ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾತನಾಡಿದರೆ ಪ್ರತಿದಾಳಿ: ಜಕ್ಕಪ್ಪನವರ ಎಚ್ಚರಿಕೆ

KannadaprabhaNewsNetwork |  
Published : Apr 12, 2026, 02:30 AM IST
ವಿಧಾನ ಪರಿಷತ್‌ ಸದಸ್ಯ ಜಕ್ಕಪ್ಪನವರ | Kannada Prabha

ಸಾರಾಂಶ

ಆರ್‌ಎಸ್‌ಎಸ್‌, ಬಿಜೆಪಿಯ ಸಂವಿಧಾನ ವಿರೋಧ ನೀತಿ ನೋಡಿ ಮಲ್ಲಿಕಾರ್ಜು ಖರ್ಗೆ ಮಾತನಾಡಿದ್ದಾರೆ. ಭಾರತೀಯರ ಪರವಾದ ನಿಲುವನ್ನು ಪ್ರಕಟಿಸುತ್ತಾ ಆರ್‌ಎಸ್‌ಎಸ್ ಮನುವಾದಿ ನಡೆಯನ್ನು ಟೀಕಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಜಕ್ಕಪ್ಪನವರು ಹೇಳಿದ್ದಾರೆ.

ಹುಬ್ಬಳ್ಳಿ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿಗರು ಅವಮಾನಿಸುವ, ನಿಂದಿಸುವ ಕೆಲಸ ಮಾಡಿದರೆ ಅದನ್ನು ಪ್ರತಿದಾಳಿ ಮೂಲಕ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಸ್ಸಾಂನಲ್ಲಿ ಖರ್ಗೆ ಅವರು ಮಾತನಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಖರ್ಗೆ ಅವರ ಕುರಿತು ಬಿಜೆಪಿ ನಾಯಕರು ಹಗುರವಾಗಿ ಮತ್ತು ಅವಮಾನಕರವಾಗಿ ಮಾತನಾಡುತ್ತಿದ್ದಾರೆ. ಇದನ್ನು ಈ ದೇಶ ಗಮನಿಸುತ್ತಿದೆ. ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ ಅವರು ಆರ್‌ಎಸ್‌ಎಸ್‌ನಂಥ ಮನುವಾದಿ ಸಂಘಟನೆ ವಿರುದ್ಧ ಸೈದ್ಧಾಂತಿಕ ಸಂಘರ್ಷ ನಡೆಸಿದ್ದರು. ಅವರು ಮನಸ್ಮೃತಿ ರಹಿತ ಭಾರತ ಸಂವಿಧಾನ ಕರಡನ್ನು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದಾಗ ಆರ್‌ಎಸ್‌ಎಸ್ ತೀವ್ರವಾಗಿ ವಿರೋಧಿಸಿತ್ತು. ಇಂದಿಗೂ ಆರ್‌ಎಸ್‌ಎಸ್ ತನ್ನ ಬಿಜೆಪಿ ರಾಜ್ಯಾಡಳಿತ ಮುಖಾಂತರ ದಲಿತ, ಆದಿವಾಸಿ ಮತ್ತು ಹಿಂದುಳಿದವರಿಗೆ ಸಮಾನ ಅವಕಾಶ ವಿರೋಧಿಸುತ್ತಲೇ ಸಾಗಿದೆ. ಸಂವಿಧಾನವನ್ನು ನಿಷ್ಕ್ರಿಯಗೊಳಿಸಿ ಕುಲಶ್ರೇಷ್ಠರಿಗೆ ನ್ಯಾಯಾಂಗ-ಕಾರ್ಯಾಂಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್‌, ಬಿಜೆಪಿಯ ಸಂವಿಧಾನ ವಿರೋಧ ನೀತಿ ನೋಡಿ ಖರ್ಗೆ ಮಾತನಾಡಿದ್ದಾರೆ. ಭಾರತೀಯರ ಪರವಾದ ನಿಲುವನ್ನು ಪ್ರಕಟಿಸುತ್ತಾ ಆರ್‌ಎಸ್‌ಎಸ್ ಮನುವಾದಿ ನಡೆಯನ್ನು ಟೀಕಿಸಿದ್ದಾರೆ. ಬಿಜೆಪಿಗರು ತಾವು ಎಲ್ಲಿ ತಪ್ಪಿದ್ದೇವೆ ಎಂದು ಆತ್ಮಸಾಕ್ಷಿ ಕೇಳಿಕೊಂಡು ತಿದ್ದಿಕೊಳ್ಳಬೇಕು. ಅದನ್ನು ಬಿಟ್ಟು ಖರ್ಗೆ ಅವರನ್ನು ವೈಯಕ್ತಿಕವಾಗಿ ನಿಂದಿಸುವ-ಅವಮಾನಿಸುವ ಕಾರ್ಯಕ್ಕೆ ಮುಂದಾದರೆ ಅದನ್ನು ಪ್ರತಿದಾಳಿ ಮೂಲಕ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ