ಸರ್ಕಾರಿ ಶಾಲೆ ಉಳಿಯದಿದ್ದರೆ ದ್ರೋಹ ಬಗೆದಂತೆ: ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್‌

KannadaprabhaNewsNetwork |  
Published : Jan 05, 2025, 01:30 AM IST
ಹೊನ್ನಾಳಿ ಫೋಟೋ 4ಎಚ್.ಎಲ್.ಐ1.ಶಿಕ್ಷಣ ಆದಾಲತ್, ನಡೆ ನಡೆ ಶಾಲೆಗಳ ಕಡೆ ಅಭಿಯಾನದಡಿ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯರ್ ಕುಮಾರ್ ಅವರು ತಮ್ಮ ಬಳದೊಂದಿಗೆ ಹೊನ್ನಾಳ‍ಿ-ನ್ಯಾಮತಿ ಅವಳಿ ತಾಲೂಕುಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಶಿಕ್ಷಕರು, ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು. | Kannada Prabha

ಸಾರಾಂಶ

ಸಂವಿಧಾನದ ಆಶಯಗಳಿಗೆ ವಿರುದ್ಧ ಹೋದಂತೆ. ಜೊತೆಗೆ ಮತಹಾಕಿದ ಮತದಾರರು ಹಾಗೂ ಜನರಿಗೆ ಜನಪ್ರತಿನಿಧಿಗಳು ದ್ರೋಹ ಮಾಡಿದಂತೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಹೊನ್ನಾಳಿಯಲ್ಲಿ ಹತ್ತು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಅದಾಲತ್ - ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನದಡಿ ಭೇಟಿ ನೀಡಿ ಮಾತನಾಡಿದರು.

ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸರ್ಕಾರಿ ಶಾಲೆಗಳು ಉಳಿಯದಿದ್ದರೆ, ಗ್ರಾಮೀಣ ಪ್ರದೇಶಗಳಿಗೆ ಅಭಿವೃದ್ಧಿ ತಲುಪದಿದ್ದರೆ ಸಂವಿಧಾನದ ಆಶಯಗಳಿಗೆ ವಿರುದ್ಧ ಹೋದಂತೆ. ಜೊತೆಗೆ ಮತಹಾಕಿದ ಮತದಾರರು ಹಾಗೂ ಜನರಿಗೆ ಜನಪ್ರತಿನಿಧಿಗಳು ದ್ರೋಹ ಮಾಡಿದಂತೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದ ಆಶಯಗಳಿಗೆ ವಿರುದ್ಧ ಹೋದಂತೆ. ಜೊತೆಗೆ ಮತಹಾಕಿದ ಮತದಾರರು ಹಾಗೂ ಜನರಿಗೆ ಜನಪ್ರತಿನಿಧಿಗಳು ದ್ರೋಹ ಮಾಡಿದಂತೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಹೊನ್ನಾಳಿಯಲ್ಲಿ ಹತ್ತು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಅದಾಲತ್ - ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನದಡಿ ಭೇಟಿ ನೀಡಿ ಮಾತನಾಡಿದರು.

ಹೊನ್ನಾಳಿ - ನ್ಯಾಮತಿ ತಾಲೂಕುಗಳ ಹತ್ತು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಅದಾಲತ್ - ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನದಡಿ ಸವಳಂಗ, ಸೋಗಿಲು, ಫಲವನಹಳ್ಳಿ, ಕಂಚಿಗಾರನಹಳ್ಳಿ, ಗಂಜೀನಹಳ್ಳಿ, ಚಟ್ನಹಳ್ಳಿ-2, ನ್ಯಾಮತಿ, ದೊಡ್ಡೆತ್ತಿನಹಳ್ಳಿ, ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಇಲ್ಲಿನ ಶಾಲೆಗಳಲ್ಲಿರುವಷ್ಟು ತೊಂದರೆ, ಸಮಸ್ಯೆಗಳು ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿವೆ. ಜನಪ್ರತಿನಿಧಿಗಳು ಆದಷ್ಟು ಬೇಗ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಗಂಜಿನಹಳ್ಳಿ ಗ್ರಾಮದಲ್ಲಿ 1150 ಮಕ್ಕಳು ಇದ್ದು, ಬೇರೆಡೆ ಓದಲು ಹೋಗುತ್ತಿದ್ದಾರೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ನಾಲ್ಕು ಕೊಠಡಿಗಳಿದ್ದರೂ ವಿದ್ಯಾರ್ಥಿಗಳು ಇರುವುದು ನಾಲ್ವರು ಮಾತ್ರ. ಗ್ರಂಥಾಲಯ ಕಟ್ಟಡ ಪಾಳುಬಿದ್ದಿದೆ. ಕಟ್ಟಡವೇ ಇಲ್ಲವೆಂದ ಮೇಲೆ ಪುಸ್ತಕಗಳು ಇರಲು ಸಾಧ್ಯವೇ? ಸರ್ಕಾರಿ ಶಾಲೆಗಳು ಸಾಯುತ್ತಿವೆ ಎಂದರೆ ಮುಂಬರುವ ದಿನಗಳಲ್ಲಿ ಊರುಗಳೇ ಜೀವ ಬಿಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ ಎಂದ ಅವರು, ಇದು ಸಾಮಾಜಿಕ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ, ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ಉಪಾಧ್ಯಕ್ಷ ಶಿವಕುಮಾರ್ ಶೆಟ್ಟಿ, ರಾಜ್ಯ ಸಂಚಾಲಕ ಅಯ್ಯಣ್ಣ ಮುಲ್ಕಲ್, ಶಿವಕುಮಾರ್ ಸಂಬಳಿ, ಹೊನ್ನಾಳಿ ಯುವ ಮುಖಂಡ ಸುದೀಪ್, ರಾಜು ಕಣಗಣ್ಣನವರ್ ಹಾಜರಿದ್ದರು. ಜಿ.ಬಿ.ವಿನಯ್ ಕುಮಾರ್ ಮಕ್ಕಳ ಜೊತೆ ಸಾಲಿನಲ್ಲಿ ಕುಳಿತು ಬಿಸಿಯೂಟ ಸವಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ