ಪ್ರತಿಯೊಬ್ಬರು ಧರ್ಮಾಚರಣೆಯಲ್ಲಿ ಬದುಕು ಸಾಗಿಸಿ

KannadaprabhaNewsNetwork |  
Published : Nov 22, 2026, 01:15 AM IST
ಯಾದಗಿರಿ ತಾಲೂಕಿನ ಆಶನಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವೀರಾಂಜನೇಯ ದೇವಸ್ಥಾನ ಲೋಕಾರ್ಪಣೆ ಮಾಡಿ, ನಂತರ ನಡೆದ ಧರ್ಮಸಭೆಯಲ್ಲಿ 1008 ಕಾಶಿ ಜಗದ್ಗುರುಗಳಾದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

Let everyone lead their lives in accordance with Dharma.

- 1008 ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಆಶೀರ್ವಚನ । ಆಶನಾಳದಲ್ಲಿ ಶ್ರೀ ವೀರಾಂಜನೇಯ ದೇವಳ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಭರತ ಭೂಮಿ ಕೃಷಿ ಮತ್ತು ಆಧ್ಯಾತ್ಮಿಕ ಪ್ರಧಾನವಾದ ದೇಶವಾಗಿದೆ. ಪ್ರತಿಯೊಬ್ಬರು ಧರ್ಮಾಚರಣೆಯಲ್ಲಿ ಬದುಕು ಸಾಗಿಸಿ ಸಮಾಜಕ್ಕೆ ಒಳಿತನ್ನು ಮಾಡುವ ಮೂಲಕ ಬದುಕಿನ ಮೌಲ್ಯ ವೃದ್ಧಿಸಿಕೊಳ್ಳಿ ಎಂದು 1008 ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ನುಡಿದರು.

ತಾಲೂಕಿನ ಆಶನಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವೀರಾಂಜನೇಯ ದೇವಸ್ಥಾನ ಲೋಕಾರ್ಪಣೆ ಮಾಡಿ, ನಂತರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಇಂದು ನಾವೆಲ್ಲರೂ ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದೇವೆ. ಒಂದು ಕಡೆ ನಮ್ಮ ಮೂಲ ಆಧ್ಯಾತ್ಮಿಕ ಒಲವಿನಿಂದ ದೂರವಾಗುವ ಮೂಲಕ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಗ್ರಾಮದ ಜನರು ಭವ್ಯ ದೇವಸ್ಥಾನ ನಿರ್ಮಾಣ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡಲು ಭಕ್ತರು ಸರ್ಕಾರದ ಸಹಾಯ ಪಡೆಯದೆ ಒಗ್ಗಟ್ಟಾಗಿ ಸಂಪನ್ಮೂಲ ಕ್ರೋಢೀಕರಿಸಿ ಯಶಸ್ವಿಯಾಗಿದ್ದಾರೆ. ಅದರಂತೆ, ಆಶನಾಳ ಗ್ರಾಮದವರು ಕೂಡ ತಮ್ಮ ಭಕ್ತಿಯಿಂದ ಶಕ್ತಿಶಾಲಿಯಾದ ವೀರಾಂಜನೇಯನ ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಗಮನ ಸೆಳೆದು ಭಕ್ತಿ ಮೆರೆದಿದ್ದಾರೆ. ಒಂದು ಕಡೆ ಉತ್ತರ ಭಾರತದ ಅಯೋಧ್ಯೆ ಭಕ್ತರ ಪಾಲಿಗೆ ಮುಕ್ತಿಧಾಮವಾದರೆ, ಇತ್ತ ಈ ಗ್ರಾಮ ಭಕ್ತಿಧಾಮವಾಗಿ ಬದಲಾವಣೆಯಾಗಿದೆ ಎಂದು ಶ್ಲಾಘಿಸಿದರು.

ಶ್ರೀರಾಮನ ಯಶಸ್ಸಿನ ಹಿಂದೆ ಆಂಜನೇಯನ ಶ್ರಮ ಅಗಾಧವಾಗಿದೆ. ಇಡೀ ವಿಶ್ವದಲ್ಲಿ ಆತನನ್ನು ಪೂಜಿಸುತ್ತಾರೆ. ಆತನ ಕೃಪೆಯಿಂದ ಎಲ್ಲರ ಸಂಕಷ್ಟಗಳು ದೂರವಾಗಿ ಆರೋಗ್ಯಕರ ಬದುಕು ಸಾಗಿಸಿ ಎಂದು ಹಾರೈಸಿದರು. ಸಮಾಜದ ಶಕ್ತಿಯಾಗಿರುವ ಯುವ ಜನತೆ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ಪಡೆದು ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಬೇಕೆಂದು ಕಿವಿ ಮಾತು ಹೇಳಿದರು.

ನೇತೃತ್ವ ವಹಿಸಿದ್ದ ದಿಗ್ಗಾಂವನ ಶ್ರೀ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಜನರು ಭಾವುಕ ಜೀವಿಗಳಾಗಿದ್ದಾರೆ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಪರೋಪಕಾರಿಯಾಗಿ ಬದುಕು ಸಾಗಿಸಬೇಕು. ಅಂದಾಗ ಮಾತ್ರ ಎಲ್ಲರಲ್ಲಿ ಹೃದಯ ವೈಶಾಲ್ಯತೆ ಬೆಳೆದು ಬದಲಾವಣೆಗೆ ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ, ಸಾಯಿಬಣ್ಣ ಬೋರಬಂಡ, ಲಲಿತಾ ಅನಪೂರ, ನಾಗರತ್ನ ಕುಪ್ಪಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಂದ ಜನರಲ್ಲಿ ಸಾಮರಸ್ಯ ಮೂಡಿ, ಸದೃಢ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ಸಿಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಗುರುಗಳಾದ ದೇವರ ಗುಂಡಗುರ್ತಿಯ ನಿಜಲಿಂಗ ಮಹಾಸ್ವಾಮೀಜಿ, ಅಳ್ಳೊಳ್ಳಿಯ ನಾಗಪ್ಪಯ್ಯ ಮಹಾಸ್ವಾಮೀಜಿ, ಮೈಲಾಪೂರದ ಶರಣಪ್ಪ ಪೂಜಾರಿ, ಮುಂಡರಗಿ ಚಂದ್ರಶೇಖರ ಮುತ್ಯ, ಶ್ರೀದೇವಿ ಮಾತಾಜಿ, ಮಹೇಶರೆಡ್ಡಿ ಮುದ್ನಾಳ, ಸುದರ್ಶನ ನಾಯಕ್, ಬಸವರಾಜಪ್ಪ ಬಾಗ್ಲಿ, ಶರಣಪ್ಪ ಹೊನಗೇರಾ, ಸೋಮನಗೌಡ ಬೆಳಗೇರಾ, ಬಸವರಾಜ ಚಂಡ್ರಿಕಿ, ಇರ್ಫಾನ ಬಾದಲ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಜಗದೀಶ ಗೌಡ ಪಾಟೀಲ್, ಮಲ್ಲಿಕಾರ್ಜುನ ಪೂಜಾರಿ, ನಿವೃತ್ತ ಶಿಕ್ಷಕ ಹಣಮಂತ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ವಿವಿಧ ಸಂಗೀತವಾದ್ಯ ಮೇಳಗಳು, ಕಲಾ ತಂಡಗಳೊಂದಿಗೆ ಕಾಶಿ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

----ಫೋಟೊ----

21ವೈಡಿಆರ್‌3 :

ಯಾದಗಿರಿ ತಾಲೂಕಿನ ಆಶನಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವೀರಾಂಜನೇಯ ದೇವಸ್ಥಾನ ಲೋಕಾರ್ಪಣೆ ಮಾಡಿ, ನಂತರ ನಡೆದ ಧರ್ಮಸಭೆಯಲ್ಲಿ 1008 ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ: ಶಾಸಕ ಬಸನಗೌಡ ದದ್ದಲ್
ನಾಳೆಯೊಳಗೆ ಮತಗಟ್ಟೆ ಮರುಹೊಂದಾಣಿಕೆ ಪೂರ್ಣ: ಡೀಸಿ