ನಡಹಳ್ಳಿಗೆ ಅಪಮಾನ ಮಾಡಿದ್ರೆ ತಕ್ಕ ಉತ್ತರ

KannadaprabhaNewsNetwork |  
Published : Apr 06, 2025, 01:52 AM IST
ಸಭೇ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಹೇಳಿಕೆಗಳನ್ನು ಕೊಟ್ಟಿದ್ದರಿಂದ ಅವರನ್ನು ಉಚ್ಚಾಟಿಸಿದ್ದಾರೆಯೇ ವಿನಃ ಇದರಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಯಾವುದೇ ಪಾತ್ರವಿಲ್ಲ. ಆದರೆ, ಮತಕ್ಷೇತ್ರದ ಕೆಲವರು ನಡಹಳ್ಳಿಯವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸುತ್ತೇನೆ. ಮುಂದಿನ ಪ್ರತಿಭಟನೆಗಳಲ್ಲಿ ನಡಹಳ್ಳಿಯವರಿಗೆ ಅಪಮಾನ ಮಾಡಿದರೆ ನಾವು ಅದೇ ರೀತಿಯ ಹೋರಾಟದ ಮೂಲಕ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ದಲಿತ ಮುಖಂಡ ಮಲ್ಲಣ್ಣ ತಂಗಡಗಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಹೇಳಿಕೆಗಳನ್ನು ಕೊಟ್ಟಿದ್ದರಿಂದ ಅವರನ್ನು ಉಚ್ಚಾಟಿಸಿದ್ದಾರೆಯೇ ವಿನಃ ಇದರಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಯಾವುದೇ ಪಾತ್ರವಿಲ್ಲ. ಆದರೆ, ಮತಕ್ಷೇತ್ರದ ಕೆಲವರು ನಡಹಳ್ಳಿಯವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸುತ್ತೇನೆ. ಮುಂದಿನ ಪ್ರತಿಭಟನೆಗಳಲ್ಲಿ ನಡಹಳ್ಳಿಯವರಿಗೆ ಅಪಮಾನ ಮಾಡಿದರೆ ನಾವು ಅದೇ ರೀತಿಯ ಹೋರಾಟದ ಮೂಲಕ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ದಲಿತ ಮುಖಂಡ ಮಲ್ಲಣ್ಣ ತಂಗಡಗಿ ಎಚ್ಚರಿಸಿದ್ದಾರೆ.ಪಟ್ಟಣದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ದಾಸೋಹ ನಿಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳರನ್ನು ಪಕ್ಷಕ್ಕೆ ಪುನ ಸೇರ್ಪಡೆ ಮಾಡಿಕೊಳ್ಳಲು ಹೋರಾಟ ಮಾಡಲಿ. ಯತ್ನಾಳ ವಿಚಾರದಲ್ಲಿ ಇದು ಬಿಜೆಪಿ ಪಕ್ಷದ ಆಂತರಿಕ ವಿಷಯ. ಅದನ್ನು ಪಂಚಮಸಾಲಿ ಸಮಾಜಕ್ಕೆ ಎಳೆದೊಯ್ಯುವುದು ಸರಿಯಲ್ಲ. ಏ.7ರಂದು ಯತ್ನಾಳ ಪರವಾಗಿ ಕೆಲ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಯತ್ನಾಳ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವಂತೆ ಕಾಂಗ್ರೆಸ್‌ಗೆ ಹೈಕಮಾಂಡ್‌ಗೆ ಒತ್ತಾಯಿಸಲಿ. ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆ ಕಾಂಗ್ರೆಸ್‌ ಮುಖಂಡರಿಗಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.ಮಾಧ್ಯಮದವರು ನಡಹಳ್ಳಿಯವರನ್ನು ಪ್ರಶ್ನಿಸಿದ್ದಕ್ಕೆ ಉತ್ತರ ಕೊಟ್ಟಿದ್ದಾರೆ. ಆದರೆ, ಅವರ ಘನತೆಗೆ ಚ್ಯುತಿ ತರಬೇಕೆಂಬ ಉದ್ದೇಶದಿಂದ ನಡಹಳ್ಳಿ, ರಾಜ್ಯಾಧ್ಯಕ್ಷ ವಿಜಯೇಂದ್ರ,ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನಿಸುವುದು ಯಾವ ನ್ಯಾಯ.

ಈ ಮೊದಲಿದ್ದ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಯಾವ ಕಾರ್ಯಕರ್ತರಿಗೂ ಒಳ್ಳೆಯದಾಗಿಲ್ಲ. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿಯವರಿಂದ ಪಕ್ಷದ ವರ್ಚಸ್ಸು ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತರು ಪುನಃ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗುರಲಿಂಗಪ್ಪ ಅಂಗಡಿ, ನಡಹಳ್ಳಿಯವರ ನೇತೃತ್ವದಲ್ಲಿ ಮುದ್ದೇಬಿಹಾಳ ಸೇರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿ ಶಕ್ತಿ ಹೆಚ್ಚಿಸಲಾಗುವುದು ಎಂದು ಹೇಳಿದರು. ಈ ವೇಳೆ ಮುನ್ನಾಧನಿ ನಾಡಗೌಡ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ದಲಿತ ಮುಖಂಡ ಹರೀಷ ನಾಟಿಕಾರ, ತಾಲೂಕಾ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಪರುಶುರಾಮ ನಾಲತವಾಡ, ಪ್ರೇಮಶಿಂಗ್ ಚವ್ಹಾಣ, ಗಿರಿಶಗೌಡ ಪಾಟೀಲ, ಏಕನಾಥ ಸೀತಿಮನಿ, ಗುರುಪಾದ ವಡ್ಡರ, ಸಂಜು ಬಾಗೇವಾಡಿ, ಲಕ್ಷ್ಮಣ ಬಿಜ್ಜೂರ, ಅಶೋಕ ಚಿನಿವಾರ, ಗೌರಮ್ಮ ಹುನಗುಂದ ಸೇರಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ