ಸಾಲಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ

KannadaprabhaNewsNetwork |  
Published : May 03, 2024, 01:06 AM IST
ಗಜೇಂದ್ರಗಡದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಬಿಎಸ್ವೈ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿನ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡ ಪರಿಣಾಮ ಪಾಲಿಗೆ ಇಲ್ಲದಂತಾಗಿದೆ.

ಗಜೇಂದ್ರಗಡ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿ ಸಂಕಷ್ಟ ಬಂದೊದಗಿದೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಎದುರಿನ ಪುರಸಭೆ ಬಯಲು ಜಾಗೆಯಲ್ಲಿ ಗುರುವಾರ ಸಂಜೆ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿನ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡ ಪರಿಣಾಮ ಪಾಲಿಗೆ ಇಲ್ಲದಂತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರಗಾಲ ಎದುರಾಗಲಿದೆ. ನಾವು ಅಧಿಕಾರದಲ್ಲಿದ್ದರೆ ಜಲಾಶಯಗಳು ತುಂಬಿ ತುಳಕುತ್ತವೆ. ರೈತರು ನೆಮ್ಮದಿ ಹಾಗೂ ಸ್ವಾಭಿಮಾನದ ಬದುಕು ಸಾಗಿಸಲು ಅವಕಾಶ ಮಾಡಲು ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಇಲ್ಲದಿದ್ದರೆ ನಿಮ್ಮ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸುವ ಶಕ್ತಿ ನನ್ನಲ್ಲಿದೆ ಎಂದ ಅವರು, ನನ್ನ ಅವಧಿಯಲ್ಲಿದ್ದ ಭಾಗ್ಯಲಕ್ಷ್ಮಿ, ಕಿಸಾನ್‌ ಸಮ್ಮಾನ, ನೀರಾವರಿ ಯೋಜನೆಗಳನ್ನು ಯಾಕೆ ನಿಲ್ಲಿಸಿದ್ದೀರಿ, ಉತ್ತರಿಸುವ ತಾಕತ್ತು ನಿಮ್ಮಲ್ಲಿದೆಯಾ ಕಾಂಗ್ರೆಸ್ ನಾಯಕರೇ? ಕಾಂಗ್ರೆಸ್ ಸರ್ಕಾರ ಆರ್ಥಿಕ

ಶಿವಮೊಗ್ಗಕ್ಕೆ ಬಂದಿರುವ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುತ್ತೇನೆ, ದೇಶದಲ್ಲಿ ೪೦-೫೦ ಸೀಟುಗಳನ್ನು ಗೆದ್ದಿರುವ ನೀವು ಪ್ರಧಾನಿ ವಿರುದ್ಧ ಮಾತನಾಡುವ ಯಾವ ನೈತಿಕತೆಯಿದೆ. ನಿಮ್ಮ ಯೋಗ್ಯತೆಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ರಾಜ್ಯದಲ್ಲಿ ಬದಲಾವಣೆ ಕಾಲ ಬೀಸುತ್ತಿದ್ದು ಬೊಮ್ಮಾಯಿ ಅವರು ೨ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲ್ಲಿದ್ದಾರೆ ಎಂದು ಭವಿಷ್ಯ ನುಡಿದರು.

ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ನ ಒಬ್ಬ ಶಾಸಕ ಕಾಂಗ್ರೆಸ್ ಓಟ್ ಹಾಕದಿದ್ದರೆ ಶಾಶ್ವತವಾಗಿ ವಿದ್ಯುತ್ ಕಟ್ ಮಾಡುವದಾಗಿ ಹೇಳಿದ್ದಾನೆ. ವಿದ್ಯುತ್ ಅವರ ಅಪ್ಪನ ಮನೆಯದ್ದಲ್ಲ, ಪ್ರಧಾನಮಂತ್ರಿ ಆಯುಷ್ಯದ ಬಗ್ಗೆ ಮಾತನಾಡಿ ಕೆಳಮಟ್ಟಕ್ಕೆ ಕುಸಿದಿದ್ದಾರೆ. ಹಿಂದುಳಿದ ವರ್ಗಗಳಿಗೆ ನ್ಯಾಯ ನೀಡುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರ ಕೈಗೆ ವರದಿ ಸಿಕ್ಕು ೩ ತಿಂಗಳು ಗತಿಸಿವೆ. ಆದರೆ ವರದಿ ಬಿಡುಗಡೆ ಮಾಡಿಲ್ಲ. ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ರಾಜ್ಯದ ಬರಗಾಲ ಬಂದಿದ್ದರೂ ಸಹ ಕಾಂಗ್ರೆಸ್ ರೈತರಿಗೆ ನಾಯಪೈಸೆ ನೀಡಿಲ್ಲ, ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿದೆ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿದರು.

ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಎಂ.ವೈ.ಮುಧೋಳ, ನಿಂಗಪ್ಪ ಕೆಂಗಾರ, ಮುತ್ತಣ್ಣ ಕಡಗದ, ಕನಕಪ್ಪ ಅರಳಿಗಿಡದ, ಸಿದ್ದಣ್ಣ ಬಳಿಗೇರ, ಬಸವರಾಜ ಬಂಕದ, ಉಮೇಶ ಮಲ್ಲಾಪೂರ, ಬಿ.ಎಂ.ಸಜ್ಜನರ, ಕಾಂತಿಲಾಲ ಬನ್ಸಾಲಿ, ಮುದಿಯಪ್ಪ ಮುಧೋಳ, ಲೀಲಾ ಸವಣೂರ, ಶ್ರೀನಿವಾಸ ಸವದಿ, ಮುತ್ತಣ್ಣ ಚೆಟ್ಟೇರ, ಉಮೇಶ ಚನ್ನುಪಾಟೀಲ, ರಾಜೇಂದ್ರ ಘೋರ್ಪಡೆ ಸೇರಿ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ