ಭಾಷೆ ಅಳಿದರೆ ಸಂಸ್ಕೃತಿ ಅಳಿದಂತೆ: ಸೀಮಾ ಮಸೂತಿ

KannadaprabhaNewsNetwork |  
Published : Nov 03, 2026, 02:30 AM IST
ಧಾರವಾಡದಲ್ಲಿ ನಡೆದ ರಾಜ್ಯೋತ್ಸವದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಭಾಷೆ ಅಳಿದರೆ ಇಡೀ ಸಂಸ್ಕೃತಿಯೇ ಅಳಿದಂತೆ. ಹೀಗಾಗಿ ಕನ್ನಡ ಭಾಷೆ ಉಳಿದರೆ ಮಾತ್ರವೇ ಈ ಭಾಗದ ಸಂಸ್ಕೃತಿ-ಪರಂಪರೆ ಕೂಡ ಮುನ್ನಡೆಯುತ್ತದೆ. ಹೀಗಾಗಿ ಕನ್ನಡ ನಾಡು-ನುಡಿ ವಿಷಯ ಬಂದಾಗ ಕನ್ನಡಿಗರು ಗಟ್ಟಿ ಧ್ವನಿಯಾಗಬೇಕು.

ಧಾರವಾಡ:

ಚೇತನ ಫೌಂಡೇಶನ ವತಿಯಿಂದ ಬೆಂಗಳೂರಿನ ಗಂಧದ ಗುಡಿ ಕನ್ನಡ ಸಂಘ ಹಾಗೂ ಆರ್ಯಭಟ್‌ ಎಜ್ಯುಕೇಶನ್ ಅಕಾಡೆಮಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕೆ.ಸಿ. ಪಾರ್ಕ್‌ ಹತ್ತಿರದ ಮುಖ್ಯಪ್ರಾಣ ಸಭಾಂಗಣದಲ್ಲಿ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಭಾಷೆ ಅಳಿದರೆ ಇಡೀ ಸಂಸ್ಕೃತಿಯೇ ಅಳಿದಂತೆ. ಹೀಗಾಗಿ ಕನ್ನಡ ಭಾಷೆ ಉಳಿದರೆ ಮಾತ್ರವೇ ಈ ಭಾಗದ ಸಂಸ್ಕೃತಿ-ಪರಂಪರೆ ಕೂಡ ಮುನ್ನಡೆಯುತ್ತದೆ. ಹೀಗಾಗಿ ಕನ್ನಡ ನಾಡು-ನುಡಿ ವಿಷಯ ಬಂದಾಗ ಕನ್ನಡಿಗರು ಗಟ್ಟಿ ಧ್ವನಿಯಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಸದಸ್ಯ ವೈ.ಎಚ್. ಬಣವಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ವೃತ್ತಿಯಿಂದಲೇ ಮಕ್ಕಳಲ್ಲಿ ಅಕ್ಷರದ ಅರಿವಿನೊಂದಿಗೆ ಭಾಷೆಯ ಅಡಿಪಾಯ ಹಾಕುವ ಕಾರ್ಯವಾಗಿದೆ. ಹೀಗಾಗಿ ಶಿಕ್ಷಕರು ಕನ್ನಡ ಭಾಷೆ ಉಳಿಸುವ ಕಾರ್ಯದಲ್ಲಿ ಸದಾ ತೊಡಗಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಜಿ. ದಾನಪ್ಪಗೌಡ್ರ, ಉಪ್ಪಿನಬೆಟಗೇರಿಯ ವಿಕ್ರಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ದೀಪಾ ಶಿರೂರ, ಸಾಹಿತ್ಯ ಪರಿಷತ್ತಿನ ದಾವಣಗೆರೆಯ ಜಿಲ್ಲಾಧ್ಯಕ್ಷ ಡಾ. ಗದಿಗೆಪ್ಪ ಮ್ಯಾಚರ್, ಕವಿಯಿತ್ರಿ ಶಾರದಾ ಬಡಿಗೇರ, ದಾವಣಗೆರೆಯ ಡಾ. ನಿರ್ಮಲಾ ಹಳ್ಳಿ ಮಾತನಾಡಿದರು. ಚೇತನ ಫೌಂಡೇಶನ್ ಅಧ್ಯಕ್ಷ ಡಾ.ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹೆಸರಿನಲ್ಲಿ ಕೊಡ ಮಾಡುವ ಪಾಪು ಧೀಮಂತ ಕನ್ನಡಿಗ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದ ಸೇವೆ ಪರಿಗಣಿಸಿ ಪತ್ರಕರ್ತರಾದ ಶಶಿಧರ ಬುದ್ನಿ, ಉಪ್ಪಿನಬೆಟಗೇರಿಯ ಶಿವಪ್ರಭು ಈಸರಗೊಂಡ ಸೇರಿದಂತೆ 50 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಪಾಧ್ಯಕ್ಷೆ ಭಾಗ್ಯಶ್ರೀ ರಜಪೂತ, ಸಿರಿಗನ್ನಡ ಫೌಂಡೇಶನ್‌ ಅಧ್ಯಕ್ಷ ರಾಜೇಂದ್ರಕುಮಾರ ಮಠ, ಅಪೂರ್ವ ಜಕ್ಕಪ್ಪನವರ, ಸುವರ್ಣಾ ಲಿಗಾಡೆ, ಕೃಷ್ಣಾ ದೇವಾಂಗಮಠ, ರವೀಂದ್ರ ಕುಂಬಾರ, ಪೂರ್ಣಿಮಾ ಕುಂಬಾರ, ಕೀರ್ತಿ ಮಠಪತಿ, ಸಂಗೀತಾ ಮಠಪತಿ, ಪೂರ್ಣಿಮಾ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ವಿದ್ಯಾ ದೇವಗಿರಿ ಪ್ರಾರ್ಥಿಸಿದರು. ದ್ರಾಕ್ಷಾಯಣಿ ಹಿರೇಮಠ ನಿರೂಪಿಸಿದರು. ಅಪೂರ್ವ ಆರ್.ಜೆ.ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ