ಸ್ವಸಹಾಯ ಸಂಘಗಳು ಹೆಚ್ಚಾದಲ್ಲಿ ವಿಶೇಷಚೇತನರಿಗೆ ಬಲ: ಸುರೇಶ್

KannadaprabhaNewsNetwork |  
Published : Jan 25, 2025, 01:01 AM IST
ಕ್ಯಾಪ್ಷನ24ಕೆಡಿವಿಜಿ44 ದಾವಣಗೆರೆಯಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಪಂ ಸಿಇಓ ಸುರೇಶ ಇಟ್ನಾಳ್ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿಶೇಷಚೇತನರು ಸ್ವಾವಲಂಬನೆ ಜೀವನ ನಡೆಸಲು ಸರ್ಕಾರದಿಂದ ಶೇ.5% ಅನುದಾನದಲ್ಲಿ ಯೋಜನೆಗಳನ್ನು ಜಾರಿತರಲಾಗಿದೆ. ವಿಶೇಷಚೇತನರು ಈಗಾಗಲೇ 10 ಸ್ವಸಹಾಯಗಳನ್ನು ಮಾಡಿದ್ದು, 100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದರೆ ವಿಶೇಷಚೇತನರ ಒಗ್ಗಟ್ಟಿನಲ್ಲಿ ಬಲವಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ವಿಶೇಷಚೇತನರಿಗೆ ಸ್ವಉದ್ಯೋಗ ಮಾಹಿತಿ ಕಾರ್ಯಾಗಾರ- - - ಕನ್ನಡಪ್ರಭ ವಾರ್ತೆ ದಾವಣಗೆರೆ ವಿಶೇಷಚೇತನರು ಸ್ವಾವಲಂಬನೆ ಜೀವನ ನಡೆಸಲು ಸರ್ಕಾರದಿಂದ ಶೇ.5% ಅನುದಾನದಲ್ಲಿ ಯೋಜನೆಗಳನ್ನು ಜಾರಿತರಲಾಗಿದೆ. ವಿಶೇಷಚೇತನರು ಈಗಾಗಲೇ 10 ಸ್ವಸಹಾಯಗಳನ್ನು ಮಾಡಿದ್ದು, 100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದರೆ ವಿಶೇಷಚೇತನರ ಒಗ್ಗಟ್ಟಿನಲ್ಲಿ ಬಲವಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸೆಲ್ಕೋ ಫೌಂಡೇಷನ್ ಬೆಂಗಳೂರು, ಸಮಗ್ರ ಕರ್ನಾಟಕ ವಿಶೇಷಚೇತನರ ಕಲ್ಯಾಣಾಭಿವೃದ್ಧಿ ಸಂಘ, ಎಂಆರ್ ಡಬ್ಲ್ಯೂವಿಆರ್‌ಡಬ್ಯ್ಲೂ ಹಾಗೂ ಯುಆರ್ ಡಬ್ಲ್ಯೂ ನೇತೃತ್ವದಲ್ಲಿ ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತಹ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸುವ ವಿಶೇಷಚೇತನರಿಗೆ ಸ್ವಉದ್ಯೋಗ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷಚೇತನರ ಸ್ವಸಹಾಯ ಸಂಘಗಳ ಮೂಲಕ ಸ್ವಯಂ ಉದ್ಯೋಗ ಮಾಡಲು ನವೀಕರಣಕ್ಕಾಗಿ ಶೇ.5% ಅನುದಾನ ಸದುಪಯೋಗ ಪಡೆಯಲು ಸಂಘಗಳನ್ನು ರಚನೆ ಮಾಡಿ, ತಮ್ಮಗಳಿಗೆ ಏನಾದರು ತೊಂದರೆಯಾದಲ್ಲಿ ನೀವು ಸ್ವಉದ್ಯೋಗ ಕೈಗೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಸೆಲ್ಕೋ ಸಂಸ್ಥೆ ಶೇ.50 ರಿಯಾಯಿತಿ ನೀಡುತ್ತಿದೆ. ಅದರಂತೆ ನೀವು ಏನಾದರೂ ಕೆಲಸ ಕೇಳಿದರೂ ಸಿದ್ಧರಿರುತ್ತವೆ ಎಂದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಜಿಲ್ಲಾಡಳಿತ, ಜಿಪಂ, ಶಾಸಕರು, ಸಚಿವರು, ಸಂಸದರು ವಿಶೇಷಚೇತನರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅರ್ಹ ವಿಶೇಷಚೇತನರು ಸರ್ಕಾರದ ಸಾಧನ ಸಲಕರಣೆಗಳ ಪಡೆದು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇತರೆ ವೈಯಕ್ತಿಕವಾಗಿ ಉದ್ಯೋಗ ಪಡೆಯಲು ಸಮಸ್ಯೆ, ಆಧಾರ್ ಕಾರ್ಡ್, ಮಾಶಾಸನ ಇಂತಹ ಯಾವುದಾದರು ಸಮಸ್ಯೆಗಳಿದ್ದರೆ ನೇರವಾಗಿ ನಮಗೆ ಭೇಟಿ ಮಾಡಿದರೆ ತಕ್ಷಣವೇ ಪರಿಹಾರ ಮಾಡಿಕೊಡುತ್ತವೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ರಶ್ಮಿರೇಖಾ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕಲ್ಯಾಣಾಧಿಕಾರಿ ಡಾ. ಕೆ.ಕೆ.ಪ್ರಕಾಶ್, ಜಿಲ್ಲಾ ಸಂಯೋಜಕರಾದ ನಾಗರಾಜ ದಿಳ್ಯಪ್ಪರ್, ಸೆಲ್ಕೋ ಸಂಸ್ಥೆಯ ಉಪ ಮಹಾಪ್ರಬಂಧಕ ಪ್ರಸನ್ನ ಹೆಗಡೆ, ದಾರವಾಡ ಸೇಲ್ಕೋ ಫೌಂಡೇಷನ್ ಕಾರ್ಯನಿರ್ವಹಕ ಚಂದ್ರಶೇಖರ್, ನವೀನ್, ವಿದಾಯಕ, ಸಮಗ್ರ ಕರ್ನಾಟಕ ವಿಶೇಷಚೇತನರ ಕಲ್ಯಾಣಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಮಹಾಂತೇಶ್, ಎಂಆರ್ ಡಬ್ಲ್ಯೂವಿಆರ್ ಡಬ್ಯ್ಲೂ ಹಾಗೂ ಯುಆರ್ ಡಬ್ಲ್ಯೂ ಹಾಗೂ ವಿಶೇಷಚೇತನ ಫಲಾನುಭವಿಗಳು ಪಾಲ್ಗೊಂಡಿದ್ದರು.

- - - -24ಕೆಡಿವಿಜಿ44.ಜೆಪಿಜಿ:

ದಾವಣಗೆರೆಯಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ ಇಟ್ನಾಳ್ ಉದ್ಘಾಟಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು