ಕನ್ನಡಪ್ರಭ ವಾರ್ತೆ ಉಡುಪಿ
ಸಂಸ್ಕೃತ ಮಾತನಾಡುವವರು ಒಂದು ಅಂದಾಜು ಪ್ರಕಾರ ೨೩ ಲಕ್ಷ ೭೦ ಸಾವಿರ ಜನರಿದ್ದಾರೆ. ಸಂಸ್ಕೃತದಲ್ಲೇ ಬರೆದರೆ ಅದು ಹೆಚ್ಚು ಜನರಿಗೆ ತಲುಪುವುದಿಲ್ಲ. ಸಂಸ್ಕೃತದ ಕೃತಿಗಳನ್ನು ಕನ್ನಡದಲ್ಲಿ ಬರೆದು ಸಂಸ್ಕೃತದ ವಾಕ್ಯವನ್ನು ಕನ್ನಡಿಗರಿಗೆ ಪರಿಚಯಿಸಬಹುದು. ಹಾಗೆಯೇ ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡ ಅನುವಾದವನ್ನು ಮಾಡಬಹುದು. ಅನುವಾದ ಸಾಹಿತ್ಯಕ್ಕೂ ವಿಶೇಷ ಸ್ಥಾನಮಾನವಿದೆ. ಸಾಧಕರ ಸಂದರ್ಶನ, ಕಲಾ ವಿಮರ್ಶೆ, ಸಿನಿಮಾ ವಿಮರ್ಶಾ ಲೇಖನಗಳನ್ನು ಬರೆದು ವಾರ್ಷಿಕ ಸಂಚಿಕೆಗೆ ನೀಡಬಹುದು. ಕತೆ, ಕವನ, ಹಾಸ್ಯ ಲೇಖನದಂತಹ ಸೃಜನಾತ್ಮಕ ಬರಹಗಳಿಗೆ ಓದಿನ ಅಗತ್ಯವಿದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲೆ, ಸಂಚಿಕೆಯ ಪ್ರಧಾನ ಸಂಪಾದಕಿ ಪ್ರತಿಮಾ ಬಾಳಿಗಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಟಿ.ಪ್ರಶಾಂತ್ ಹೊಳ್ಳ, ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಯ ಉಪ ಆಡಳಿತಾಧಿಕಾರಿ ಪುಂಡರೀಕಾಕ್ಷ ಕೊಡಂಚ ಉಪಸ್ಥಿತರಿದ್ದರು.ವಾರ್ಷಿಕ ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕ, ಕನ್ನಡ ಉಪನ್ಯಾಸಕ ರಮಾನಂದ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ತೇಜಸ್ವಿ ಗಾಂವ್ಕರ್ ನಿರೂಪಿಸಿದರು. ಹಿಂದಿ ಉಪನ್ಯಾಸಕ ಮುರಳೀಕೃಷ್ಣ ವಂದಿಸಿದರು. ಸಂಚಿಕೆಯ ಮುಖಪುಟ ವಿನ್ಯಾಸಗೊಳಿಸಿದ ಕೃಷ್ಣ, ಲೇಖನಗಳನ್ನು ನೀಡಿದ ವಿದ್ಯಾರ್ಥಿಗಳಾದ ವೈಭವ ಪ್ರಭು, ಸುಪ್ರಜಾ, ಶಮಿತಾ ಇವರನ್ನು ಗೌರವಿಸಲಾಯಿತು. ಅಕ್ಷರ ಭಾವಗೀತೆ ಹಾಡಿದರು.