- ಗುರುಮಠಕಲ್ ಮತಕ್ಷೇತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ದಂಧೆ
- ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಭೇಟಿಯಾದ ಶಾಸಕ ಶರಣಗೌಡ ಕಂದಕೂರ
--ಕನ್ನಡಪ್ರಭ ವಾರ್ತೆ ಯಾದಗಿರಿ
ಮಂಗಳವಾರ ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಶಾಸಕ ಕಂದಕೂರ, ಬುಧವಾರ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಂ ಅವರೆನ್ನು ಭೇಟಿಯಾಗಿ ತೀವ್ರ ಅಸಮಾಧಾನ ಹೊರಹಾಕಿದರು.
....ಬಾಕ್ಸ್:1....
ಅಕ್ರಮ ಮರಳು ಸಾಗಾಟಕ್ಕೆ ನಕಲಿ ರಾಯಲ್ಟಿ ಬಳಸುತ್ತಿರುವ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಸೈದಾಪುರದಲ್ಲಿ ಪೊಲೀಸ್ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿದಾಗ ನಕಲಿ ರಾಯಲ್ಟಿ ಕುರಿತು ಮಾಹಿತಿ ಲಭ್ಯವಾಗಿತ್ತು. ಆದರೆ, ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ನಡೆದಿಲ್ಲ ಎಂದು ಆರೋಪಿಸಿದ ಶಾಸಕ ಕಂದಕೂರ, ನಕಲಿ ರಾಯಲ್ಟಿ ಸಿದ್ಧಪಡಿಸುವವರು, ಮರಳು ಸಾಗಿಸುವವರು, ಖರೀದಿಸುವವರು ಹಾಗೂ ಅಕ್ರಮ ಸಾಗಾಟಕ್ಕೆ ಸಹಕರಿಸುವವರ ಜಾಲವನ್ನು ಪತ್ತೆಹಚ್ಚಬೇಕು. ಕೇವಲ ಟಿಪ್ಪರ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಪ್ರಕರಣ ಮುಗಿಸಬಾರದು. ಅಕ್ರಮ ಮರಳು ಸಾಗಾಟ ತಡೆಯುವ ಜವಾಬ್ದಾರಿ ಪೊಲೀಸ್, ಕಂದಾಯ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಗಳ ಮೇಲಿದೆ. ಪರಸ್ಪರ ಆರೋಪ ಮಾಡುವ ಬದಲು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮದ ಮೂಲವನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.
ಒಂದು ರುಪಾಯಿನೂ ಲಂಚ ಪಡೆದಿಲ್ಲ
====ಬಾಕ್ಸ್:3===
ಪೊಲೀಸ್ ಇಲಾಖೆ ಜನರ ವಿಶ್ವಾಸ ಗಳಿಸಬೇಕು. ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದಾಗ ಪಕ್ಷಪಾತವಿಲ್ಲದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಂದಕೂರ, ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಬಡವರು ಯಾವುದೇ ಪ್ರಭಾವ, ಶಿಫಾರಸು ಅಥವಾ ಮಧ್ಯವರ್ತಿಗಳಿಲ್ಲದೆ ನ್ಯಾಯ ಪಡೆಯುವಂತಾಗಬೇಕು. ಪೊಲೀಸ್ ಠಾಣೆಗೆ ಬಂದ ಬಡ ವ್ಯಕ್ತಿ ತನ್ನ ಸಮಸ್ಯೆಗೆ ನ್ಯಾಯ ಪಡೆಯಲು ರಾಜಕೀಯ ನಾಯಕರ ದೂರವಾಣಿ, ಪ್ರಭಾವಿ ವ್ಯಕ್ತಿಗಳ ಶಿಫಾರಸು ಅಥವಾ ಸಂಘಟನೆಗಳ ಹೋರಾಟದ ಅವಶ್ಯಕತೆ ಇರಬಾರದು, ದುಡ್ಡು ಕೊಡದೇ ಯಾವ ಕೆಲಸಗಳೂ ಆಗುತ್ತಿಲ್ಲ ಎಂದರು.
ಶಾಸಕ ಕಂದಕೂರ ಅವರು ಹೊತ್ತು ತಂದಿದ್ದ ಮಹತ್ವದ ಬೇಡಿಕೆಗಳನ್ನು ಶಾಂತಚಿತ್ತದಿಂದ ಆಲಿಸಿದ ಡಿಸಿ ರಾಹುಲ್ ಪಾಂಡ್ವೆ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಇದ್ದರು.====ಬಾಕ್ಸ್:4====
* ಎಸ್ಪಿ ಬಗ್ಗೆ ಶಾಸಕ ಕಂದಕೂರ ಅಸಮಾಧಾನಜಿಲ್ಲಾಧಿಕಾರಿಯವರೆದುರು ಎಸ್ಪಿಯವರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಶಾಸಕ ಕಂದಕೂರ, ಅಕ್ರಮ ಮರಳು ದಂಧೆ ಬಗ್ಗೆ ಸಾಕ್ಷಿ ಸಮೇತ ಮಾಹಿತಿ ನೀಡಿದರೂ ಗಂಭಿರವಾಗಿ ಪರಿಗಣಿಸುತ್ತಿಲ್ಲ. ಅವರ ಮಾತನಾಡುವ ದಾಟಿ ಅಚ್ಚರಿ ಮೂಡಿಸಿದೆ, ಆ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು. ಡಿಸಿ, ಎಸ್ಪಿ ಕಚೇರಿಯೆದುರಿನ ಮುಖ್ಯರಸ್ತೆಯಲ್ಲೇ ನಂಬರ್ ಪ್ಲೇಟ್ ಇಲ್ಲದ ಅಕ್ರಮ ಮರಳಿನ ಟಿಪ್ಪರ್ ತೆರಳುತ್ತಿರುವ ಫೋಟೊ ತೋರಿಸಿ, ಅಕ್ರಮದ ಸ್ಯಾಂಪಲ್ ಇದಾಗಿದೆ ಎಂದರು.
..ಕೋಟ್..ಗುರುಮಠಕಲ್ ನಲ್ಲಿ ಅಕ್ರಮ ಮರಳುಗಾರಿಕೆ ತಡೆಯಬೇಕು ಮತ್ತು ಓವರ್‌ಲೋಡ್ ವಾಹನಗಳ ಸಂಚಾರಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಜಿಲ್ಲಾಡಳಿತದಿಂದ ಆಗದಿದ್ದರೇ ನಾನೇ ಅವುಗಳಿಗೆ ಬೆಂಕಿ ಹಚ್ಚಿ ಸುಡುತ್ತೇನೆ, ನಂತರ ನನ್ನ ಮೇಲೆ ಏನೇ ಕಾನೂನು ಕ್ರಮವಾದರೂ ಎದುರಿಸುತ್ತೇನೆ.
-ಶರಣಗೌಡ ಕಂದಕೂರ, ಶಾಸಕ, ಗುರುಮಠಕಲ್.(7ವೈಡಿಆರ್3)
ಫೋಟೊ:7ವೈಡಿಆರ್1ಯಾದಗಿರಿ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಂ ಅವರನ್ನು ಭೇಟಿಯಾಗಿ, ಅಕ್ರಮ ಮರಳು ದಂಧೆ ಬಗ್ಗ ಫೋಟೋಗಳ ಪ್ರದರ್ಶಿಸಿ ದೂರು ನೀಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ.
-7ವೈಡಿಆರ್2 : ಮರಳು ಸಾಗಾಟದ ಬಗ್ಗೆ ಎನ್ನಲಾದ ನಕಲಿ ಪರ್ಮಿಟ್ ಬಗ್ಗೆ ಡಿಸಿಗೆ ದೂರು ನೀಡಿದ ಶಾಸಕ ಕಂದಕೂರ.