ಶಿಕ್ಷಕರನ್ನು ಸನ್ಮಾನಿಸಿದರೆ ಸಮಾಜ ಗೌರವಿಸಿದಂತೆ: ಲೂಮಿನಾ ಸಿಸ್ಟರ್

KannadaprabhaNewsNetwork |  
Published : Sep 20, 2025, 01:02 AM IST
ಹಾವೇರಿಯ ಬಸವೇಶ್ವರ ನಗರದಲ್ಲಿ ನಾಗರಿಕ ವೇದಿಕೆ ಮತ್ತು ಮಕರಂದ ಸ್ವರಸಂಗೀತ ಕಲಾ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಹಲವು ಶಾಲೆಗಳ ಮುಖ್ಯೋಪಾಧ್ಯಾಯರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದೇ ಕಾರ್ಯಕ್ರಮದ ಉದ್ದೇಶ. ಹಾಗಾದಲ್ಲಿ ಸಂಸ್ಥೆಯ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಹಾವೇರಿ: ಶಿಕ್ಷಕರನ್ನು ಸನ್ಮಾನಿಸಿದರೆ ಇಡೀ ಸಮಾಜವನ್ನು ಗೌರವಿಸಿದಂತೆ. ಭವಿಷ್ಯದ ಸಮಾಜದ ಜವಾಬ್ದಾರಿಯುತ ಪ್ರಜೆಗಳನ್ನು ಕಟ್ಟುವ ಕೆಲಸ ಶಿಕ್ಷಕರದ್ದಾಗಿರುತ್ತದೆ. ಒಳ್ಳೆಯ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿದಾಗ ಅವರು ಇನ್ನಷ್ಟು ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಾರೆ ಎಂದು ಸೇಂಟ್ಯಾನ್ಸ್ ಶಾಲೆಯ ಮುಖ್ಯಶಿಕ್ಷಕಿ ರೇವಿರೆಂಡ್ ಲೂಮಿನಾ ಸಿಸ್ಟರ್ ತಿಳಿಸಿದರು.ಸ್ಥಳೀಯ ಬಸವೇಶ್ವರ ನಗರದ 11ನೇ ಕ್ರಾಸ್‌ನಲ್ಲಿರುವ ಬಿಷ್ಟನಗೌಡ್ರ ನಿವಾಸದಲ್ಲಿ ಬಸವೇಶ್ವರ ನಗರ ಮಹಿಳಾ ನಾಗರಿಕ ವೇದಿಕೆ ಮತ್ತು ಮಕರಂದ ಸ್ವರಸಂಗೀತ ಕಲಾ ಸಂಸ್ಥೆಯ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ 18 ಜನ ಪ್ರಧಾನ ಶಿಕ್ಷಕಿಯರ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರಿ ಬಿಷ್ಟನಗೌಡ್ರ ಮಾತನಾಡಿ, ಹಲವು ಶಾಲೆಗಳ ಮುಖ್ಯೋಪಾಧ್ಯಾಯರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದೇ ಕಾರ್ಯಕ್ರಮದ ಉದ್ದೇಶ. ಹಾಗಾದಲ್ಲಿ ಸಂಸ್ಥೆಯ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು. ಡಾ. ಗೀತಾ ಸುತ್ತಕೋಟಿ ಮಾತನಾಡಿ, ಇಷ್ಟೊಂದು ಪ್ರಮಾಣದಲ್ಲಿ ಶಿಕ್ಷಕಿಯರನ್ನು ಗುರುತಿಸಿ ಗೌರವಿಸಿದ್ದು ಅಪರೂಪದ ಸಂದರ್ಭವಾಗಿದ್ದು, ಮಹಿಳಾ ನಾಗರಿಕ ವೇದಿಕೆಗೆ ನಾವೆಲ್ಲ ಚಿರಋಣಿಯಾಗಿದ್ದೇವೆ ಎಂದರು.ವೇದಿಕೆಯಲ್ಲಿ ಬಸವೇಶ್ವರ ನಗರದ ಮಹಿಳಾ ನಾಗರಿಕ ವೇದಿಕೆಯ ಅಧ್ಯಕ್ಷರಾದ ಹಿರಿಯ ಲೇಖಕಿ ಲೀಲಾವತಿ ಪಾಟೀಲ, ಕಾರ್ಯದರ್ಶಿ ಶಶಿಕಲಾ ಮಠದ, ಕೋಶಾಧ್ಯಕ್ಷರಾದ ಜಯಶ್ರೀ ಪಾಟೀಲ, ಮಮತಾ ಹಿಂಚಿಗೇರಿ, ರೇಣುಕಾ ನರಗುಂದ, ಅನುಪಮಾ ಹಿರೇಮಠ, ಪಲ್ಲವಿ ಗುಡಗೂರ, ಲತಾ ಹಳಕೊಪ್ಪ, ಚಂಪಾವತಿ ಹುಣಸಿಕಟ್ಟಿ, ಸರೋಜಿನಿ ಬೆನ್ನೂರ ಇತರರು ಇದ್ದರು. ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ಶಿಕ್ಷಕಿಯರಾದ ಶೋಭಾ ಜಾಗಟಗೇರಿ, ಉಮಾ ಹೊರಡಿ, ಮಂಜುಳಾ ಕಳ್ಳಿಹಾಳ, ದೇವಕ್ಕ ಹೆಬ್ಬಳ್ಳಿ, ಲೂಮಿನಾ ಸಿಸ್ಟರ್, ಸ್ವಪ್ನಾ ಆರ್.ಲೋಬೊ, ಡಾ. ಗೀತಾ ಸುತ್ತಕೋಟಿ, ವೈಶಾಲಿ ಕೋರಿಶೆಟ್ಟರ, ಯಶೋದಾ ಚಿಕ್ಕಮಠ, ಧನ್ಯಾ ಮಾಗಾವಿ, ಮಮತಾ ನಂದೀಹಳ್ಳಿ, ಸುಪ್ರಿಯಾ ಕೆ.ಟಿ., ಸುನೀತಾ ಎಸ್.ಕೆ., ಶಾಂತಾ ಹಾವೇರಿ ಅವರನ್ನು ಸನ್ಮಾನಿಸಲಾಯಿತು. ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳಾ ಜೈನ್ ಅವರನ್ನೂ ವೇದಿಕೆ ಸನ್ಮಾನಿಸಿತು. ದೀಪಾ ನೆಲೋಗಲ್ ಮತ್ತು ಲತಾ ಹಳಕೊಪ್ಪ ಪ್ರಾರ್ಥಿಸಿದರು. ಸರೋಜಿನಿ ಬೆನ್ನೂರ ಸ್ವಾಗತಿಸಿದರೆ, ಮಧುಮತಿ ಚಿಕ್ಕೇಗೌಡರ ನಿರೂಪಿಸಿದರು. ಲತಾ ಹಳಕೊಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ