ಸಂವಿಧಾನ ನಾಶವಾದರೆ ದೇಶ ವಿನಾಶ: ಪ್ರೊ.ಶುಭಾ ಮರವಂತೆ

KannadaprabhaNewsNetwork |  
Published : Apr 22, 2025, 01:52 AM IST
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶರಣೆ ಅಕ್ಕಮಹಾದೇವಿ ಸಂಸ್ಮರಣೆ ಕಾರ್ಯಕ್ರಮ   | Kannada Prabha

ಸಾರಾಂಶ

ತರೀಕೆರೆ, ಸಂವಿಧಾನ ನಾಶವಾದರೆ ದೇಶ ನಾಶವಾದಂತೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ಎನ್.ಎಸ್.ಎಸ್., ಸಂಯೋಜನಾಧಿಕಾರಿ ಪ್ರೊ.ಶುಭ ಮರವಂತೆ ಅಭಿಪ್ರಾಯಪಟ್ಟರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶರಣೆ ಅಕ್ಕಮಹಾದೇವಿ ಸಂಸ್ಮರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಂವಿಧಾನ ನಾಶವಾದರೆ ದೇಶ ನಾಶವಾದಂತೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ಎನ್.ಎಸ್.ಎಸ್., ಸಂಯೋಜನಾಧಿಕಾರಿ ಪ್ರೊ.ಶುಭ ಮರವಂತೆ ಅಭಿಪ್ರಾಯಪಟ್ಟರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ದಲಿತ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಇನ್ನರ್ ವೀಲ್, ಚುಟುಕು ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕು ಘಟಕಗಳ ಸಹಯೋಗದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕನ್ನಡದ ಮೊದಲ ಕವಿಯತ್ರಿ ಶರಣೆ ಅಕ್ಕಮಹಾದೇವಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಅಂಬೇಡ್ಕರ್ ಹುಡುಕಾಟ ವಿಷಯ ಕುರಿತು ಮಾತನಾಡಿದರು. ಹೆಣ್ಣು ಮಕ್ಕಳಿಗೆ ಹೆಚ್ಚು ಅಧಿಕಾರ ದೊರಕಬೇಕು, ಹೆಣ್ಣಿನ ಪ್ರಗತಿಯೇ ದೇಶದ ಪ್ರಗತಿ. ಹೆಣ್ಣುಮಕ್ಕಳು ತಲೆ ಎತ್ತಿ ಬದುಕ ಬೇಕು. ಮಹಿಳೆಯರು ಘನತೆಯಿಂದ ಬದುಕಬೇಕು. ಬಸವಣ್ಣನವರ ವಚನಗಳಲ್ಲಿ ಅಂದೇ ಸಂವಿಧಾನದ ಆಶಯದ ಪರಿಕಲ್ಪನೆ ಅಡಕವಾಗಿತ್ತು ಎಂಬುದನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಅಂಬೇಡ್ಕರ್ ಮಹಾತ್ಮರು, ಅಂಬೇಡ್ಕರ್ ಅವರ ಅದ್ಯಯನದ ವಿದ್ಯಾರ್ಥಿಗಳಾಗಬೇಕು. ಅದಕ್ಕೆ ತಿಳುವಳಿಕೆ ಮತ್ತು ಜ್ಞಾನ ಅಗತ್ಯ. ಅಂಬೇಡ್ಕರ್ ನೆನಪಿಸಿಕೊಳ್ಳುವುದು ಸ್ವಾಭಿಮಾನತೆ ಸಂಕೇತ. ಆತ್ಮಶಕ್ತಿಯಿಂದ ಜನರು ಬದುಕಬೇಕು ಎಂದು ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಈ ದೇಶವನ್ನು ಜೀವಂತವಾಗಿಟ್ಟಿದ್ದಾರೆ. ಜಾತಿಬೇಧ ಕಾರಣಕ್ಕೆ ಬಸವಣ್ಣ ದೇಗುಲವನ್ನು ತಿರಸ್ಕರಿಸಿದರೆ ಆಂಬೇಡ್ಕರ್ ಅವರು ಕಾಳಾರಾಂ ದೇವಾಲಯ ಪ್ರವೇಶಿಸುವ ಮೂಲಕ ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆ ದರು. ಮಹಿಳಾ ಸದಸ್ಯರನ್ನು ಸಂವಿಧಾನ ಸಭೆಗೆ ಸೇರಿಸಿಕೊಂಡರು. ಬುದ್ಧಂ ಶರಣಂ ಗಚ್ಚಾಮಿ ತತ್ವವನ್ನು ಶರಣರು ಶರಣ ತತ್ವವಾಗಿಸಿದರು. ಬುದ್ದನಿಂದ ಬಸವ, ಬಸವನಿಂದ ಅಂಬೇಡ್ಕರ್ ಎಂಬುದನ್ನು ಅವರು ವಿವರಿಸಿದರು. ಭವಿಷ್ಯದ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು. ಶರಣರ ವಚನಗಳಲ್ಲಿ ಅಂಬೇಡ್ಕರ್ ಹುಡುಕಾಟ ವಿಷಯ ತುಂಬಾ ಮೌಲ್ಯಯುತ ವಾಗಿದೆ ಎಂದು ಹೇಳಿದರು. ಈ ದಿನ ಡಾಟ್ ಕಾಂ ವರದಿಗಾರ್ತಿ ಎಸ್.ಜಿ.ಗಿರಿಜಾ ಅವರು ಅಕ್ಕಮಹಾದೇವಿ ವಚನಗಳಲ್ಲಿ ಸ್ತ್ರೀತ್ವದ ತಲ್ಲಣಗಳು ಮತ್ತು ಸಮಾನತೆ ಆಶಯಗಳು ವಿಷಯ ಕುರಿತು ಮಾತನಾಡಿ ಅಕ್ಕಮಹಾದೇವಿ ರಾಜಪ್ರಭುತ್ವ ಧಿಕ್ಕರಿಸುವ ಮೂಲಕ ಮಹಿಳಾ ಶೋಷಣೆಯನ್ನು ಖಂಡಿಸಿದರು. ಜಗತ್ತಿನ ಮೊದಲ ಮಹಿಳಾ ಧ್ವನಿಯಾಗಿ ಅಂಗಭಾವ ತೊರೆದು, ಲಿಂಗ ಭಾವ ತೊಟ್ಟರು, ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಅಕ್ಕಮಹಾದೇವಿ ತಮ್ಮ ವಚನಗಳ ಮೂಲಕ ಬಂಡಾಯದ ಧ್ವನಿಯಾಗಿದ್ದಾರೆ ಎಂದು ಪ್ರತಿಪಾದಿಸಿದರು.ಕಾಟಿನಗೆರೆ ರಂಗಪಯಣ ತಂಡದ ಕಲಾವಿದ ಲೋಕೇಶ್ ಭಕ್ತನಕಟ್ಟೆ ಕನ್ನಡಶ್ರೀ ಬಿ.ಎಸ್.ಭಗವಾನ್, ಉಮಾ ಪ್ರಕಾಶ್, ರೋಹಿಣಿ ನರಸಿಂಹಮೂರ್ತಿ, ಟಿ.ಜಿ.ಸದಾನಂದ್, ರಾಜು, ವಚನ ಹಾಗೂ ಕ್ರಾಂತಿಗೀತೆ ಹಾಡಿದರು.

ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ ವೀಲ್ ಅಧ್ಯಕ್ಷೆ ಉಮಾ ದಯಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್, ಕುವೆಂಪು ವಿ.ವಿ.ಪ್ರಾಧ್ಯಾಪಕಿ ದಿವ್ಯ, ಅ್ಜಜಂಪುರ ತಾಲೂಕು ದಸಂಸ ಮುಖಂಡ ಮಹೇಂದ್ರಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತಾ ರಮೇಶ್, ಶರಣ ಸಾಹಿತ್ಯ ಪರಿಷತ್ತಿನ ಚೇತನ್ ಮತ್ತಿತರರು ಭಾಗವಹಿಸಿದ್ದರು.21ಕೆಟಿಆರ್.ಕೆ.2ಃ ತರೀಕೆರೆಯಲ್ಲಿ ನಡೆದ ಅಂಬೇಡ್ಕರ್, ಅಕ್ಕಮಹಾದೇವಿ ಸಂಸ್ಮರಣೆಯನ್ನು ಇನ್ನರ್ ವೀಲ್ ಅಧ್ಯಕ್ಷೆ ಉಮಾ ದಯಾನಂದ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್, ಕುವೆಂಪು ವಿ.ವಿ.ಎನ್. ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ.ಶುಭ ಮರವಂತೆ, ವರದಿಗಾರ್ತಿ ಎಸ್.ಜಿ.ಗಿರಿಜಾ, ಶೇಖರಪ್ಪ, ಮಹೇಂದ್ರಸ್ವಾಮಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ