ಭಕ್ತಿಯಿಂದ ಆರಾಧಿಸಿದರೆ ಉತ್ಸವಕ್ಕೆ ಮೆರುಗು-ಸಂಗನಬಸವ ಶ್ರೀಗಳು

KannadaprabhaNewsNetwork |  
Published : Oct 05, 2024, 01:37 AM IST
ಪೊಟೋ ಪೈಲ್ ನೇಮ್ ೪ಎಸ್‌ಜಿವಿ೧  ಪಟ್ಟಣದಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ(ರಿ)ಶಿಗ್ಗಾವಿ- ಗಂಜೀಗಟ್ಟಿ ಶರನ್ನವರಾತ್ರಿಕಾರ್ಯಕ್ರಮ ವಿರಕ್ತಮಠದ ಸಂಗನಬಸವ ಶ್ರೀಗಳು ಉದ್ಘಾಟಿಸಿ ಮಾತನಾಡಿದÀರು | Kannada Prabha

ಸಾರಾಂಶ

ಉತ್ಸವಗಳ ಬಗ್ಗೆ ಅರ್ಥ ಮಾಡಿಕೊಂಡಾಗ ಮಾತ್ರ ಉತ್ಸವಕ್ಕೆ ಮೆರುಗು ಬರುತ್ತದೆ ಅಲ್ಲದೇ ಭಕ್ತಿಯಿಂದ ಗ್ರಾಮದೇವತೆ ಆರಾಧನೆ ಮಾಡಿದರೆ ಸಾಕು ಎಂದು ವಿರಕ್ತಮಠದ ಸಂಗನಬಸವ ಶ್ರೀಗಳು ಹೇಳಿದರು.

ಶಿಗ್ಗಾಂವಿ: ಉತ್ಸವಗಳ ಬಗ್ಗೆ ಅರ್ಥ ಮಾಡಿಕೊಂಡಾಗ ಮಾತ್ರ ಉತ್ಸವಕ್ಕೆ ಮೆರುಗು ಬರುತ್ತದೆ ಅಲ್ಲದೇ ಭಕ್ತಿಯಿಂದ ಗ್ರಾಮದೇವತೆ ಆರಾಧನೆ ಮಾಡಿದರೆ ಸಾಕು ಎಂದು ವಿರಕ್ತಮಠದ ಸಂಗನಬಸವ ಶ್ರೀಗಳು ಹೇಳಿದರು.ಪಟ್ಟಣದ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಶಿಗ್ಗಾಂವಿ- ಗಂಜೀಗಟ್ಟಿ ಶರನ್ನವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ಸವದಿಂದ ಸಂಸ್ಕಾರ ಹೊರಬಂದರೆ ಅದುವೇ ನಿಜವಾದ ಉತ್ಸವ ಹಾಗೂ ಅಲ್ಲದೇ ಗಣಪತಿ ಉತ್ಸವದಿಂದ ನಮ್ಮ ಸಂಸ್ಕೃತಿ ವಿಕೃತವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಾನಿಧ್ಯ ವಹಿಸಿ ಗಂಜೀಗಟ್ಟಿ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಶ್ರೀಗಳು ಆಶೀರ್ವದಿಸಿ ದೇವಸ್ಥಾನದ ವಾತಾವರಣ ತುಂಬಾ ಆಧ್ಯಾತ್ಮಿಕವಾಗಿ ವಾತಾವರಣ ಸೃಷ್ಟಿಮಾಡಿದ ಸಮಿತಿ ಸದಸ್ಯರ ಕಾರ್ಯ ಶ್ಲಾಘನೀಯ ಹಾಗೂ ಸಂಸ್ಕಾರ, ಸಂಸ್ಕೃತಿ, ಪರಿವರ್ತನೆಯೇ ಪುರಾಣದ ವೈಶಿಷ್ಟ್ಯವಾಗಿದೆ. ಈ ಕ್ಷೇತ್ರದಲ್ಲಿ ೨೫ ಸಾವಿರ ಹುಡುಗಿಯರು ಕಾಣೆಯಾಗುತ್ತಿದ್ದಾರೆ. ಇದು ವಿಪರ್ಯಾಸ ಇದಕ್ಕೆ ನಮ್ಮ ವಿಕೃತಭಾವ ಕಾರಣ ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು, ತಂದೆ-ತಾಯಿಗಳು, ಪೋಷಕರು ಜಾಗೃತರಾಗಬೇಕು, ಜಾಗೃತರಾಗದಿದ್ದರೆ ನಮ್ಮದೇಶ ವಿನಾಶದತ್ತ ಸಾಗುತ್ತಿದೆ. ದೇವಿ ಪುರಾಣಕ್ಕೆ ಬರುವವರು ಸುಸಂಸ್ಕೃತರಾಗಿ ಬರಬೇಕು ಎಂದರು.ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ ಮಾತನಾಡಿ, ಕಳೆದ ೩೫ ವರ್ಷಗಳಿಂದ ನಿರಂತರ ಅಭಿವೃದ್ಧಿಗೆ ಅನೇಕ ಗಣ್ಯಮಾನ್ಯರು ಶ್ರಮಿಸಿದ ನಿಮಿತ್ತ ಗ್ರಾಮದೇವತೆ ಸಮಿತಿ ಇತರರಿಗೆ ಮಾದರಿಯಾಗಿದೆ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪ್ರಚಲಿತವಿರುವ ತಾಲೂಕೆಂದರೆ ಶಿಗ್ಗಾಂವಿ. ಅದಕ್ಕೆಕಾರಣ ನಮ್ಮ ಗ್ರಾಮದೇವತೆ ಶಕ್ತಿ ಕಾರಣ ಹಾಗೂ ತಾಲೂಕಿನಲ್ಲಿ ವಿರಕ್ತಮಠದ ಪರಂಪರೆ ತಾಲೂಕಿನ ಉದ್ದಕ್ಕೂ ಪ್ರಸರಿಸಿದೆ ಹಾಗೂ ೯ ದಿನಗಳ ಕಾಲ ದೇವಿ ಒಂದೊಂದು ಅವತಾರದಲ್ಲಿ ನಾವು ದೇವಿ ಮಹಾತ್ಮೆ, ಓದುವುದರಿಂದ, ಕೇಳುವುದರಿಂದ ಹಾಗೂ ಪುಸ್ತಕ ತೆಗೆದುಕೊಳ್ಳುವುದರಿಂದ ಸಹಿತದೇವಿ ಪ್ರಾಪ್ತಳಾಗುತ್ತಾಳೆ ಎಂದರು. ಸಮಿತಿ ಗೌರವಾಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮಾತನಾಡಿ, ೯ ದಿನಗಳ ಕಾಲ ನಿರಂತರ ನಮ್ಮ ಮನಸ್ಸು ಹತೋಟಿಯಲ್ಲಿಟ್ಟು ಆಧ್ಯಾತ್ಮದ ಕಡೆಗೆ ನಿಮ್ಮ ಮನಸ್ಸು ಜಾಗೃತಗೊಳಿಸಿದರೆ ಸಿದ್ಧಿ ಪಡೆಯಬಹುದು ಎಂದರು. ಈ ಸಂದರ್ಭದಲ್ಲಿ ಟಿ.ವಿ. ಸುರಗೀಮಠ, ಜಯಣ್ಣಾ ಹೆಸರೂರ, ಭರಮಜ್ಜ ನವಲಗುಂದ, ಶ್ರೀಕಾಂತ ಬುಳ್ಳಕ್ಕನವರ, ರಮೇಶ ವನಹಳ್ಳಿ, ಚಂದ್ರು ಜವಳಿ, ಅಶೋಕ ಕಾಳೆ, ಮಾಲತೇಶ ಯಲಿಗಾರ, ಪ್ರಶಾಂತ ಬಡ್ಡಿ ಸೇರಿದಂತೆ ಸಧ್ಬಕ್ತರು ಉಪಸ್ಥಿತರಿದ್ದರು. ಪ್ರತಿವರ್ಷ ಲೆಕ್ಕ ಪತ್ರವನ್ನು ನೀಡಿರಿ ಎಂದು ಸಮಿತಿ ಸದಸ್ಯರಿಗೆ ಕಿವಿಮಾತು ಹೇಳಿದರು. ಶ್ರೀ ದೇವಿ ಪುರಾಣ ಪ್ರವಚನವನ್ನು ಶ್ರೀ ವೇದಮೂರ್ತಿ ಶ್ರೀ ಪ್ರಭಯ್ಯಶಾಸ್ತ್ರೀಗಳು ಹಿರೇಮಠ ಪಠಿಸಿದರು, ಸಂಗೀತ ಸೇವೆ ಶಿವಾನಂದ ಮಂದೇವಾಲ, ತಬಲಾ ಸಾಥ, ಬಸವರಾಜ ಚಳಗೇರಿ ಸೇರಿದಂತೆ ಶಿಗ್ಗಾಂವಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿದ್ದರು. ಶಂಕರಗೌಡ್ರ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಪ್ರಸಾದ ಸೇವೆಯನ್ನು ಬಶೆಟ್ಟೆಪ್ಪ ಯಲಿಗಾರ ಸಲ್ಲಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ