ಜನರಿಗೆ ಬೇಡವೆಂದ್ರೆ ಬೈಂದೂರು ಪ.ಪಂ. ಬೇಡ: ಬಿ.ವೈ. ರಾಘವೇಂದ್ರ

KannadaprabhaNewsNetwork |  
Published : Sep 24, 2025, 01:02 AM IST
ರಾಘವೇಂದ್ರ | Kannada Prabha

ಸಾರಾಂಶ

ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಬೈಂದೂರಿನಲ್ಲಿ ಒಂದು ಪಟ್ಟಣ ಕೇಂದ್ರ ಇರಬೇಕು ಎಂಬ ಒಳ್ಳೆಯ ಆಶಯದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇಲ್ಲಿನ ಗ್ರಾಮಾಂತರ ಭಾಗದ ಜನರಿಗೆ ಸಮಸ್ಯೆ ಎದುರಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಜನರಿಗೆ ಸಮಾಧಾನ ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಬೇಡ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಬೈಂದೂರು ಪಟ್ಟಣ ಪಂಚಾಯಿತಿ ರಚನೆಯ ಪರವಿರೋಧಗಳು ತೀವ್ರಗೊಂಡಿದ್ದು, ಈ ನಿರ್ಧಾರ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದದ್ದು ಸತ್ಯ. ಆದರೆ ಜನರು ಪಟ್ಟಣ ಪಂಚಾಯಿತಿ ಬೇಡವೆಂದು ಹೇಳಿದರೆ, ಅವರ ಮನಸ್ಸಿಗೆ ಅನುಗುಣವಾಗಿ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.ಮಂಗಳವಾರ ಉಡುಪಿಯಲ್ಲಿ ಮಾತನಾಡಿದ ಅವರು, ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಬೈಂದೂರಿನಲ್ಲಿ ಒಂದು ಪಟ್ಟಣ ಕೇಂದ್ರ ಇರಬೇಕು ಎಂಬ ಒಳ್ಳೆಯ ಆಶಯದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇಲ್ಲಿನ ಗ್ರಾಮಾಂತರ ಭಾಗದ ಜನರಿಗೆ ಸಮಸ್ಯೆ ಎದುರಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಜನರಿಗೆ ಸಮಾಧಾನ ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಬೇಡ ಎಂದರು.ಕಾಂಗ್ರೆಸ್ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ, ಅದು ಸಾಧ್ಯವಿಲ್ಲ. ಬೈಂದೂರಿನಲ್ಲಿ ಬಿಜೆಪಿ ಕಾರ್ಯಕರ್ತರೇ ಅಲ್ಲಿನ ಭವಿಷ್ಯ ಬರೆಯುವವರು. ಕಾಂಗ್ರೆಸ್ ನಮ್ಮ ಯಾವುದೇ ನಾಯಕನನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರು ಬುದ್ಧಿವಂತರಾಗಿದ್ದಾರೆ ಎಂದು ಹೇಳಿದರು.ಇದೇ ವೇಳೆ, ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಮಾಜಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನಡುವೆ ನಡೆದ ವಾಗ್ವಾದದ ಕುರಿತು ಪ್ರತಿಕ್ರಿಯಿಸಿದ ಸಂಸದರು, ದೀಪಕ್ ಕುಮಾರ್ ಶೆಟ್ಟಿ ಯಶಸ್ವಿ ಮಂಡಲ ಅಧ್ಯಕ್ಷರಾಗಿದ್ದರು. ಅವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಮನಸ್ಸಿನಲ್ಲಿ ಬೇರೆ ಆಲೋಚನೆಗಳು ಇರುವುದಿಲ್ಲವೆಂದು ನಂಬಿದ್ದೇನೆ ಎಂದರು.ಬಾಕ್ಸ್

ಕಾಂಗ್ರೆಸ್ ಕೈಯಾಡಿಸುವಂತಿಲ್ಲ: ಗಂಟಿಹೊಳೆ

ಬೈಂದೂರು ಪಪಂ ವ್ಯಾಪ್ತಿಗೆ ಗ್ರಾಮಾಂತರ ಪ್ರದೇಶಗಳನ್ನು ಸೇರಿಸುವುದರ ವಿರುದ್ಧ ಜನರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಜನರ ಅಭಿಪ್ರಾಯವೇ ಅಂತಿಮ, ಜನರ ನೋವಿಗೆ ಸ್ಪಂದಿಸುತ್ತೇವೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.ಬೈಂದೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಬಲವಾಗಿದ್ದು, ಅವರ ಅಭಿಪ್ರಾಯಕ್ಕೆ ತಕ್ಕಂತೆ ನಿರ್ಧಾರಗಳು ಆಗುತ್ತವೆ. ಕಾಂಗ್ರೆಸ್ ಕೈಯಾಡಿಸುವ ಪ್ರಶ್ನೆಯೇ ಇಲ್ಲ ಎಂದವರು ಸ್ಪಷ್ಟಪಡಿಸಿದರು.ಸಂಸದರ ಎದುರೇ ಬಿಜೆಪಿ ಭಿನ್ನಮತ ಸ್ಫೋಟ

ಬೈಂದೂರು ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತ ಸಂಸದ ಬಿ.ವೈ.ಆರ್. ಎದುರಲ್ಲೇ ಸ್ಫೋಟಗೊಂಡಿದೆ. ಬೈಂದೂರು ಬಿಜೆಪಿ ಮಂಡಲ‌ ಮಾಜಿ ಅಧ್ಯಕ್ಷ, ರೈತ ಮುಖಂಡ ದೀಪಕ್‌ ಕುಮಾರ್‌ ಶೆಟ್ಟಿ ಹಾಗೂ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ನಡುವೆ ವಾಕ್ಸಮರ ನಡೆದಿದೆ.ಶಾಸಕರು ಬೈಂದೂರಿನ ಬಿಜೆಪಿಯ ರಾಜಕೀಯ ಬೆಳವಣಿಗೆಗಳನ್ನು‌ ಸಂಸದರ ಗಮನಕ್ಕೆ ತರುತ್ತಿದ್ದಾಗ, ದೀಪಕ್ ಕುಮಾರ್ ಶೆಟ್ಟಿ ಆಕ್ಷೇಪಿಸಿದರು. ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ನಡೆದ ವಾಕ್ಸಮರ ತಾರಕಕ್ಕೇರಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಗೊಳಿಸಿದರು ಎನ್ನಲಾಗಿದೆ.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ