ಪಟ್ಟಣದ ನಾಗಪ್ಪ ಕಾಲೋನಿ ಕೊಳಚೆ ಪ್ರದೇಶದ 86 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಕನ್ನಡಪ್ರಭ ವಾರ್ತೆ, ತರೀಕೆರೆ
ಪುರಸಭಾ ವ್ಯಾಪ್ತಿಯಲ್ಲಿ ನೂರಾರು ಮಂದಿ ನಿವೇಶನ ರಹಿತರಿದ್ದು, ಪಟ್ಟಣ ವ್ತಾಪ್ತಿಯಲ್ಲಿ ಜಾಗದ ಅಭಾವವಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಅಕ್ಕಪಕ್ಕದ ಗ್ರಾಮಗಳಲ್ಲಿ ಎಲ್ಲಿಯಾದರೂ ಸರ್ಕಾರಿ ಅಥವಾ ಖಾಸಗಿ ವ್ಯಕ್ತಿಗಳಿಂದ ಪುರಸಭಾ ಆಡಳಿತ ಮಂಡಳಿ ಜಮೀನು ಗುರುತಿಸಿಕೊಟ್ಟರೆ ಸರ್ಕಾರದಿಂದ ಶೀಘ್ರ ಅನುಮೋದಿಸಿ ನಿವೇಶನ ಹಂಚುವ ವ್ಯವಸ್ಥೆ ಮಾಡಬಹುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದ ನಾಗಪ್ಪ ಕಾಲೋನಿ ಕೊಳಚೆ ಪ್ರದೇಶದ 86 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಪಟ್ಟಣದ ನಿವಾಸಿಗಳಿಗೆ ಕಳೆದ 20 ವರ್ಷಗಳ ಹಿಂದೆ ನಿವೇಶನಗಳನ್ನು ಹಂಚಲಾಗಿತ್ತು, ಆದರೆ ಜಾಗದ ಲಭ್ಯತೆ ಇಲ್ಲದ ಕಾರಣ ಅಲ್ಲಿಂದ ಇಲ್ಲಿಯವರೆಗೂ ನಿವೇಶನ ಹಂಚಲು ಸಾಧ್ಯವಾಗಿಲ್ಲ ಎಂದರು. ಯಾವುದೇ ಇಲಾಖೆ ಸಮಸ್ಯೆಗಳಿದ್ದರೂ ಸಾರ್ವಜನಿಕರು ತಮ್ಮ ಗೃಹ ಕಚೇರಿಗೆ ಭೇಟಿ ನೀಡಿ ಅಲ್ಲಿ ತಮ್ಮ ಕೆಲಸಕಾರ್ಯ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಪುರಸಭಾ ಅಧ್ಯಕ್ಷ ವಸಂತ ಕುಮಾರ್(ಕವಾಲಿ), ಉಪಾಧ್ಯಕ್ಱೆ ಗಿರಿಜಾ ಪ್ರಕಾಶ್ ವರ್ಮಾ, ಪರಸಭಾ ಸದಸ್ಯರಾದ ಟಿ.ಎಂ. ಬೋಜರಾಜ್, ಟಿ.ಆರ್. ಚಂದ್ರಶೇಖರ್, ಲೋಕೇಶ್, ಟಿ. ದಾದಾಪೀರ್, ಹಳಿಯೂರು ಕುಮಾರ್, ಆದಿಲ್ ಪಾಷ, ಟಿ.ಜಿ. ಮಂಜುನಾಥ್, ವೇಣುಪ್ರಿಯಾ, ಪುರಸಭಾ ಮಾಜಿ ಅಧ್ಯಕ್ಷರಾದ ಟಿ.ಎಸ್.ಪ್ರಕಾಶ್ ವರ್ಮ, ಬೈಟು ರಮೇಶ್, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಸಹಾಯಕ ಇಂಜಿನಿಯರ್ ಯಶವಂತ ಸಾಗರ್ ಅವರು ಭಾಗವಹಿಸಿದ್ದರು.24ಕೆಟಿಆರ್.ಕೆ.6ಃ
ತರೀಕೆರೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 86 ಫಲಾನುಭವಿಗಳಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ನಿವೇಶನ ಹಕ್ಕು ಪತ್ರ ವಿತರಿಸಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್ (ಕವಾಲಿ) ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಬೈಟು ರಮೇಶ್ ಮತ್ತಿತರರು ಇದ್ದರು.