ಶಿಕ್ಷಣದ ಮಹತ್ವ ಅರಿತರೆ ಸಮುದಾಯದ ಪ್ರಗತಿ ಸುಗಮ

KannadaprabhaNewsNetwork |  
Published : Jul 25, 2026, 01:45 AM IST
ದೊಡ್ಡಬಳ್ಳಾಪುರದ ದೇವಾಂಗ ಮಂಡಲಿ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ನಮ್ಮ ಸಮುದಾಯ ಶೈಕ್ಷಣಿಕವಾಗಿ ಮುನ್ನಡೆಯಬೇಕೆಂದು ದಶಕಗಳ ಹಿಂದೆಯೇ ನಮ್ಮ ಹಿರಿಯರು ಶಿಕ್ಷಣದ ಮಹತ್ವ ಕುರಿತು ಹೇಳಿ, ಶಿಕ್ಷಣ ಸಮುದಾಯದ ಪ್ರಗತಿಗೆ ಅಸ್ತ್ರವಾಗಬೇಕು ಎಂದು ಪ್ರತಿಪಾದಿಸಿದ್ದರು ಎಂದು ನಗರಸಭಾ ಸದಸ್ಯ ಹಾಗೂ ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಹೇಳಿದರು

ದೊಡ್ಡಬಳ್ಳಾಪುರ: ನಮ್ಮ ಸಮುದಾಯ ಶೈಕ್ಷಣಿಕವಾಗಿ ಮುನ್ನಡೆಯಬೇಕೆಂದು ದಶಕಗಳ ಹಿಂದೆಯೇ ನಮ್ಮ ಹಿರಿಯರು ಶಿಕ್ಷಣದ ಮಹತ್ವ ಕುರಿತು ಹೇಳಿ, ಶಿಕ್ಷಣ ಸಮುದಾಯದ ಪ್ರಗತಿಗೆ ಅಸ್ತ್ರವಾಗಬೇಕು ಎಂದು ಪ್ರತಿಪಾದಿಸಿದ್ದರು ಎಂದು ನಗರಸಭಾ ಸದಸ್ಯ ಹಾಗೂ ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಹೇಳಿದರು.

ಇಲ್ಲಿನ ದೇವಾಂಗ ಮಂಡಲಿ ವತಿಯಿಂದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ರ್ಯಾಂಕ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಪ್ರತಿಭಾನ್ವಿತರು ಹೊರ ಬರುತ್ತಿದ್ದರೂ ಸಹ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಂಡಲಿಯಿಂದ ಕಡಿಮೆ ಶುಲ್ಕದಲ್ಲಿ ದೇವಲ ಮಹರ್ಷಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಏಕಾಗ್ರತೆ, ಬದ್ದತೆಯಿಂದ ಶ್ರಮಪಟ್ಟು ಓದಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ, ತಾಯಿ ತಂದೆಯರಿಗೆ ಗುರು ಹಿರಿಯರಿಗೆ ಗೌರವ ನೀಡಬೇಕಿದೆ ಎಂದರು.

ದೇವಾಂಗ ಮಂಡಲಿಯ ಗೌರವ ಕಾರ್ಯದರ್ಶಿ ಪ್ರೊ.ಎಂ.ಜಿ.ಅಮರನಾಥ್ ಮಾತನಾಡಿ, ಯಾವುದೇ ಸಮುದಾಯ ಮುನ್ನಡೆಯಬೇಕಾದರೆ ಶಿಕ್ಷಣ ಮುಖ್ಯವಾಗಿದೆ. ದೇವಾಂಗ ಸಮುದಾಯ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ದಿಸೆಯಲ್ಲಿ ಸಾಧಕರನ್ನು ಪುರಸ್ಕರಿಸುವ ಮೂಲಕ ದೇವಾಂಗ ಮಂಡಲಿ, ಪ್ರತಿಭಾನ್ವಿತರಿಗೆ ಉತ್ತೇಜನ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಎಂ.ಪಿ.ಸಿ.ವೆಂಕಟೇಶ್ (ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಾಧನೆ), ಡಾ.ಭಾನು ಪ್ರಕಾಶ್ (ಪಿಎಚ್‌ಡಿ), ಶ್ರೀಕಾಂತ್.ಸಿ.ಕೆ (ಎನ್‌ಸಿಸಿ ಮತ್ತು ಬಾಲ್ ಬ್ಯಾಡ್ಮಿಂಟನ್ ಸಾಧನೆ), ಶುಚಿತ.ಎ.ವಿ (ಸಿಪಿಎ ಅತ್ಯುನ್ನತ ಶ್ರೇಣಿ), ಜಯಲಕ್ಷ್ಮೀ.ಎಂ.ಆರ್ (ಎಂ.ಕಾಂ ಮೂರನೇ ರ್ಯಾಂಕ್), ಎ.ಜಿ.ಯಶಸ್ವಿನಿ (ಯೋಗ) ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ದೇವಾಂಗ ಮಂಡಲಿ ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಎನ್.ಎಸ್.ಚಿಕ್ಕಣ್ಣ, ಸಹ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಎಚ್.ವಿ.ಅಖಿಲೇಶ್ ನಿರ್ದೇಶಕರಾದ ಕೆ.ಎಸ್.ಮಂಜುನಾಥ, ಎಲ್.ಮಹೇಶ, ಎನ್.ಜಿ.ಕುಮಾರ್, ಕೆ.ಎನ್.ಜನಾರ್ಧನ, ವಿ.ಎಸ್.ರಾಘವೇಂದ್ರ, ಪ್ರಭಾಕರ್, ಕೆ.ಎಸ್.ನರೇಂದ್ರ, ಎಸ್.ಎನ್.ನಟರಾಜ, ವಿ.ನಿರ್ಮಲ, ಬಿ.ಪಿ.ಪ್ರಿಯಾಂಕ, ಪಿ.ಎಚ್.ಗೋಪಾಲ ಕೃಷ್ಣ, ಜಿ.ಸಿ.ಶಿವಕುಮಾರ್ ಭಾಗವಹಿಸಿದ್ದರು.

22ಕೆಡಿಬಿಪಿ2-

ದೊಡ್ಡಬಳ್ಳಾಪುರದ ದೇವಾಂಗ ಮಂಡಲಿ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ
ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ