- ಚನ್ನಗಿರಿ ಸರ್ಕಾರಿ ಕಾಲೇಜು ಆವರಣದಲ್ಲಿ ವನಮಹೋತ್ಸವ - - -
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕನ್ನಡನಾಡು ಹಿತರಕ್ಷಣಾ ಸಮಿತಿ ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿಯು ಮನುಷ್ಯನ ಜೀವಕ್ಕೆ ಬೇಕಾದ ನೀರು, ಗಾಳಿ, ಬೆಳಕನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಚಿತವಾಗಿ ನೀಡುತ್ತಿದೆ. ಆದರೆ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯಲ್ಲಿನ ಗಿಡ-ಮರಗಳನ್ನು ಕಡಿಯುತ್ತಾ ಸಾಗುತ್ತಿರುವುದು ದುರಂತ ಎಂದರು.ಈ ದಿನದಿಂದ ನಮ್ಮ ಸಮಿತಿ ವತಿಯಿಂದ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ, ಶಾಲಾ-ಕಾಲೇಜುಗಳು, ಸ್ಮಶಾನಗಳಲ್ಲಿ ಒಟ್ಟು ಐದು ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಈ ಗಿಡಗಳಿಗೆ ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡಿದ ಮಹಾನೀಯರು, ಕನ್ನಡ ಕವಿಗಳ ಹೆಸರುಗಳನ್ನು ಇಟ್ಟು ಪೋಷಣೆ ಮಾಡಲಾಗುವುದು ಎಂದರು.
ಈ ಸಂದರ್ಭ ಸಮಿತಿಯ ತಾಲೂಕು ಗೌರವ ಅಧ್ಯಕ್ಷ ಸರ್ದಾರ್, ಅಧ್ಯಕ್ಷ ಎಂ.ಅಣ್ಣೋಜಿರಾವ್ ಪವಾರ್, ವಾಸಿಕ್ ಆಹಮದ್, ನಾಗರತ್ನ, ಸುಹೇಬ್, ಮಂಜುಳಾ, ಜಿಲಾನಿ, ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಚನ್ನಗಿರಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ವನಮಹೋತ್ಸವದಲ್ಲಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಗಿಡವನ್ನು ನೆಟ್ಟು, ಭುವನೇಶ್ವರಿ ಎಂದು ನಾಮಕರಣ ಮಾಡಿದರು.