ ಬೆಂಗಳೂರಿನಲ್ಲಿ ಭೂಮಿ ಪೂಜೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದ ಅವರು ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.ನಿವೇಶನವನ್ನು ಗುರುತಿಸಿ ಅದನ್ನು ಕಡ್ಡಾಯವಾಗಿ ಕೆಪಿಸಿಸಿ ಹೆಸರಿಗೆ ನೋಂದಣಿ ಮಾಡಬೇಕು. ಉಡುಪಿ ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಲಿಕ್ಕೆ ನಾನೂ 5 ಲಕ್ಷ ರು. ನೀಡಿದ್ದೇನೆ. ಕಾಪುನಲ್ಲಿ ಭಕ್ತರೇ ಸೇರಿ ದೇವಾಲಯ ಕಟ್ಟಿದ್ದಾರೆ. ಹಾಗೇ ಕಾಂಗ್ರೆಸ್ ಕಚೇರಿಗಳು ಕೂಡ ದೇವಸ್ಥಾನ ಇದ್ದಂತೆ, ಅದನ್ನು ನೀವೇ ಹಣ ಸಂಗ್ರಹಿಸಿ ಕಟ್ಟಬೇಕು ಎಂದು ನಾಯಕರಿಗೆ ಸೂಚಿಸಿದರು.------------------------------
ವ್ಯಕ್ತಿ ಅಲ್ಲ, ಪಕ್ಷ ಪೂಜೆ ಮಾಡಿಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ನಾಯಕರ ಸಭೆಯಲ್ಲಿ ಮಾತನಾಡುವಾಗ ಶಿಳ್ಳೆ ಹೊಡೆದ ಕಾಂಗ್ರೆಸ್ ಕಾರ್ಯಕರ್ತರನ್ನು ಲಘುವಾಗಿ ಗದರಿಸಿದ ಡಿ.ಕೆ.ಶಿವಕುಮಾರ್, ಶಿಳ್ಳೆ ಹೊಡೆಯೋದನ್ನು ಬಿಡಿ, ಇದು ಕಾಂಗ್ರೆಸ್ ಕಚೇರಿ ದೇವಸ್ಥಾನ ಇದ್ದಂತೆ. ಪಕ್ಷಕ್ಕೆ, ಕಚೇರಿಗೆ ಗೌರವ ಕೊಡಬೇಕು, ವ್ಯಕ್ತಿ ಪೂಜೆ ಮಾಡುವುದನ್ನು ಬಿಡಿ, ಪಕ್ಷ ಪೂಜೆ ಮಾಡಿ ಎಂದರು.