ನಾಗೇಂದ್ರನ ತಪ್ಪಿದ್ದರೆ ಹೊರಹಾಕಿ, ಇಲ್ಲದಿದ್ದರೆ ಸಿದ್ದರಾಮಯ್ಯರನ್ನು ಹೊರಹಾಕಿ: ರಮೇಶ ಜಿಗಜಿಣಗಿ

KannadaprabhaNewsNetwork |  
Published : Aug 20, 2026, 04:15 AM ISTUpdated : Aug 20, 2026, 05:14 AM IST
B Nagendra

ಸಾರಾಂಶ

ಬಿ.ನಾಗೇಂದ್ರ ತಪ್ಪು ಮಾಡಿದ್ದಾರೆಂದು ವಿಧಾನಸಭೆಯಲ್ಲಿ ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಇದೀಗ ನಾಗೇಂದ್ರ ತಪ್ಪು ಮಾಡಿಲ್ಲ ಅಂದ್ರೆ ಸಿದ್ದರಾಮಯ್ಯರಿಗೆ ನೇಣು ಹಾಕಬೇಕಾ?. ಇಲ್ಲಾ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಿಟ್ಟು ಹೊರಗೆ ಹಾಕಿ, ಸಿದ್ದರಾಮಯ್ಯ ಹೇಳಿದ್ದು ನಿಜ ಅನ್ನೋದಾದರೆ ನಾಗೇಂದ್ರನನ್ನು ಹೊರಗೆ ಹಾಕಿ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

 ವಿಜಯಪುರ : ಬಿ.ನಾಗೇಂದ್ರ ತಪ್ಪು ಮಾಡಿದ್ದಾರೆಂದು ವಿಧಾನಸಭೆಯಲ್ಲಿ ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಇದೀಗ ನಾಗೇಂದ್ರ ತಪ್ಪು ಮಾಡಿಲ್ಲ ಅಂದ್ರೆ ಸಿದ್ದರಾಮಯ್ಯರಿಗೆ ನೇಣು ಹಾಕಬೇಕಾ?. ಇಲ್ಲಾ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಿಟ್ಟು ಹೊರಗೆ ಹಾಕಿ, ಸಿದ್ದರಾಮಯ್ಯ ಹೇಳಿದ್ದು ನಿಜ ಅನ್ನೋದಾದರೆ ನಾಗೇಂದ್ರನನ್ನು ಹೊರಗೆ ಹಾಕಿ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡಲ್ಲ ಎಂದು ಸಚಿವ ನಾಗೇಂದ್ರ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಇದೆಯಾ?. ಜಗತ್ತಿನಲ್ಲಿ ಈ ಪರಿ ಯಾರಾದರೂ ಮಾಡ್ತಾರಾ?. ಅಸೆಂಬ್ಲಿಯಲ್ಲಿ ಹಣ ತಿಂದದ್ದು ಒಪ್ಪಿಕೊಂಡಿದ್ದಾರೆ. ಈಗ ಮುಖ್ಯಮಂತ್ರಿ ಚೇಂಜ್ ಆದ ಎಂದು ಕರಪ್ಟ್ ಮನುಷ್ಯನನ್ನು ಮತ್ತೆ ಮಂತ್ರಿ ಮಾಡ್ತಾರೆ. ₹180 ಕೋಟಿ ಹಣ ಯಾರ ಮನೆಯದ್ದು? ಎಂದು ಆಕ್ರೋಶ ಹೊರ ಹಾಕಿದದರು. ಎಸ್ಟಿ ಜನರಿಗೆ ಹೋಗುವ ಹಣ ನುಂಗಿದ್ದಾರೆ, ಇನ್ನು ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗಲ್ಲ. ಕಾಂಗ್ರೆಸ್‌ಗೆ ಜನರ ಶಾಪ ತಟ್ಟಲಿದೆ. ದಲಿತರು, ಹಿಂದುಳಿದವರು, ಮುಸ್ಲಿಮರ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ. ಮುಂಜಾನೆ ಮುಸ್ಲಿಮರು ಎನ್ನುತ್ತಾರೆ, ಮಧ್ಯಾಹ್ನ ದಲಿತರು ಎನ್ನುತ್ತಾರೆ, ಸಂಜೆ ಹಿಂದುಳಿದವರು ಎನ್ನುತ್ತ ಅವರಿಗೇ ಮೋಸ ಮಾಡುತ್ತಿದ್ದಾರೆ. ನಿಮ್ಮನ್ನ ಅಧಿಕಾರಕ್ಕೆ ತಂದವರ ದುಡ್ಡು ತಿನ್ನುತ್ತಿದ್ದೀರಲ್ಲ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

ವಂದೇ ಮಾತರಂಗೆ ಅವಹೇಳನಕ್ಕೆ ಖಂಡನೆ: 

ಕಾಂಗ್ರೆಸ್‌ ಪಕ್ಷದ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ವಂದೇ ಮಾತರಂ ಮೊಳಗುತ್ತಿರಬೇಕಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ಇಂದಿರಾಗಾಂಧಿ ನಡೆದುಕೊಂಡ ರೀತಿ ಖಂಡನೀಯ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ ಅವರು, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದ ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಯಾಗಿದ್ದ ವಂದೇ ಮಾತರಂಗೆ ಅವಮಾನಿಸುವುದು ಕಾಂಗ್ರೆಸ್‌ಗೆ ಹೊಸದೇನಲ್ಲ. ಸ್ವಾತಂತ್ರ್ಯೋತ್ತರ ಕಾಲದಿಂದಲೂ ವಂದೇ ಮಾತರಂಗೆ ವಿರೋಧ ಮಾಡುತ್ತಲೇ ಬಂದಿರುವ ಕಾಂಗ್ರೆಸ್‌ ಸಂಸತ್‌ನಲ್ಲಿಯೂ ವಂದೇ ಮಾತರಂ ಮಸೂದೆಗೆ ವಿರೋಧ ವ್ಯಕ್ತಪಡಿಸಿತ್ತು. ಮುಂದುವರಿದ ಭಾಗವಾಗಿ ಕಾಂಗ್ರೆಸ್‌ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಮೊಳಗುತ್ತಿರಬೇಕಾದರೆ ಅಸಭ್ಯ ಹಾಗೂ ಅಗೌರವದಿಂದ ವರ್ತಿಸಿರುವುದು ಸಂವಿಧಾನ ವಿರೋಧಿ, ದೇಶವಿರೋಧಿ ನಡೆ ಎಂದು ಟೀಕಿಸಿದರು.

ಅಂದು ತೋಡೋ ಇಂದು ಜೋಡೊ:

1947ರ ಭಾರತ ವಿಭಜನೆಯಲ್ಲಿ ಕಾಂಗ್ರೆಸ್‌ ಪಾತ್ರವೂ ಇದೆ. ಆರಂಭದಲ್ಲಿ ಗಾಂಧೀಜಿ, ನೆಹರೂ ಮತ್ತು ಪಟೇಲ್ ಮುಂತಾದ ಹಿರಿಯ ನಾಯಕರು ಅಖಂಡ ಭಾರತದ ಪರವಾಗಿದ್ದರೂ, ಮುಸ್ಲಿಂ ಲೀಗ್‌ನ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯಂತೆ ವಿಭಜನೆಯನ್ನು ಒಪ್ಪಿಕೊಂಡರು. ಅಂದು ಭಾರತ ತೋಡೊಗೆ ಸಹಕರಿಸಿದ ಕಾಂಗ್ರೆಸ್‌ ಇಂದು ಭಾರತ ಜೋಡೊ ನಡೆಸುತ್ತಿರುವುದು ಪಶ್ಚಾತಪದ ಫಲ ಎನ್ನಿಸುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹಾಲುಮತದವರೇ ಜಿಪಂ ಅಧ್ಯಕ್ಷರಾಗಲು ಎಂಬಿಪಾ ಕಾರಣ: ಸೋಮನಾಥ ಕಳ್ಳಿಮನಿ
ಮಾನವೀಯತೆಯೇ ಎಲ್ಲ ಧರ್ಮಗಳ ತಿರುಳು