ಶರೀರ ಸದೃಢವಾದರೆ ಸಾಧನೆ ಸಾಧ್ಯ

KannadaprabhaNewsNetwork | Published : Nov 25, 2024 1:05 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಮಕ್ಕಳು ಶಾರೀರಕವಾಗಿ ಸದೃಢವಾದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಮಕ್ಕಳು ಈಗಿನಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶರತ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಮಕ್ಕಳು ಶಾರೀರಕವಾಗಿ ಸದೃಢವಾದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಮಕ್ಕಳು ಈಗಿನಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶರತ ಬಿರಾದಾರ ಹೇಳಿದರು.

ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಶಾಲಾ ಕ್ರೀಡಾಕೂಟದಲ್ಲಿ ಮಾತನಾಡಿ, ಮುಖ್ಯ ಅತಿಥಿಯಾಗಿ ಆಗಮಿಸಿದ ಅಂತಾರಾಷ್ಟ್ರೀಯ ಪ್ಯಾರಾಲಂಪಿಕ್ ಕ್ರೀಡಾಪಟು ರಾಜೇಶ ಪವಾರ ಅವರನ್ನು ಆದರ್ಶವನ್ನಾಗಿಟ್ಟುಕೊಂಡು ಜಿಲ್ಲೆ ಹಾಗೂ ದೇಶದ ಕೀರ್ತಿಯನ್ನು ವಿದ್ಯಾರ್ಥಿಗಳು ತರಬೇಕು. ವಿದ್ಯಾರ್ಥಿಗಳು ಕನಿಷ್ಠ ಯಾವುದಾದರೂ ಒಂದು ಕ್ರೀಡೆಯಲ್ಲಿಯಾದರೂ ಪಾಲ್ಗೊಳಬೇಕು. ಮೊಬೈಲ್‌ನಲ್ಲಿ ಬರುವ ಕ್ರೀಡೆಗಳನ್ನು ಬಿಟ್ಟು ಶಾರೀರಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ಕ್ರೀಡೆಗಳನ್ನು ಆಡುವಂತೆ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಪಾಲಕರು ಹೆಚ್ಚಿಗೆ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ಪ್ರೇರೇಪಿಸಬೇಕು ಎಂದರು.

ಮುಖ್ಯ ಅತಿಥಿ ಅಂತಾರಾಷ್ಟ್ರೀಯ ಪ್ಯಾರಾಲಂಪಿಕ್ ಕ್ರೀಡಾಪಟು ರಾಜೇಶ ಪವಾರ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಅಭ್ಯಾಸ ಮತ್ತು ಕ್ರೀಡೆಗೆ ಮಹತ್ವವನ್ನು ನೀಡಿ ಅವುಗಳನ್ನು ಸಮತೋಲನವನ್ನಾಗಿ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಥೆಯ ಚೇರಮನ್‌ ಡಾ.ಸುರೇಶ ಬಿರಾದಾರ ಮತ್ತು ನಿರ್ದೇಶಕಿ ದಿವ್ಯಾ ಬಿರಾದಾರ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ವಿದ್ಯಾರ್ಥಿಗಳು ಯೋಗಾಸನದ ಪಟ್ಟು, ನೃತ್ಯ, ಓಟ, ರಿಲೆ, ಹಗ್ಗದಾಟದಂತಹ ಆಟೋಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.ಪ್ರಾಚಾರ್ಯ ಶ್ರೀಧರ ಕುರಬೇಟ ಸ್ವಾಗತಿಸಿದರು. ಶಿಕ್ಷಕಿಯರಾದ ದೀಪಾ ತಿಳಗೂಳ ಮತ್ತು ಮಧುಮತಿ ಪಡತಾರೆ ನಿರೂಪಿಸಿದರು. ಶಿಕ್ಷಕಿ ಮೇಘಾ ಸೂರ್ಯವಂಶಿ ವಂದಿಸಿದರು.

ಈ ವೇಳೆ ಎ.ಎಚ್.ಸಗರ, ಪ್ರವೀಣಕುಮಾರ ಗೆಣ್ಣೂರ, ಅಶ್ವಿನ ವಗದರಗಿ, ಅನಿಲಕುಮಾರ ಬಾಗೇವಾಡಿ, ಶಶಿಧರ ಲೋನಾರಮಠ, ಶ್ರೀದೇವಿ, ಸುರೇಖಾ, ಸರೋಜಾ, ಸೀಮಾ, ಜ್ಯೋತಿ, ಹೀನಾ ಕೌಸರ, ತಬಸುಮ, ಶ್ವೇತಾ, ಮತ್ತಿತರರು ಉಪಸ್ಥಿತರಿದ್ದರು.

Share this article