ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಇಂಚಲ ಕ್ರಾಸ್ ಹತ್ತಿರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಘಟಕದ ಅಶ್ರಯದಲ್ಲಿ ಶನಿವಾರ ಜರುಗಿದ 2023-24ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಭೆಗಳನ್ನು ಗೌರವಿಸುವುದರಿಂದ ಮತ್ತೂಬ್ಬರ ಸಾಧನೆಗೆ ಪ್ರೇರಣೆಯಾಗಲಿವೆ. ದೇಶ ಸುಭದ್ರವಾಗಬೇಕಾದರೆ ಯುವ ಸಮೂಹ ಕ್ರಿಯಾಶೀಲರಾಗಿ ಮುನ್ನೆಡೆದಾಗ ಮಾತ್ರ ಸಾಧ್ಯವೆಂದರು.
ಸಮ್ಮುಖ ವಹಿಸಿದ್ದ ಹುಬ್ಬಳ್ಳಿಯ-ಬೈಲಹೊಂಗಲದ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದಲ್ಲಿ ಹಲವಾರು ಪಂಗಡ, ಸಂಘಟನೆಗಳಿದ್ದು, ಅವರೆಲ್ಲರೂ ಒಗ್ಗೂಡಿದಾಗ ಮಾತ್ರ ಸ್ವತಂತ್ರ ಧರ್ಮದ ಮಾನ್ಯತೆ ಸಾಧ್ಯವಾಗಲಿದೆ. ಈಗಾಗಿ ತಾರತಮ್ಯ ಮಾಡದೇ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅತ್ಯವಶ್ಯವಾಗಿದೆ ಎಂದರು.ಗುರುಗುಂಟಾದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮುಂಚೆ ಧಾರ್ಮಿಕ ದತ್ತಿ ಇಲಾಖೆ ರಾಜ್ಯ ನಿರ್ದೇಶಕ ಡಾ.ಮಹಾಂತೇಶ ಆರಾದ್ರಿಮಠ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಇಷ್ಟ ಲಿಂಗಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಮಸಾಲಿ ಸಮಾಜದ ಮುಖಂಡ ಶ್ರೀಶೈಲ ಬೋಳಣ್ಣವರ ನೇತೃತ್ವ ವಹಿಸಿದ್ದರು. ಶರಣೆ ಪ್ರೇಮಾ ಅಂಗಡಿ ಪೂಜಾ ವಿಧಿ-ವಿಧಾನ ನೆರವೇರಿಸಿದರು.
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಸದಸ್ಯರು, ಸಾಧಕ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ತಾಲೂಕು ಸಂಘಟನೆಯ ಅಧ್ಯಕ್ಷ ಉಮೇಶ ಬೋಳೆತ್ತಿನ ಸ್ವಾಗತಿಸಿದರು. ನಿವೃತ ಶಿಕ್ಷಕಿ ಗೌರಮ್ಮ ಕರ್ಕಿ ನಿರೂಪಿಸಿದರು. ನಗರ ಘಟಕ ಅಧ್ಯಕ್ಷ ಮಹೇಶ ಕೋಟಗಿ ವಂದಿಸಿದರು. ಸುಮಾರು 150ಕ್ಕೂ ಅಧಿಕ ಸಾಧಕ ವಿದ್ಯಾರ್ಥಿಗಳು, ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಂಘಟನೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.