ಕನ್ನಡಪ್ರಭ ವಾರ್ತೆ ಇಳಕಲ್ಲ
ಸರ್ಕಾರದ ಅನುದಾನವಿಲ್ಲದೆ ನಾಡಿನಾದ್ಯಂತ ಸಾವಿರಾರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸಲಾಗಿದೆ. ವಿಶೇಷವಾಗಿ ಮಹಿಳೆಯರು ಆಸಕ್ತಿಯಿಂದ ಜನಪದ ಸಾಹಿತ್ಯವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.ಜಾನಪದ ಪರಿಷತ್ ಇಲಕಲ್ಲ ತಾಲೂಕು ಘಟಕ ಶ್ರೀಮಠದ ದಾಸೋಹ ಭವನದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನಪದ ಸಂಸ್ಕೃತಿ ಮರೆತರೆ ಮಾನವ ಜನಾಂಗ ಮೂಲೆಗುಂಪಾದಂತೆ ಜಾನಪದ ಸೊಗಡು ಮಹಿಳೆಯರಿಂದ ಉಳಿಯಲಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಬಿತ್ತರಿಸಿದವರು ಜನಪದಿಯರು. ಆರೋಗ್ಯವಂತ ಸಮಾಜದ ಕಲ್ಪನೆ ನೀಡಿದರು. ವಚನ, ಜನಪದ ಉಳಿಸಿ ಬೆಳೆಸಬೇಕೆಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕಜಾಪ ತಾಲೂಕಾಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ, ಜನಪದಕ್ಕೆ ವಿಶೇಷ ಆಕರ್ಷಕ ಶಕ್ತಿಯಿದೆ. ಆಧುನಿಕ ಭರಾಟೆಯ ಭ್ರಮೆಯಿಂದ ಹೊರಬಂದು ನೆಲಮೂಲ ಸಂಸ್ಕೃತಿಯನ್ನು ಮರುಸ್ಥಾಪಿಸುವ ಅವಶ್ಯಕತೆ ಇದೆ. ಅದಕ್ಕೆ ಜನಪದ ಮೂಲ ಆಕರ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಮಾತನಾಡಿ, ಮಹಿಳೆಯರು ಹಬ್ಬಗಳ ವೈಶಿಷ್ಟ್ಯ, ಉಡುಗೆ-ತೊಡಿಗೆ, ಆಹಾರ ಕುರಿತು ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.ಎಸ್.ವಿ.ಎಂ. ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅನ್ನಪೂರ್ಣ ಮಠ ಜನಪದದಲ್ಲಿ ಮಹಿಳೆ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಎಸ್.ಆರ್. ಕಂಠಿ ಬಿ.ಇಡಿ. ಕಾಲೇಜು ಪ್ರಾಚಾರ್ಯರಾದ ರಾಖಿ ಪಡ್ನೇಕರ್, ಹಂಪಮ್ಮ ಮರಟದ, ವಿಜಯಲಕ್ಷ್ಮೀ ಹರಿಹರ, ದೇವಿಕಮ್ಮ ಕೂಕನೂರ, ರಾಮನಗರ ಕಜಾಪ ಜಿಲ್ಲಾಧ್ಯಕ್ಷ ಕೆ.ಸಿ. ಕಾಂತಪ್ಪ, ವಕೀಲ ವಿಜಯ ಕೊಪ್ಪ, ಆರ್.ಬಿ. ನಬಿವಾಲೆ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೆ. ವಂಶಾಕೃತಮಠ ಹಾಗೂ ನೀಲಕಂಠ ಕಾಳಗಿ, ಈರಣ್ಣ ಕುಂದರಗಿಮಠ ಅವರನ್ನು ಸನ್ಮಾನಿಸಲಾಯಿತು. ಎಸ್.ವಿ.ಎಂ. ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿ ಸೌಮ್ಯಾ ಕೊಡಗಲಿ ಪ್ರದರ್ಶಿಸಿದ ಜಾನಪದ ನೃತ್ಯ ವಿಶೇಷ ಗಮನ ಸೆಳೆಯಿತು.ಮಹಿಳಾ ಘಟಕದ ಆದ್ಯಕ್ಷರಾಗಿ ಸವಿತಾ ಮಾಟೂರ, ಕಾರ್ಯದರ್ಶಿಯಾಗಿ ಸುಜಾತಾ ಅಂಗಡಿ, ಖಜಾಂಚಿಯಾಗಿ ಮಂಜುಳಾ ಗರಡಿಮನಿ, ವೈಶಾಲಿ ಘಂಟಿ, ದೇವಿಕಾ ಮಳಗೌಡರ, ಅಕ್ಕಮ್ಮ ದೇವರಡ್ಡಿ, ಸುಶೀಲಾ ಹೂಗಾರ, ವಿಶಾಲಾಕ್ಷಿ ಶೆಟ್ಟರ, ಮಂಜುಳಾ ಅಂಗಡಿ, ಸವಿತಾ ಹಿರೇಮಠ, ಅನುಪಮಾ ಗೊಂಗಡಶೆಟ್ಟಿ, ನೀಲಮ್ಮ ಬಾದಿಮನಾಳ, ಶಂಕ್ರಮ್ಮ ಸಗರದ, ಸುಮಾ ಶೀಲವಂತರ, ಶ್ರೀದೇವಿ ಪಾಟೀಲ, ಶರಣಮ್ಮ ತಳವಾರ, ಡಾ.ಪ್ರತಿಭಾ ಕೊಳ್ಳಿ, ವಿದ್ಯಾ ಬಸ್ಮೆ, ಬಸಮ್ಮ ಕರ್ಲಿ, ಕಸ್ತೂರಿಬಾಯಿ ಮೇರೆವಾಡಿ, ರೇಖಾ ಇಂದರಗಿ ಪದಾಧಿಕಾರಿಗಳಾಗಿ ಪದಗ್ರಹಣ ಸ್ವೀಕರಿಸಿದರು. ಅಕ್ಕನ ಬಳಗದ ಸುವರ್ಣ ಗೊಂಗಡಶೆಟ್ಟಿ ಸಂಗಡಿಗರು ಪ್ರಾರ್ಥಿಸಿದರು, ಪರಿಷತ್ ಗೀತೆಯನ್ನು ಶಿಲ್ಪಾ ಹಿರೇಮಠ ಹಾಡಿದರು, ಸುನಿತಾ ಶೆಟ್ಟರ ಸ್ವಾಗತಿಸಿದರು. ಸುವರ್ಣ ಕಲ್ಯಾಣಶೆಟ್ಟಿ (ಅಲೇಗಾವಿ) ನಿರೂಪಿಸಿದರು. ಶ್ರವಣಾ ಸಿಕ್ಕೇರಿಮಠ ವಂದಿಸಿದರು.