ರೈತರ ಹೋರಾಟದ ಬಗ್ಗೆ ನಿರ್ಲಕ್ಷಿಸಿದರೆ ಉಗ್ರ ಹೋರಾಟ

KannadaprabhaNewsNetwork |  
Published : Nov 22, 2026, 01:15 AM IST
ಬಿ. ಜಿ. ಪಾಟೀಲ್‌, ವಿಧಾನ ಪರಿಷತ್ತಿನ ಹಿರಿಯ ಸದಸ್ಯರು. | Kannada Prabha

ಸಾರಾಂಶ

If the farmers' struggle is ignored, an intense agitation will follow.

-ನಾರಾಯಣಪುರ ಜಲಾಶಯದಿಂದ ಕೂಡಲೇ ನೀರು ಹರಿಸಲು ಸರ್ಕಾರಕ್ಕೆ ಬಿ.ಜಿ. ಪಾಟೀಲ್ ಆಗ್ರಹ

--

ಕನ್ನಡಪ್ರಭ ವಾರ್ತೆ ಯಾದಗಿರಿ

ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಜಿಲ್ಲೆಯ ಸುರಪುರ, ಶಹಾಪುರ ಹಾಗೂ ಜೇವರ್ಗಿ ತಾಲೂಕುಗಳ ರೈತರ ಬೆಳೆಗಳಿಗೆ ತುರ್ತಾಗಿ ನೀರು ಹರಿಸುವಂತೆ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಡಾ.ಬಿ. ಜಿ. ಪಾಟೀಲ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಹತ್ವದ ಬೇಡಿಕೆಗೆ ಒತ್ತಾಯಿಸಿ, ಶಹಾಪುರ ತಾಲೂಕಿನ ಭೀಮರಾಯನ ಗುಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮತ್ತು ಕೆಬಿಜೆಎನ್‌ಎಲ್ ಕಚೇರಿ ಮುಂದೆ ಜಿಲ್ಲೆಯ ರೈತರು ಕಳೆದ 8 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಲ್ಲದೆ, ಶುಕ್ರವಾರ ಶಹಾಪುರ ಬಂದ್ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಸಚಿವ, ಶಾಸಕರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿಲ್ಲವಾದ್ದರಿಂದ ಬಂದ್ ಶನಿವಾರವೂ ಮುಂದುವರೆದಿದೆ. ಶಹಾಪುರ ಬಂದ್ ಮಾಡಿ ಹೋರಾಟ ನಡೆದರೂ ಸ್ಪಂದಿಸ ಸರ್ಕಾರ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿರುವ ಬಿ. ಜಿ. ಪಾಟೀಲರು, ಸರ್ಕಾರಕ್ಕೆ ಈ ಬಗ್ಗೆ ಮಾಹಿತಿಯ ಕೊರತೆ ಇದೆಯೇ ಎಂದು ಅಕ್ರೋಶದಿಂದ ಪ್ರಶ್ನಿಸಿದ್ದಾರೆ.

ಎಲ್ಲೋ ಒಂದು ಕಡೆ ಅರ್ಧ ಗಂಟೆ ಸಂಚಾರ ಬಂದ್ ಆದರೆ, ಕೂಡಲೇ ಸಂಬಂಧಪಟ್ಟವರು ಸಮಸ್ಯೆ ಆಲಿಸಿ ಸೂಕ್ತಕ್ರಮಕ್ಕೆ ಮುಂದಾಗುತ್ತಾರೆ. ಆದರೆ, ಯಾದಗಿರಿ ಜಿಲ್ಲೆಯ ವಾಣಿಜ್ಯ ನಗರಿ ಶಹಾಪುರನಲ್ಲಿ ಕಳೆದೆರಡು ದಿನಳಿಂದ ವ್ಯಾಪಾರ, ವಹಿವಾಟುಗಳಿಂದ ಸ್ಥಬ್ಧಗೊಂಡರೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿಲ್ಲದಿರುವುದು ನೋಡಿದರೆ ರೈತರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಎಷ್ಟು ಎಂಬುವುದು ಸಾಬೀತಾಗಿದೆ ಅವರು ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಮಳೆಯಿಲ್ಲದೇ ಬೆಳೆ ಹಾನಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಈಗ ಈ ಬೆಳೆಗಳಿಗೂ ನೀರು ಕೊಡುವುದಿಲ್ಲ ಎಂದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿರುವ ಬಿ. ಜಿ. ಪಾಟೀಲರು, ನಮ್ಮ ಜಲಾಶಯದಲ್ಲಿನ ನೀರು ನಮ್ಮ ರೈತರಿಗೆ ಕೊಡಲು ಆಗದ ರಾಜ್ಯ ಸರ್ಕಾರ, ನೆರೆಯ ತೆಲಂಗಾಣ ರಾಜ್ಯಕ್ಕೆ ಕದ್ದುಮುಚ್ಚಿ 2 ಟಿಎಂಸಿ ನೀರು ಬಿಟ್ಟಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ನೇರವಾಗಿ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ 15 ದಿನಗಳ ಹಿಂದೆ ಮಾಜಿ ಸಚಿವ ರಾಜುಗೌಡ ನೇತೃತ್ವದಲ್ಲಿ ಯಾದಗಿರಿ ಬಂದ್ ಮಾಡಿ ಹೋರಾಟ ಮಾಡಿ ಬೇಡಿಕೆಗೆ ಆಗ್ರಹಿಸಿದರೂ ಸರ್ಕಾರ ಇದುವರೆಗೂ ಕ್ಯಾರೇ ಎಂದಿಲ್ಲ. ಸರ್ಕಾರ ತನ್ನ ಮೊಂಡಾಟತನದಿಂದ ಸುಳ್ಳು ಹೇಳಿ ಸುರಪುರ, ಶಹಾಪುರ ಮತ್ತು ಜೇವರ್ಗಿ ತಾಲೂಕುಗಳ ರೈತರಿಗೆ ತೊಂದರೆಗೆ ಸಿಲುಕಿಸಿದೆ. ಕೂಡಲೇ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರು ನೇರವಾಗಿ ಮಧ್ಯ ಪ್ರವೇಶಿಸಿ ನಾರಾಯಣಪುರ ಜಲಾಶಯದಿಂದ ಕೂಡಲೇ ನೀರು ಹರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಅವರು ಆಗ್ರಹಿಸಿದ್ದಾರೆ.

-

21ವೈಡಿಆರ್12 : ಬಿ. ಜಿ. ಪಾಟೀಲ್‌, ವಿಧಾನ ಪರಿಷತ್ತಿನ ಹಿರಿಯ ಸದಸ್ಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ: ಶಾಸಕ ಬಸನಗೌಡ ದದ್ದಲ್
ನಾಳೆಯೊಳಗೆ ಮತಗಟ್ಟೆ ಮರುಹೊಂದಾಣಿಕೆ ಪೂರ್ಣ: ಡೀಸಿ