ಕನ್ನಡಪ್ರಭ ವಾರ್ತೆ ಜಮಖಂಡಿ
ಗ್ರಾಮದ ಗಾಂವಠಾಣಾ ಜಾಗೆಯನ್ನು ಮಹಳಿಂಗರಾಯ ದೇವಸ್ಥಾನಕ್ಕೆ ಬಳಸಿಕೊಳ್ಳಲು ಗ್ರಾಪಂನಿಂದ ಅನುಮೋದನೆ ಪಡೆದು ಜಾಗೆ ಸ್ವಚ್ಛಗೊಳಿಸಿ ಬಳಸಲಾಗುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಜಾಗೆಯನ್ನು ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ಗ್ರಾಪಂ ಮುಂದಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಗ್ರಾಪಂ ನಿರ್ಧಾರದಿಂದ ಗ್ರಾಮದ ಎರಡು ಸಮಾಜಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ರಾತೋರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದ ಗ್ರಾಪಂನವರು ಖಾತಾ ತಯಾರಿಕೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಾಗೆಯನ್ನು ಮಹಳಿಂಗರಾಯ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು, ಗ್ರಾಮದ ಎರಡು ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸಿದ ಪಿಡಿಒ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.ಸಮಾಜದ ಮುಖಂಡ, ಅಧ್ಯಕ್ಷ ಶಿವಾನಂದ ಕುರಿ, ನಾಗಪ್ಪ ಪೂಜಾರಿ, ಮಲ್ಲು ಮೇಳಿ, ಚನ್ನಪ್ಪ ಕಡಪಟ್ಟಿ, ಮಲ್ಲಪ್ಪ ಲಿಂಗನೂರ, ರಮೇಶ ಅಕ್ಕೋಜಿ, ಮುರೆಪ್ಪ ಕಡಕೋಳ, ಶಂಕರ ಕಡಪಟ್ಟಿ, ಶಿವಪ್ಪ ಕಲ್ಹಳ್ಳಿ, ಹನುಮಂತ ಯಮಗಾರ, ಭೀಮಪ್ಪ ಮೇಳಿ, ಗೌರವ್ವ ಗುಲಬಾಳ, ಶಾಂತಾ ಜಡಿಪೂಜಾರಿ, ಅವ್ವಕ್ಕ ಉಡೆದ ಸೇರಿದಂತೆ ಅನೇಕ ಮಹಿಳೆಯರು, ಯುವಕರು, ಭಾಗವಹಿಸಿದ್ದರು.