ಕನ್ನಡಪ್ರಭ ವಾರ್ತೆ ಶಿರಾ
ಅವರು ಡಾ. ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿ ಶಿರಾ ನಗರದಲ್ಲಿ ಮಂಗಳವಾರ ವಿವಿಧ ಮಠಾಧೀಶರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಹಕ್ಕೋತಾಯ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ನಾಡು ಕಂಡ ಅಜಾತ ಶತ್ರು, ಸುಧೀರ್ಘ ೫೦ ವರ್ಷಗಳ ರಾಜಕೀಯ ಅನುಭವ ಇರುವ ಪ್ರಸ್ತುತ ರಾಜ್ಯ ಸರಕಾರದ ಗೃಹ ಸಚಿವರಾಗಿ ದಕ್ಷ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾದ ಗೃಹ ಸಚಿವರಾದ ಸರ್ವಜನ ಪ್ರಿಯರಾದ ಡಾ.ಜಿ.ಪರಮೇಶ್ವರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡಲೇಬೇಕು ಹೈ ಕಮಾಂಡ್ ಅವರಲ್ಲಿ ನಾವು ಒತ್ತಾಯ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರ ಬದಲಿ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡಿ ಎಂದರು.ವನಕಲ್ಲು ಮಠ ಪೀಠಾಧ್ಯಕ್ಷರಾದ ಬಸವ ರಾಮಾನಂದ ಸ್ವಾಮೀಜಿಗಳು ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ಯಾರು ಸಿಎಂ ಆಗಿಲ್ಲ. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಮಾಡಬೇಕು. ಪರಮೇಶ್ವರ್ ಅವರು ತುಮಕೂರನ್ನು ಗ್ರೇಟರ್ ತುಮಕೂರು ಮಾಡಲು ಶ್ರಮಿಸುತ್ತಿದ್ದಾರೆ. ಹಾಗೂ ಜಯದೇವ ಹೃದಯ ಆಸ್ಪತ್ರೆಯ ಶಾಖೆಯನ್ನು ಶಿರಾದಲ್ಲಿ ಸ್ಥಾಪಿಸಬೇಕು. ಆದ್ದರಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಡಾ.ಜಿ ಪರಮೇಶ್ವರ ಅವರನ್ನು ಸಿಎಂ ಮಾಡಬೇಕು. ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಮನವಿ ಮಾಡಿದರು.
ಆದಿಜಾಂಭವ ಮಠದ ಪೀಠಾಧ್ಯಕ್ಷರಾದ ಷಡಕ್ಷರಿ ಸ್ವಾಮೀಜಿ ಮಾತನಾಡಿ ಎಲ್ಲ ಸಮುದಾಯದ ಹಿತ ಕಾಯುವಂತ ಡಾ. ಜಿ ಪರಮೇಶ್ವರ್ ಅವರು ಸಿಎಂ ಆಗಬೇಕು. ಅವರು ಪಕ್ಷ ನಿಷ್ಟೆ ದೂರದೃಷ್ಟಿ ಉಳ್ಳವರು. ಅವರು ನಾಡಿನ ಮುಖ್ಯಮಂತ್ರಿ ಆಗಬೇಕು. ಎಲ್ಲಾ ಸಮುದಾಯದವರು ಸಿಎಂ ಆಗಿದ್ದಾರೆ. ದಲಿತರು ಸಿಎಂ ಆಗಿಲ್ಲ. ಆದ್ದರಿಂದ ಈ ಬಾರಿ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಶ್ರೀಕ್ಷೇತ್ರ ಬೆಳ್ಳಾವಿ ಮಠದ ಪೀಠಾಧ್ಯಕ್ಷರಾದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ, ಯಾದವ ರಾಮಾನಂದ ಸ್ವಾಮೀಜಿ, ಜರ್ಮನಿಯ ಸೈಮನ್ ಸ್ವಾಮೀಜಿ, ತುರುವೇರೆ ತಿಪ್ಪೇರುದ್ರ ಸ್ವಾಮೀಜಿ, ಕಾರದ ಮಠದ ಶ್ರೀಗಳು, ಹರಳಯ್ಯ ಗುರುಪೀಠದ ಹರಳಯ್ಯ ಸ್ವಾಮೀಜಿ, ಕೊರಟಗೆರೆ ನಾಗೇಂದ್ರ ಸ್ವಾಮೀಜಿ, ಮಹಲಿಂಗ ಸ್ವಾಮೀಜಿ, ಕರ್ನಾಟಕ ಭೀಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಎನ್.ದಾಸಪ್ಪ, ತಾವರೆಕೆರೆ ಬಲರಾಮ್, ಜೆ ಎನ್ ರಾಜಸಿಂಹ, ಹರೀಶ್ ಕಾಮಗೊಂಡನಹಳ್ಳಿ, ಟಿ.ಎನ್.ಪುಟ್ಟರಾಜು ತರೂರು, ಕೃಷ್ಣಮೂರ್ತಿ.ಟಿ, ರಾಮಾಂಜಿನಯ್ಯ, ಯೋಗೇಂದ್ರಕುಮಾರ್, ಕರಿಯಪ್ಪ, ಲೋಕೇಶ್, ಹನುಮಂತು ಸೇರಿದಂತೆ ನಾಗಸಾಧುಗಳು ಭಾಗವಹಿಸಿದ್ದರು.